ಕೋಟಪಲ್ಲಿ ಮಂಡಳ(ತೆಲಂಗಾಣ): ಭಾರಿ ಮಳೆ ಹಿನ್ನೆಲೆಯಲ್ಲಿ ತೆಲಂಗಾಣದ ಕೆಲ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ವರುಣನ ಅಬ್ಬರ ಜೋರಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
![RainPolicemen took a pregnant woman](https://etvbharatimages.akamaized.net/etvbharat/prod-images/8445821_538_8445821_1597628014140.png)
ಕೋಟಪಲ್ಲಿಯಲ್ಲಿ ಹಳ್ಳ ತುಂಬಿ ಹರಿದಿದ್ದರಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳು ಬಂದ್ ಆಗಿದ್ದವು. ಇದೇ ಸಂದರ್ಭದಲ್ಲಿ ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಅಲ್ಲಿನ ಪೊಲೀಸರು ತಕ್ಷಣ ಗರ್ಭಿಣಿ ನೆರವಿಗೆ ಧಾವಿಸಿದ್ದಾರೆ. ಮಹಿಳೆಯನ್ನ ಟ್ರ್ಯಾಕ್ಟರ್ನಲ್ಲಿ ಚೆನ್ನೂರಿನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಈ ದೃಶ್ಯಗಳು ಈಗ ವೈರಲ್ ಆಗಿವೆ.