ETV Bharat / bharat

ಅಪ್ರಾಪ್ತೆಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ: ಮೂವರ ಬಂಧನ - Gang rape on minor girl in Betul of MP

ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಮಧ್ಯಪ್ರದೇಶದ ಬೆತುಲ್​ನಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Police arrested  Betul Gang rape accused
ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
author img

By

Published : Aug 7, 2020, 3:33 PM IST

ಬೆತುಲ್ (ಮಧ್ಯಪ್ರದೇಶ): ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರು ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಈ ಪೈಕಿ ಮೂವರನ್ನು ಅರೆಸ್ಟ್ ಮಾಡಿದ್ದಾರೆ.

ಕೊಟ್ವಾಲಿ ಪೊಲೀಸ್​ ಠಾಣೆ ವ್ಯಾಪ್ತಿಯ ಶಾಸ್ತ್ರಿ ವಾರ್ಡ್‌ ನಿವಾಸಿ 14 ವರ್ಷದ ಬಾಲಕಿ ಆಗಸ್ಟ್ 3 ರಂದು ರಾತ್ರಿ 11: 30 ರ ಸುಮಾರಿಗೆ ಮನೆಯಿಂದ ಕಾಣೆಯಾಗಿದ್ದಳು. ಘಟನೆಯ ಬಳಿಕ ತೀವ್ರ ಆತಂಕಕ್ಕೊಳಗಾದ ಮನೆಯವರು ಮರುದಿನ ಬೆಳಗ್ಗೆ ಕೊಟ್ವಾಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಗಾಗಿ ಹುಡುಕಾಟ ನಡೆಸಿದ್ದರು. ಆಗಸ್ಟ್​ 5 ರಂದು ಬಾಲಕಿ ಮನೆಗೆ ಬಂದಿದ್ದಳು.

ಮೊದಲ ದೃಶ್ಯ ಪ್ರಕರಣ ನಡೆದ ಸ್ಥಳ ಹಾಗು ಪೊಲೀಸ್‌ ಠಾಣೆಯದ್ದಾಗಿದ್ದು, ಎರಡನೇ ವಿಡಿಯೊದಲ್ಲಿ ಪೊಲೀಸ್‌ ಅಧಿಕಾರಿ ಘಟನೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಪ್ರಕರಣದ ವಿವರ:

ಆಗಸ್ಟ್ 3 ರಂದು ನಾಪತ್ತೆಯಾದ ಬಾಲಕಿ ಅಂದು ರಾತ್ರಿ ಪರಿಚಯಸ್ಥರ ಮನೆಯಲ್ಲಿದ್ದಳು. ಆಗಸ್ಟ್ 4 ರಂದು ಹಗಲು ಹೊತ್ತು ನಗರದಲ್ಲಿ ಸುತ್ತಾಡಿದ್ದಾಳೆ. ಅಂದು ರಾತ್ರಿ ನಗರದ ರೈಲ್ವೇ ಸೇತುವೆ ಕೆಳಗೆ ಮತ್ತು ಸದರ್ ಪ್ರದೇಶದ ಗುಡಿಸಲಿನಲ್ಲಿ ಆಕೆಯ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ್ದರು ಎಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.

ಆರೋಪಿಗಳ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನುಳಿದವರಿಗಾಗಿ ಬಲೆ ಬೀಸಿದ್ದಾರೆ.

ಬಾಲಕಿಗೆ ಮದ್ಯ ಕುಡಿಸಿ ಹೇಯ ಕೃತ್ಯ:

ಅತ್ಯಾಚಾರ ನಡೆಸುವ ಮೊದಲು ಆರೋಪಿಗಳು ಬಾಲಕಿಗೆ ಮದ್ಯ ಕುಡಿಸಿರುವ ವಿಚಾರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ನಗರದ ಜನನಿಬಿಡ ಪ್ರದೇಶದಲ್ಲೇ ಇಂತಹ ಹೇಯ ಕೃತ್ಯ ನಡೆದಿರುವ ಬಗ್ಗೆ ಅಲ್ಲಿನ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.