ನವದೆಹಲಿ: ಸ್ವಚ್ಛ ಭಾರತ್ ಮಿಷನ್ನ ಸಂವಾದಾತ್ಮಕ ಅನುಭವ ಕೇಂದ್ರವಾದ ರಾಷ್ಟ್ರೀಯ ಸ್ವಚ್ಛತಾ ಕೇಂದ್ರ ಉದ್ಘಾಟನೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಇದೇ ವೇಳೆ ಶಾಲಾ ಮಕ್ಕಳೊಂದಿಗೆ ಮಾತುಕತೆ ನಡೆಸಿದರು.
ಮಹಾತ್ಮ ಗಾಂಧೀಜಿಯವರ ಚಂಪಾರಣ್ ಸತ್ಯಾಗ್ರಹದ ಶತಮಾನೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಸ್ವಚ್ಛತ್ತಾ ಕೇಂದ್ರ ಉದ್ಘಾಟನೆ ಮಾಡಿದರು. ರಾಜ್ಘಾಟ್ ಬಳಿಯ ಆರ್ಎಸ್ಕೆ ವೀಕ್ಷಣೆ ಮಾಡಿದ ಬಳಿಕ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ನಮೋ ಸಂವಾದ ನಡೆಸಿದರು.
ಇದಾದ ಬಳಿಕ ಮಾತನಾಡಿದ ಅವರು, ಕಳೆದ ಕೆಲವು ವರ್ಷಗಳಿಂದ ಗಾಂಧೀಜಿಯವರಿಂದ ಪ್ರೇರಿತರಾದ ದೇಶದ ಲಕ್ಷಾಂತರ ಜನರು ಸ್ವಚ್ಛ ಭಾರತ್ ಮಿಷನ್ ಅನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದು, ಇದರಿಂದಲೇ ಕೇವಲ 60 ತಿಂಗಳಲ್ಲಿ 60 ಕೋಟಿ ಜನರಿಗೆ ಶೌಚಾಲಯ ಒದಗಿಸಲು ಸಾಧ್ಯವಾಗಿದೆ ಎಂದಿದ್ದಾರೆ.
-
Delhi: Prime Minister Narendra Modi watching a short video on 'Swachh Bharat Mission' at the Rashtriya Swachhata Kendra.
— ANI (@ANI) August 8, 2020 " class="align-text-top noRightClick twitterSection" data="
Rashtriya Swachhata Kendra is an interactive experience center built to promote 'Swachh Bharat Mission'. pic.twitter.com/KL0r7X5uBk
">Delhi: Prime Minister Narendra Modi watching a short video on 'Swachh Bharat Mission' at the Rashtriya Swachhata Kendra.
— ANI (@ANI) August 8, 2020
Rashtriya Swachhata Kendra is an interactive experience center built to promote 'Swachh Bharat Mission'. pic.twitter.com/KL0r7X5uBkDelhi: Prime Minister Narendra Modi watching a short video on 'Swachh Bharat Mission' at the Rashtriya Swachhata Kendra.
— ANI (@ANI) August 8, 2020
Rashtriya Swachhata Kendra is an interactive experience center built to promote 'Swachh Bharat Mission'. pic.twitter.com/KL0r7X5uBk
ಕೊರೊನಾ ವೈರಸ್ನಂತಹ ಸಾಂಕ್ರಾಮಿಕ ರೋಗ 2014ಕ್ಕಿಂತಲೂ ಮೊದಲು ದೇಶದಲ್ಲಿ ಭುಗಿಲೆದ್ದಿದ್ದರೆ ಏನಾಗಬಹುದೆಂದು ನೀವೇ ಊಹಿಸಿ. ಆ ವೇಳೆ ಜನರು ಮಲ,ವಿಸರ್ಜನೆ ಮಾಡಲು ಹೊರ ಹೋಗುವ ಅನಿವಾರ್ಯವಿತ್ತು. ಆ ಸಮಯದಲ್ಲಿ ಲಾಕ್ಡೌನ್ ವಿಧಿಸಬಹುದಿತ್ತೇ? ಎಂದಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಸ್ವಚ್ಛ ಭಾರತ ಕೊರೊನಾ ವಿರುದ್ಧದ ಹೋರಾಟದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ ಎಂದರು.