ETV Bharat / bharat

ವಿಶ್ವಸಂಸ್ಥೆಯಲ್ಲಿ ಬದಲಾವಣೆ ಅನಿವಾರ್ಯ, ವಿಶ್ವ ಕಲ್ಯಾಣಕ್ಕಾಗಿ ಭಾರತ ಸದಾ ಕೈಜೋಡಿಸ್ತಿದೆ: ನಮೋ ಖಡಕ್​​ ಭಾಷಣ - ವಿಶ್ವಸಂಸ್ಥೆಯ 74ನೇ ಮಹಾಧಿವೇಶವನ

ಈ ಹಿಂದೆ ಯಾವ ಉದ್ದೇಶವನ್ನಿಟ್ಟುಕೊಂಡು ವಿಶ್ವಸಂಸ್ಥೆ ನಿರ್ಮಾಣ ಮಾಡಲಾಗಿದೋ ಆ ಎಲ್ಲ ಉದ್ದೇಶ ಭಾರತ ಪಾಲಿಸಿಕೊಂಡು ಬರುತ್ತಿದೆ. ಆದರೂ ನಮ್ಮನ್ನ ಹೊರಗಿಡಲು ಕಾರಣ ಏನು ಎಂದು ಪ್ರಶ್ನೆ ಮಾಡಿದ್ದಾರೆ.

Prime Minister Narendra Modi at UNGA
Prime Minister Narendra Modi at UNGA
author img

By

Published : Sep 26, 2020, 7:45 PM IST

ನವದೆಹಲಿ: ವಿಶ್ವಸಂಸ್ಥೆ ಆಗಿನ ಪರಿಸ್ಥಿತಿಗೆ ಅನುಗುಣವಾಗಿ ನಿರ್ಮಾಣವಾಗಿದ್ದು, ಇದೀಗ ಅದರಲ್ಲಿ ಬದಲಾವಣೆ ಆಗಬೇಕಾದ ಅನಿವಾರ್ಯತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಸಂಸ್ಥೆಯ 74ನೇ ಮಹಾಧಿವೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ವಿಶ್ವಸಂಸ್ಥೆ ಸ್ಥಾಪಕ ಸದಸ್ಯರಲ್ಲಿ ಭಾರತ ಒಂದು ಎಂಬುದು ಹೆಮ್ಮೆಯ ವಿಷಯ. ಈ ಐತಿಹಾಸಿಕ ಸಂದರ್ಭದಲ್ಲಿ 1.3 ಶತಕೋಟಿ ಭಾರತೀಯರ ಭಾವನೆ ಹಂಚಿಕೊಳ್ಳಲು ನಾನು ಈ ಜಾಗತಿಕ ವೇದಿಕೆಗೆ ಬಂದಿದ್ದೇನೆ ಎಂದ ನಮೋ, 130 ಕೋಟಿ ಭಾರತೀಯರ ಪರ ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳಿಗೆ ಅಭಿನಂದನೆ ಸಲ್ಲಿಕೆ ಮಾಡಿದರು. ನಮ್ಮೆಲ್ಲರಿಗೂ ಇದು ಐತಿಹಾಸಿಕ ಕ್ಷಣಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು

ವಿಶ್ವಸಂಸ್ಥೆಯಲ್ಲಿ ನಮೋ ಮಾತು

ಕಳೆದ 75 ವರ್ಷಗಳಲ್ಲಿ ವಿಶ್ವಸಂಸ್ಥೆ ಕಾರ್ಯಕ್ಷಮತೆ ಬಗ್ಗೆ ನಾವು ಮೌಲ್ಯಮಾಪನ ಮಾಡಿದ್ರೆ ಹಲವಾರು ಸಾಧನೆ ಮಾಡಿದೆ. ಆದರೆ, ಅದೇ ಸಮಯದಲ್ಲಿ ವಿಶ್ವಸಂಸ್ಥೆ ಕೆಲಸದ ಬಗ್ಗೆ ಗಂಭೀರವಾದ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಕಳೆದ 8-9 ತಿಂಗಳಿಂದ ಪ್ರಪಂಚದಲ್ಲಿ ಕೊರೊನಾ ಸಂಘರ್ಷ ನಡೆಯುತ್ತಿದೆ. ಕೊರೊನ ಹೋರಾಟದಲ್ಲಿ ಎಲ್ಲ ದೇಶಗಳ ಪಾತ್ರ ಪ್ರಮುಖವಾಗಿದೆ. ಸಾಂಕ್ರಾಮಿಕ ರೋಗದ ವಿರುದ್ಧದ ಜಂಟಿ ಹೋರಾಟದಲ್ಲಿ ವಿಶ್ವಸಂಸ್ಥೆ ಎಲ್ಲಿದೆ? ಅದರ ಪರಿಣಾಮಕಾರಿ ಪ್ರತಿಕ್ರಿಯೆ ಏನು? ಎಂದು ನಮೋ ಪ್ರಶ್ನೆ ಮಾಡಿದರು.

