ನವದೆಹಲಿ: ವಲಸೆ ಕಾರ್ಮಿಕರನ್ನು ಸಾಗಿಸುವ ಬಸ್ ಮತ್ತು ರೈಲುಗಳನ್ನು ಒದಗಿಸುವ ಸಾರಿಗೆ ನೀತಿಯನ್ನು ಸರಿಯಾಗಿ ವಿನ್ಯಾಸ ಮತ್ತು ಸಮನ್ವಯಗೊಳಿಸಿಲ್ಲ. ಅದು ಕಳಪೆಯಿಂದ ಕೂಡಿದೆ. ಆದರೂ ಜಾರಿಗೊಳಿಸಲಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.
ಲಕ್ಷಾಂತರ ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಒದಗಿಸುವ ನಿರ್ಧಾರ ಕೈಗೊಂಡಿದ್ದೇ ವಿಳಂಬವಾಗಿ. ಅದರಲ್ಲೂ ಕಳಪೆಯಾದ ನೀತಿಯನ್ನೇ ಜಾರಿಗೆ ತಂದಿದ್ದಾರೆ. ಈ ನೀತಿಯಿಂದಾಗಿ ಹಳಿಗಳ ಮೇಲೆ ಮಲಗಿದ್ದ 14 ಕಾರ್ಮಿಕರ ಮೇಲೆ ಮಹಾರಾಷ್ಟ್ರದ ರಂಗಾಬಾದ್‌ನಲ್ಲಿ ರೈಲು ಹರಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
-
It is obvious that the transport policy of providing buses and trains to transport migrant workers was poorly designed, planned, coordinated and implemented.
— P. Chidambaram (@PChidambaram_IN) May 8, 2020 " class="align-text-top noRightClick twitterSection" data="
">It is obvious that the transport policy of providing buses and trains to transport migrant workers was poorly designed, planned, coordinated and implemented.
— P. Chidambaram (@PChidambaram_IN) May 8, 2020It is obvious that the transport policy of providing buses and trains to transport migrant workers was poorly designed, planned, coordinated and implemented.
— P. Chidambaram (@PChidambaram_IN) May 8, 2020
ಸಾರಿಗೆ ನೀತಿಯನ್ನು ಸರಿಯಾಗಿ ಯೋಜಿಸದೆ, ಸಮನ್ವಯಗೊಳಿಸದೆ ಕಾರ್ಯ ರೂಪಕ್ಕೆ ತರಲಾಗಿದೆ. ಇದೊಂದು ಹತಾಶೆಯ ಭಾಗ. ಅಲ್ಲದೆ, ಕಾರ್ಮಿಕರಿಗೆ ಯಾವುದೇ ರೀತಿ ರಕ್ಷಣೆ ಒದಗಿಸಿಲ್ಲ. ಅದರ ಪರಿಣಾಮವೇ ಇಂದು ಬೆಳಗ್ಗೆ ದುರಂತ ಸಂಭವಿಸಲು ಕಾರಣ ಎಂದು ಕಿಡಿಕಾರಿದರು.