ನವದೆಹಲಿ : ಕೋವಿಡ್ ಬಿಕ್ಕಟ್ಟು ಕುರಿತಂತೆ ಫಿಲಿಪ್ಪಿನ್ಸ್ ಅಧ್ಯಕ್ಷ ರೊಡ್ರಿಗೋ ಡುಟರ್ಟೆ ಜೊತೆ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಇಡೀ ಮಾನವ ಜಗತ್ತಿನ ಹಿತದಷ್ಟಿಯಿಂದ ಕೈಗೆಟುಕುವ ದರಕ್ಕೆ ಔಷಧೀಯ ಉತ್ಪನ್ನಗಳು ದೊರೆಯುವಂತಾಗಲು ಭಾರತ ಕ್ರಮಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.
ಕೋವಿಡ್ ನಿಯಂತ್ರಿಸಲು ಉಭಯ ದೇಶಗಳು ಕೈಗೊಂಡ ಕ್ರಮಗಳ ಬಗ್ಗೆ ನಾಯಕರು ಚರ್ಚೆ ನಡೆಸಿದರು. ಈ ವೇಳೆ, ಭಾರತ ತಮ್ಮ ದೇಶಕ್ಕೆ ಔಷಧೀಯ ಉತ್ಪನ್ನಗಳನ್ನು ಪೂರೈಸಲು ಕೈಗೊಂಡ ಕ್ರಮಗಳ ಬಗ್ಗೆ ಫಿಲಿಪ್ಪಿನ್ಸ್ ಅಧ್ಯಕ್ಷ ಶ್ಲಾಘನೆ ವ್ಯಕ್ತಪಡಿಸಿದರು. ಕೋವಿಡ್ ಹೋರಾಟದಲ್ಲಿ ಫಿಲಿಪ್ಪಿನ್ಸ್ಗೆ ಬೆಂಬಲ ನೀಡುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದರು.
ಅಲ್ಲದೇ ಕೋವಿಡ್ ಸಂದರ್ಭದಲ್ಲಿ ಎರಡು ದೇಶಗಳಲ್ಲಿ ಬಾಕಿಯಾದ ತಮ್ಮ ತಮ್ಮ ನಾಗರಿಕರನ್ನುಕರೆಯಿಸಿಕೊಳ್ಳಲು ಸರ್ಕಾರಗಳು ಕೈಗೊಂಡ ಕ್ರಮಗಳ ಬಗ್ಗೆ ಉಭಯ ನಾಯಕರು ಪರಸ್ಪರ ಶ್ಲಾಘನೆ ವ್ಯಕ್ತಪಡಿಸಿದರು.