ನಮ್ಮ ಮುಂದೆ ಬೇರೆ ಬೇರೆ ಸವಾಲುಗಳಿವೆ. ನಮ್ಮ ಅವಶ್ಯಕತೆ, ಸವಾಲುಗಳೆಲ್ಲವೂ ಹೊಸತು. ಹೀಗಾಗಿ ವಿಶ್ವಸಂಸ್ಥೆಯ ಸ್ವರೂಪ ಬದಲಾಗಬೇಕಾಗಿದ್ದು, ಸುಧಾರಣೆ ಅಗತ್ಯವಾಗಿದೆ ಎಂದು ನಮೋ ಹೇಳಿದರು. ಬದಲಾವಣೆಗಾಗಿ ನಾವು ಎಲ್ಲಿಯವರೆಗೆ ಕಾಯಬೇಕು ಎಂದು ಇದೇ ವೇಳೆ ಪ್ರಶ್ನೆ ಮಾಡಿದರು. ಭಾರತಕ್ಕೆ ವಿಶ್ವಸಂಸ್ಥೆ ಮೇಲೆ ನಂಬಿಕೆ ಇದೆ. ನಂಬಿಕೆ ಇರುವ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂದು ತಿಳಿಸಿದರು.

ಮೂರನೇ ಮಹಾಯುದ್ಧ ಆಗಿಲ್ಲ. ಆದರೆ ಅನೇಕ ಯುದ್ಧಗಳು ನಡೆದು, ಅನೇಕ ಅಮಾಯಕರು ಸಾವನ್ನಪ್ಪಿದ್ದಾರೆ. ಭಾರತವು ಅಂತಹ ದೇಶಗಳಲ್ಲಿ ಒಂದಾಗಿದ್ದು, ಗರಿಷ್ಠ ಸಂಖ್ಯೆಯ ಸೈನಿಕರನ್ನ ಕಳೆದುಕೊಂಡಿದೆ. ಆದರೆ ವಿಶ್ವಸಂಸ್ಥೆ ಇದಕ್ಕಾಗಿ ತೆಗೆದುಕೊಂಡಿರುವ ಕ್ರಮಗಳೇನು ಎಂದು ಪ್ರಶ್ನಿಸಿದರು. ವಿಶ್ವಸಂಸ್ಥೆಯಿಂದ ಭಾರತ ಹೊರಗಿಡಲು ಕಾರಣವೇನು? ಇಡೀ ವಿಶ್ವವನ್ನೇ ಒಂದು ಕುಟುಂಬ ಎಂದು ಹೇಳಲಾಗುತ್ತದೆ. ಜಾಗತಿಕ ಶಾಂತಿಗಾಗಿ ಭಾರತ ಶ್ರಮಿಸುತ್ತಿದೆ. ಮಾನವ ಕಲ್ಯಾಣವೇ ನಮ್ಮ ಮೊದಲ ಆದ್ಯತೆಯಾಗಿದೆ. ಶಾಂತಿ, ಅಹಿಂಸೆ ಪಾಲಿಸುವವರು ನಾವು. ಇಡೀ ಮನಕುಲದ ಹಿತಕ್ಕಾಗಿ ಶ್ರಮಿಸಿದ್ದೇವೆ ಎಂದರು.

ಇಡೀ ವಿಶ್ವಕ್ಕೆ ಕೊರೊನಾ ಲಸಿಕೆ ತಯಾರಿಸುವ ಸಾಮರ್ಥ್ಯ ಭಾರತದಲ್ಲಿದೆ. ಕೊರೊನಾ ಕಾಲದಲ್ಲಿ 150 ರಾಷ್ಟ್ರಗಳಿಗೆ ನೆರವು ನೀಡಿದ್ದೇವೆ. ಫಾರ್ಮಾ ಇಂಡಸ್ಟ್ರೀಗಳ ಮೂಲಕ ನಾವು ಸಹಾಯ ಮಾಡಿದ್ದು, ಕೊರೊನಾ ವಿರುದ್ಧದ ಕಂಡು ಹಿಡಿಯಲಾಗುತ್ತಿರುವ ಮೂರು ಲಸಿಕೆಗಳು ಕೊನೆಯ ಹಂತದಲ್ಲಿವೆ ಎಂದು ನಮೋ ತಿಳಿಸಿದರು. ಶಾಂತಿ, ಸುರಕ್ಷೆ, ಸಮೃದ್ಧಿಗಾಗಿ ಭಾರತ ಸದಾ ಬದ್ಧವಾಗಿದ್ದು, ಭಯೋತ್ಪಾದನೆ ಹಾಗೂ ಕಪ್ಪು ಹಣದ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು. ಕೊರೊನಾ ಸಂದರ್ಭದಲ್ಲಿ ಭಾರತ ಆರ್ಥಿಕ ಸುಧಾರಣೆ ಕ್ರಮ ಕೈಗೊಂಡಿದ್ದು, 150ಕ್ಕೂ ಹೆಚ್ಚು ದೇಶಗಳಿಗೆ ಸೂಕ್ತ ಔಷಧ ಪೂರೈಸಿದ್ದೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.