ನವದೆಹಲಿ: ಆಗಸ್ಟ್ 12ರಂದು ಪ್ರಸಾರವಾದ ಪ್ರಧಾನಿ ಮೋದಿ ಭಾಗವಹಿಸಿದ್ದ ಖ್ಯಾತ ಇಂಗ್ಲಿಷ್ ಟಿವಿ ಶೋ 'ಮ್ಯಾನ್ ವರ್ಸಸ್ ವೈಲ್ಡ್' ಭಾರಿ ಸುದ್ದಿ ಮಾಡಿತ್ತು.
ಉತ್ತರಾಖಂಡ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ನಲ್ಲಿ ಚಿತ್ರೀಕರಣವಾಗಿದ್ದ ಈ ಶೋನಲ್ಲಿ ಮೋದಿ ಬಹುತೇಕ ಹಿಂದಿಯಲ್ಲೇ ಶೋದ ನಿರೂಪಕ ಬೇರ್ ಗ್ರಿಲ್ಸ್ ಜೊತೆಗೆ ಸಂಭಾಷಣೆ ನಡೆಸಿದ್ದರು.
ಮೋದಿ ಹಾಗೂ ಬೇರ್ ಗ್ರಿಲ್ಸ್ ಈ ಸಂಭಾಷಣೆ ನೋಡುಗರಿಗೆ ಅಚ್ಚರಿ ಜೊತೆಗೆ ಕುತೂಹಲವೂ ಮೂಡಿಸಿತ್ತು. ಬ್ರಿಟನ್ ಮೂಲದ ಬೇರ್ ಗ್ರಿಲ್ಸ್ಗೆ ಹಿಂದಿ ಭಾಷೆ ಅರ್ಥವಾಗುತ್ತದೆಯೇ ಎನ್ನುವ ಪ್ರಶ್ನೆಯನ್ನು ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಎತ್ತಿದ್ದರು. ಸದ್ಯ ಈ ಪ್ರಶ್ನೆ ಮೋದಿಗೂ ತಲುಪಿದ್ದು, ಈ ವಿಚಾರಕ್ಕೆ ತಮ್ಮ 'ಮನ್ ಕಿ ಬಾತ್'ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
-
PM Modi: A lot of people wanted to know how Bear Grylls understood my Hindi. People asked whether it was edited or shot multiple times. Technology acted as bridge between me & him. A cordless device attached to his ear translated Hindi into English simultaneously. pic.twitter.com/yE0iSwQOUW
— ANI (@ANI) August 25, 2019 " class="align-text-top noRightClick twitterSection" data="
">PM Modi: A lot of people wanted to know how Bear Grylls understood my Hindi. People asked whether it was edited or shot multiple times. Technology acted as bridge between me & him. A cordless device attached to his ear translated Hindi into English simultaneously. pic.twitter.com/yE0iSwQOUW
— ANI (@ANI) August 25, 2019PM Modi: A lot of people wanted to know how Bear Grylls understood my Hindi. People asked whether it was edited or shot multiple times. Technology acted as bridge between me & him. A cordless device attached to his ear translated Hindi into English simultaneously. pic.twitter.com/yE0iSwQOUW
— ANI (@ANI) August 25, 2019
ಬೇರ್ ಗ್ರಿಲ್ಸ್ಗೆ ಹಿಂದಿ ಅರ್ಥವಾಗುತ್ತದೆಯೇ ಎನ್ನುವುದನ್ನು ಹಲವರು ನನ್ನ ಬಳಿ ಕೇಳಿದರು. ಇದು ಎಡಿಟೆಡ್ ದೃಶ್ಯಗಳೇ ಅಥವಾ ಹಲವಾರು ಬಾರಿ ಶೂಟ್ ಮಾಡಲಾಗಿದೆಯೇ ಎನ್ನುವ ಪ್ರಶ್ನೆ ನನ್ ಮುಂದಿಟ್ಟಿದ್ದರು. ಆದರೆ ಟೆಕ್ನಾಲಜಿ ನಮ್ಮಿಬ್ಬರ ಮಧ್ಯೆ ಸೇತುವೆಯಾಗಿ ಕಾರ್ಯ ನಿರ್ವಹಿಸಿದೆ ಎಂದು ಮೋದಿ ಹೇಳಿದ್ದಾರೆ.
ಪ್ರಪಂಚದಲ್ಲೇ ಅತೀ ಹೆಚ್ಚು ಜನ ವೀಕ್ಷಿಸಿದ ಕೀರ್ತಿಗೆ ಪಾತ್ರವಾಯ್ತು ಡಿಸ್ಕವರಿಯ ಮೋದಿ ಎಪಿಸೋಡ್
ಕಾರ್ಡ್ಲೆಸ್ ಸಾಧನವೊಂದನ್ನು ಬೇರ್ ಗ್ರಿಲ್ಸ್ ತಮ್ಮ ಕಿವಿಗೆ ಸಿಕ್ಕಿಸಿಕೊಂಡಿದ್ದರು. ಈ ಸಾಧನವು ಹಿಂದಿ ಪದಗಳನ್ನು ತಕ್ಷಣವೇ ಇಂಗ್ಲಿಷ್ಗೆ ಬಾಷಾಂತರಿಸುತ್ತಿತ್ತು ಎಂದು ಮೋದಿ ಎಲ್ಲ ಪ್ರಶ್ನೆಗೆ ಉತ್ತರ ನೀಡಿದ್ದಾರೆ.