ETV Bharat / bharat

ಭುಜ್​ ಭೂಕಂಪದ ಸಂದರ್ಭ ಬೈಕ್​​ನಲ್ಲಿ ಓಡಾಡಿದ್ದ ಮೋದಿ.. ಫೋಟೊ ವೈರಲ್​ - ಭುಜ್ ಭೂಕಂಪ ಸಂದರ್ಭದ ಮೋದಿಯವರ ಪೋಟೊ ವೈರಲ್

ಮೇ 12ರಂದು ಮಾಡಿದ್ದ ಭಾಷಣದಲ್ಲಿ ಆತ್ಮನಿರ್ಭರ ಭಾರತ ಅಭಿಯಾನ ಘೋಷಿಸಿದ ಪ್ರಧಾನಿ, ಕೊರೊನಾವನ್ನು ಸಮರ್ಥವಾಗಿ ಎದುರಿಸಿ ಸ್ವಾವಲಂಭಿ ಭಾರತ ಕಟ್ಟುವ ಬಗ್ಗೆ ಮಾತನಾಡಿದ್ದರು. ಈ ವೇಳೆ ಉದಾಹರಣೆಯಾಗಿ ಭುಜ್​ ಜಿಲ್ಲೆ ಭೂಕಂಪದ ಬಳಿಕ ಹೇಗೆ ಮತ್ತೆ ಎದ್ದು ಬಂದಿತು ಎಂಬುವುದನ್ನು ಪ್ರಸ್ತಾಪಿಸಿದ್ದರು.

PM Modi old picture of Bhuj goes viral as India prepares to enter lockdown 4
ಪ್ರಧಾನಿ ಮೋದಿಯವರ ಹಳೆಯ ಫೋಟೋ ವೈರಲ್
author img

By

Published : May 17, 2020, 9:22 AM IST

ಭುಜ್ (ಗುಜರಾತ್ ): ಮೇ 12 ರಂದು ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದಲ್ಲಿ ಭುಜ್​ ಭೂಕಂಪದ ಬಗ್ಗೆ ಪ್ರಸ್ತಾಪಿಸಿದ್ದರು, ಆ ಬಳಿಕ ಪ್ರಧಾನಿಯವರ ಹಳೆಯ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಭುಜ್​ ಭೂಕಂಪದ ಸಂದರ್ಭದಲ್ಲಿ ಪ್ರಧಾನಿ ಮೋದಿ ಗುಜರಾತ್​ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆ ವೇಳೆ ಅವರನ್ನು ಬೈಕ್​ನಲ್ಲಿ ಕುಳ್ಳಿರಿಸಿಕೊಂಡು ಭೂಕಂಪದಿಂದ ಹಾನಿಗೊಳಗಾಗಿದ್ದ ಭುಜ್‌ನ ಪಡೇಶ್ವರ ಚೌಕ್ ಬಳಿಯ ಮಹಾಳೇಶ್ವರ ಪ್ರದೇಶದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿದ ಫೋಟೋವನ್ನು ಮೋದಿಯವರ ಆಗಿನ ಸಹವರ್ತಿ ಪಂಕಜ್ ಲಾಲ್ ಎಂಬವರು ಬಿಡುಗಡೆ ಮಾಡಿದ್ದು, ಆ ಪೋಟೋ ಈಗ ಎಲ್ಲೆಡೆ ಹರಿದಾಡುತ್ತಿದೆ.

ಮೇ 12ರಂದು ಮಾಡಿದ್ದ ಭಾಷಣದಲ್ಲಿ ಆತ್ಮನಿರ್ಭರ ಭಾರತ ಅಭಿಯಾನ ಘೋಷಿಸಿದ ಪ್ರಧಾನಿ, ಕೊರೊನಾವನ್ನು ಸಮರ್ಥವಾಗಿ ಎದುರಿಸಿ ಸ್ವಾವಲಂಭಿ ಭಾರತ ಕಟ್ಟುವ ಬಗ್ಗೆ ಮಾತನಾಡಿದ್ದರು. ಈ ವೇಳೆ ಉದಾಹರಣೆಯಾಗಿ ಭುಜ್​ ಜಿಲ್ಲೆ ಭೂಕಂಪದ ಬಳಿಕ ಹೇಗೆ ಮತ್ತೆ ಎದ್ದು ಬಂದಿತು ಎಂಬುವುದನ್ನು ಪ್ರಸ್ತಾಪಿಸಿದ್ದರು.

2001 ರಲ್ಲಿ ದೊಡ್ಡ ಮಟ್ಟದ ಭೂಕಂಪಕ್ಕೆ ಒಳಗಾಗಿದ್ದ ಭುಜ್ ಬಳಿಕ ಸ್ವಾಲಂಭಿಯಾಗಿ ಎದ್ದು ಬಂದಿತ್ತು. ಅಲ್ಲದೆ ಇತರ ಜಿಲ್ಲೆಗಳಿಗಿಂತ ವೇಗದಲ್ಲಿ ಅಭಿವೃದ್ದಿಯಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.