ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ 68ನೇ ಆವೃತ್ತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮನ್ ಕಿ ಬಾತ್ ಆರಂಭಗೊಳ್ಳಲಿದ್ದು, ಪ್ರಧಾನಿ ಈ ಬಗ್ಗೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಈ ಬಾರಿ ಯಾವ ವಿಚಾರದ ಬಗ್ಗೆ ಮಾತನಾಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಏಕೆಂದರೆ 68ನೇ ಆವೃತ್ತಿಗೆ ಜನರು ತಮ್ಮ ಮೌಲ್ಯಯುತವಾದ ಸಲಹೆ, ಯೋಚನೆ ಮತ್ತು ಯೋಜನೆಗಳನ್ನ ಪ್ರಧಾನಿ ಜತೆ ಹಂಚಿಕೊಳ್ಳಬಹುದು. ಜನ ಸಾಮಾನ್ಯರು ತಮ್ಮ ಯೋಚನೆಗಳನ್ನ ಹಂಚಿಕೊಳ್ಳಲು ಪಿಎಂ ಅವಕಾಶ ಮಾಡಿಕೊಟ್ಟಿದ್ದರು. ನಮೋ ಅಥವಾ ಮೈ-ಗವರ್ನ್ಮೆಂಟ್ ಆ್ಯಪ್‌ನಲ್ಲಿ ತಮ್ಮ ಯೋಜನೆ - ಯೋಚನೆ ಹಾಗೂ ಸಲಹೆಗಳನ್ನ ಬರೆಯುವ ಮೂಲಕ ಅಥವಾ 1800-11-7800ಗೆ ಕರೆ ಮಾಡಿ ತಮ್ಮ ಸಂದೇಶಗಳನ್ನು ರೆಕಾರ್ಡ್ ಮಾಡುವ ಮೂಲಕ, ಜನರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಬಹುದು ಎಂದು ಪ್ರಧಾನಿ ಹೇಳಿದ್ದರು.
-
Tune in at 11 AM on 30th August. #MannKiBaat pic.twitter.com/PuaZEqmT78
— Narendra Modi (@narendramodi) August 29, 2020 " class="align-text-top noRightClick twitterSection" data="
">Tune in at 11 AM on 30th August. #MannKiBaat pic.twitter.com/PuaZEqmT78
— Narendra Modi (@narendramodi) August 29, 2020Tune in at 11 AM on 30th August. #MannKiBaat pic.twitter.com/PuaZEqmT78
— Narendra Modi (@narendramodi) August 29, 2020
ಈ ಹಿಂದಿನ 'ಮನ್ ಕಿ ಬಾತ್'ನ 67ನೇ ಆವೃತ್ತಿಯಲ್ಲಿ ಮಾತನಾಡಿದ್ದ ಮೋದಿ, ಕಾರ್ಗಿಲ್ ಯುದ್ದದಲ್ಲಿ ಪಾಕಿಸ್ತಾನವನ್ನು ಮಣಿಸಿದ್ದ ದೇಶದ ವೀರ ಯೋಧರ ಶೌರ್ಯವನ್ನು ಕೊಂಡಾಡಿದ್ದರು. 1999ರ ಜುಲೈ 26 ರಂದು ಭಾರತದ ಕೆಚ್ಚೆದೆಯ ಯೋಧರ ವಿಜಯಕ್ಕೆ ಇಡಿ ಜಗತ್ತೇ ಸಾಕ್ಷಿಯಾಗಿತ್ತು ಎಂದು ಕಾರ್ಗಿಲ್ ವಿಜಯ ದಿವಸವನ್ನು ನೆನಪಿಸಿಕೊಂಡಿದ್ದರು.