ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ ಎಂದು ಕರೆಯಲ್ಪಡುವ ಪಿಒಕೆ ಇದೀಗ ಭಯೋತ್ಪಾದಕ ನಿಯಂತ್ರಣದ ಕಾಶ್ಮೀರವಾಗಿದೆ ಅದರ ಮೇಲೆ ಪಾಕ್ನ ನಿಯಂತ್ರಣ ಇಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ನವದೆಹಲಿಯಲ್ಲಿ ಆಯೋಜನೆಗೊಂಡಿದ್ದ ಸೇನಾ ಕಮಾಂಡರ್ಗಳ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪಾಕ್ ಆಕ್ರಮಿತ ಕಾಶ್ಮೀರ ಇದೀಗ ಅಲ್ಲಿನ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ಬದಲಾಗಿ ಸಂಪೂರ್ಣವಾಗಿ ಭಯೋತ್ಪಾದಕರು ಅದರ ಮೇಲೆ ಹಿಡಿತ ಸಾಧಿಸಿದೆ ಎಂದರು. ಯಾವುದೇ ಕಾರಣಕ್ಕೂ ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನದ್ದಲ್ಲ ಅದು ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ ಎಂದು ಹೇಳಿದ್ದಾರೆ.
ಜಮ್ಮು-ಕಾಶ್ಮೀರ ಎಂದಾಕ್ಷಣ ಸಂಪೂರ್ಣವಾಗಿ ಪಿಒಕೆ ಹಾಗೂ ಗಿಲ್ಗಿಟ್ ಬಲ್ಟಿಸ್ಥಾನ್ ಕೂಡ ಅದರೊಳಗೆ ಇದೆ ಎಂದಿದ್ದು, ಆದರೆ ಈ ಪ್ರದೇಶಗಳನ್ನ ಪಾಕ್ ಅಕ್ರಮವಾಗಿ ವಶಪಡಿಸಿಕೊಂಡಿವೆ ಎಂದರು.
ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ಧು ಮಾಡುತ್ತಿದ್ದಂತೆ ಪಾಕಿಸ್ತಾನ ವಿರೋಧ ಮಾಡಲು ಈ ಪ್ರದೇಶ ಅವರ ಹಿಡಿತದಲ್ಲಿರುವುದೇ ಕಾರಣ ಎಂದ ರಾವತ್, ಈ ವರ್ಷದ ಅಂತ್ಯದ ವೇಳೆಗೆ ವಿಶ್ವದ ಅತ್ಯುತ್ತಮ ರೈಫಲ್ ಸಿಗ್ ಸೌರ್ ಭಾರತೀಯ ಸೇನೆಗೆ ಸಿಗಲಿದೆ ಎಂದು ಭರವಸೆ ನೀಡಿದರು.