ETV Bharat / bharat

ಕೊರೊನಾ ನಂತರ ಮೊದಲ ಬಾರಿಗೆ ತವರು ರಾಜ್ಯಕ್ಕೆ ಪ್ರಧಾನಿ: ಹಲವು ಯೋಜನೆಗಳ ಉದ್ಘಾಟನೆ

author img

By

Published : Oct 30, 2020, 4:17 PM IST

ಕೊರೊನಾ ಮಹಾಮಾರಿಯ ನಂತರ ಮೊದಲ ಬಾರಿಗೆ ಪ್ರಧಾನಿ ಮೋದಿ ತಮ್ಮ ತವರು ರಾಜ್ಯ ಗುಜರಾತ್​ಗೆ ಭೇಟಿ ನೀಡಿದ್ದು, ಮಾಜಿ ಸಿಎಂ ಕೇಶುಭಾಯ್ ಪಟೇಲ್​ ಅವರಿಗೆ ಸಂತಾಪ ಸಲ್ಲಿಸಿದ ಬಳಿಕ ಹಲವು ಯೋಜನೆಗಳನ್ನು ಉದ್ಘಾಟಿಸಿದ್ದಾರೆ.

pm modi in gujrat
ಗುಜರಾತ್​ನಲ್ಲಿ ಪ್ರಧಾನಿ ಮೋದಿ

ಗಾಂಧಿನಗರ (ಗುಜರಾತ್): ಪ್ರಧಾನಿ ಮೋದಿ ಎರಡು ದಿನಗಳ ಭೇಟಿಗಾಗಿ ಗುಜರಾತ್​ಗೆ ಆಗಮಿಸಿದ್ದು, ಇತ್ತೀಚೆಗೆ ನಿಧನರಾದ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಅವರಿಗೆ ಗೌರವ ಸಮರ್ಪಣೆ ಮಾಡುವುದರ ಜೊತೆಗೆ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

  • ಕೊರೊನಾ ನಂತರ ಮೊದಲ ಬಾರಿಗೆ ತಮ್ಮ ತವರು ರಾಜ್ಯಕ್ಕೆ ಮೋದಿ ಬಂದಿದ್ದು, ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದ ಗುಜರಾತ್ ಸಿಎಂ ವಿಜಯ್ ರೂಪಾನಿ ಹಾಗೂ ರಾಜ್ಯಪಾಲ ಆಚಾರ್ಯ ದೇವವ್ರತ ಅವರು ಸ್ವಾಗತಿಸಿದರು.
    ಅಹಮದಾಬಾದ್​ಗೆ ಬಂದಿಳಿದ ಮೋದಿ
  • ಅಹಮದಾಬಾದ್​ನಿಂದ ಗಾಂಧಿನಗರಕ್ಕೆ ಪ್ರಯಾಣ ಬೆಳೆಸಿದ ಅವರು ಗುರುವಾರ ನಿಧರಾಗಿದ್ದ ಗುಜರಾತ್ ಮಾಜಿ ಸಿಎಂ ಕೇಶುಭಾಯ್ ಪಟೇಲ್ ಅವರ ನಿವಾಸಕ್ಕೆ ತೆರಳಿ, ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
    ಕೇಶುಭಾಯ್ ಪಟೇಲ್ ಭಾವಚಿತ್ರಕ್ಕೆ ಪುಷ್ಪನಮನ
  • ಕೇಶುಭಾಯ್ ಪಟೇಲ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಕೆವಾಡಿಯಾಗೆ ಭೇಟಿ ನೀಡಿದ ಮೋದಿ ಅವರು, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆ ಬಳಿಯಿರುವ ಹೊಸದಾಗಿ ನಿರ್ಮಾಣವಾಗಿರುವ ಪ್ರವಾಸಿ ಸ್ಥಳವಾದ 'ಆರೋಗ್ಯ ವನ್' ಅನ್ನು ಉದ್ಘಾಟಿಸಿದರು. ಸುಮಾರು 17 ಎಕರೆ ಇರುವ ಈ ಪ್ರವಾಸಿ ಸ್ಥಳ 380 ಜಾತಿಯ ಐದು ಲಕ್ಷ ಮರಗಳನ್ನು ಹೊಂದಿದೆ. ಈ ಪ್ರವಾಸಿ ಸ್ಥಳದಲ್ಲಿ ಸ್ವಲ್ಪ ಹೊತ್ತು ಮೋದಿ ತಿರುಗಾಡಿದರು.
    ಆರೋಗ್ಯವನ ಉದ್ಘಾಟಿಸಿದ ಮೋದಿ
  • ಆರೋಗ್ಯ ವನದಲ್ಲಿ ತಿರುಗಾಡಿದ ನಂತರ ಅಲ್ಲಿಯೇ ಇರುವ ಕೆಲವೊಂದು ಸ್ಥಳಗಳಿಗೆಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದರು. ಇದಾದ ನಂತರ ಹೊಸದಾಗಿ ಆರಂಭವಾಗಿರುವ ಚಿಲ್ಡ್ರನ್ ನ್ಯೂಟ್ರಿಷನ್ ಪಾರ್ಕ್​ಗೆ ಚಾಲನೆ ನೀಡಿ, ನ್ಯೂಟ್ರಿಷನ್ ಟ್ರೇನ್​ನಲ್ಲಿ ಸ್ವಲ್ಪ ಹೊತ್ತು ಓಡಾಡಿದರು.
    ಚಿಲ್ಡ್ರನ್ ನ್ಯೂಟ್ರಿಷನ್​​ ಪಾರ್ಕ್​​ನಲ್ಲಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.