ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಪ್ರವಾಸದ ಎರಡನೇ ದಿನದಂದು ಮಾಜಿ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 145ನೇ ಜನ್ಮ ದಿನಾಚರಣೆಯಂದು ಗೌರವ ಸಲ್ಲಿಸಲಿದ್ದಾರೆ.
ಸರ್ದಾರ್ ವಲ್ಲಭಭಾಯ್ ಪಟೇಲ್ ಏಕತಾ ಪ್ರತಿಮೆ ಮತ್ತು ಸಬರಮತಿ ನದಿಯ ಮಧ್ಯೆ ಭಾರತದ ಮೊದಲ ಸೀಪ್ಲೇನ್ ಸೇವೆಯನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಈ ವಿಮಾನ ಸಬರಮತಿ ನದಿಯಿಂದ ಕೆವಾಡಿಯಾದ ಬಳಿಯಿರುವ ಏಕತಾ ಪ್ರತಿಮೆಯ ಬಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಆಂತರಿಕ ಸಂಚಾರಿ ವಿಮಾನವಾಗಿ ಬಳಕೆಯಾಗಲಿದೆ.
ಗುಜರಾತ್‌ನಲ್ಲಿ ತಮ್ಮ ಮೊದಲ ದಿನದ ಪ್ರವಾಸದಂದು ಆರೋಗ್ಯ ವ್ಯಾನ್, ಏಕ್ತಾ ಮಾಲ್, ಚಿಲ್ಡ್ರನ್ ನ್ಯೂಟ್ರಿಷನ್ ಪಾರ್ಕ್, ಸರ್ದಾರ್ ಪಟೇಲ್ ಜಿಯೋಲಾಜಿಕಲ್ ಪಾರ್ಕ್ ಅಥವಾ ಜಂಗಲ್ ಸಫಾರಿ ಸೇರಿದಂತೆ 17 ಹೊಸ ಯೋಜನೆಗಳನ್ನು ಉದ್ಘಾಟಿಸಿದರು.