ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕೋಲ್ಕತ್ತಾ ಭೇಟಿಯ ಫೋಟೋವೊಂದು 24 ಗಂಟೆಗಳೊಳಗೆ ಫೇಸ್‌ಬುಕ್‌ನಲ್ಲಿ ಒಂದು ಮಿಲಿಯನ್‌ಗೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನದ ನಿಮಿತ್ತ ಪಶ್ಚಿಮ ಬಂಗಾಳದ ಕೋಲ್ಕತ್ತಾಗೆ ಭೇಟಿ ನೀಡಿದ್ದರು. ಕೋಲ್ಕತ್ತಾಗೆ ಆಗಮಿಸುತ್ತಿದ್ದಂತೆಯೇ ಪ್ರಧಾನಿ, ತಮ್ಮ ಫೇಸ್ಬುಕ್ ಖಾತೆಯಲ್ಲಿ, " ನೇತಾಜಿ ಬೋಸ್ಗೆ ನಮಿಸಲು ಕೋಲ್ಕತ್ತಾ ತಲುಪಿರುವೆ" ಎಂಬ ಶೀರ್ಷಿಕೆಯೊಂದಿಗೆ ಫೋಟೋ ಶೇರ್ ಮಾಡಿದ್ದರು. ಒಂದು ದಿನದೊಳಗೆಯೇ ಈ ಫೋಟೋಗೆ 1.1 ಮಿಲಿಯನ್ ಜನರು ಲೈಕ್ ಕೊಟ್ಟಿದ್ದಾರೆ.
ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು (ಜ.23) ಇನ್ನು ಮುಂದೆ ‘ಪರಾಕ್ರಮ ದಿನ’ವನ್ನಾಗಿ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ. ನಿನ್ನೆ ಕೋಲ್ಕತ್ತಾ ಭೇಟಿಯ ವೇಳೆ ಮೊದಲು ನೇತಾಜಿ ಭವನಕ್ಕೆ ಭೇಟಿ ನೀಡಿದ್ದ ಮೋದಿ, ವಿಕ್ಟೋರಿಯಾ ಸ್ಮಾರಕದಲ್ಲಿ ಆಚರಿಸಲಾದ ‘ಪರಾಕ್ರಮ ದಿನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.