ETV Bharat / bharat

''ಸಂಸತ್ ಅಧಿವೇಶನದಲ್ಲಿ ಚೀನಾ- ಭಾರತದ ಗಡಿ ಸಮಸ್ಯೆ ಬಗ್ಗೆ ಪ್ರಧಾನಿ ವಿವರಿಸಲೇಬೇಕು''

author img

By

Published : Sep 13, 2020, 7:24 PM IST

Updated : Sep 14, 2020, 6:29 AM IST

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಧಾನಿ ಮೋದಿ ಚೀನಾ - ಭಾರತದ ಗಡಿ ಸಮಸ್ಯೆಗೆ ಉತ್ತರಿಸಬೇಕೆಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.

Jairam Ramesh
ಜೈರಾಮ್ ರಮೇಶ್

ನವದೆಹಲಿ: ಪ್ರಧಾನಿ ಮೋದಿ ಸಂಸತ್​ ಅಧಿವೇಶನದಲ್ಲಿ ಭಾಗಿಯಾಗಿ ಭಾರತ, ಚೀನಾ ಗಡಿಯಲ್ಲಿ ಪ್ರಸ್ತುತ ಇರುವ ಸ್ಥಿತಿಗತಿಗಳ ಬಗ್ಗೆ ಚರ್ಚೆ ಮಾಡಬೇಕೆಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜೈರಾಮ್​ ರಮೇಶ್ ಒತ್ತಾಯಿಸಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಪ್ರಧಾನಿ ಮೋದಿ ಚೀನಾ ಸೇನೆ ಭಾರತದ ಯಾವುದೇ ಭಾಗವನ್ನು ಆಕ್ರಮಿಸಿಕೊಂಡಿಲ್ಲ ಎಂದು ಹೇಳಿ ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಜೈರಾಮ್ ರಮೇಶ್ ಮೋದಿ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇದರ ಜೊತೆಗೆ ಪ್ರಧಾನಿ ಮೋದಿ ಎಲ್ಲದಕ್ಕೂ ಉತ್ತರ ನೀಡಬೇಕು. ಅಧಿವೇಶನ ಚರ್ಚೆಗೆ ಅವಕಾಶ ನೀಡುತ್ತಿದ್ದು, ಪಲಾಯನ ಮಾಡುವುದಕ್ಕಲ್ಲ ಎಂದು ಆಗ್ರಹಿಸಿದ್ದಾರೆ.

ಚೀನಾ ಸಂಬಂಧವಾಗಿ ಚರ್ಚಿಸಲು ಏನೂ ಇಲ್ಲ ಎಂಬ ಹೇಳಿಕೆ ಹಾಸ್ಯಾಸ್ಪದವಾಗಿದೆ. ನಮಗೆ ಚೀನಾ ಸಂಬಂಧಿತ ಚರ್ಚೆ ಅನಿವಾರ್ಯವಾಗಿದೆ. ಪ್ರಧಾನಿ ಮೋದಿಯವರ ಹೇಳಿಕೆಯಿಂದ ನಮಗೆ ಅತಿ ದೊಡ್ಡ ಹಾನಿ ಜರುಗಿದೆ ಜೈರಾಮ್​ ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

1962ರ ಇಂಡೋ- ಚೀನಾ ಯುದ್ಧದ ನಂತರ ಅಂದಿನ ಪ್ರಧಾನಿ ಜವಹರಲಾಲ್ ನೆಹರು ಯುದ್ಧದ ವಿಷಯವನ್ನು ಪಾರ್ಲಿಮೆಂಟ್​ನಲ್ಲಿ ಚರ್ಚೆ ನಡೆಸಿದ್ದರು. ಈ ವೇಳೆ ಅಟಲ್​ ಬಿಹಾರಿ ವಾಜಪೇಯಿ ಸೇರಿ ಹಲವರಿಂದ ಟೀಕೆಗಳನ್ನು ಎದುರಿಸಿದ್ದರು ಎಂದು ಜೈರಾಮ್​ ರಮೇಶ್ ಉಲ್ಲೇಖಿಸಿದ್ದಾರೆ. ​

ಪಿಎಂ ಕೇರ್ಸ್​ ನಿಧಿ ಬಗ್ಗೆ ನಮ್ಮ ವಿರೋಧವಿದೆ. ಇದು ಪಾರದರ್ಶಕವಾಗಿಲ್ಲ. ಮಾಹಿತಿ ಹಕ್ಕು ಕಾಯ್ದೆಯೂ ಕೂಡಾ ಇದಕ್ಕೆ ಒಳಪಡುವುದಿಲ್ಲ. ತುಂಬಾ ಉದ್ಯಮಿಗಳು ಈ ನಿಧಿಗೆ ಹಣ ನೀಡುತ್ತಿದ್ದು ಕೆಲವು ಚೀನಾ ಉದ್ಯಮಗಳಿಗೂ ಬಳಕೆಯಾಗುತ್ತಿವೆ. ಪಿಎಂ ಕೇರ್ಸ್ ನಿಧಿ ಪಾರದರ್ಶಕವಾಗಿರಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಜೈರಾಮ್ ರಮೇಶ್ ವಿಶ್ವಾಸ ವ್ಯಕ್ತಪಡಿಸಿದರು.

Last Updated : Sep 14, 2020, 6:29 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.