ಲೇಹ್ ಪ್ರದೇಶದಲ್ಲಿ ಸೈನಿಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ಲಡಾಖ್ಗೆ ಪಿಎಂ ಮೋದಿ, ಬಿಪಿನ್ ರಾವತ್ ಅಚ್ಚರಿ ಭೇಟಿ - ಸೇನಾ ಸನ್ನದ್ಧತೆಯ ಪರಿಶೀಲನೆ
https://aajtak.intoday.in/story/pm-narendra-modi-in-leh-ladakh-indian-army-china-border-clash-updates-1-1206615.html
13:08 July 03
ಸೈನಿಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ
11:53 July 03
ಲೇಹ್ ಪ್ರದೇಶಕ್ಕೆ ಬಂದಿಳಿದ ಪ್ರಧಾನಿ ಮೋದಿಗೆ ಸೇನಾಧಿಕಾರಿಗಳಿಂದ ಮಾಹಿತಿ
ಭಾರತ - ಚೀನಾ ಗಡಿಯಲ್ಲಿರುವ ಲಡಾಖ್ನ ಲೇಹ್ ಪ್ರದೇಶಕ್ಕೆ ಬಂದಿಳಿದ ಪ್ರಧಾನಿ ಮೋದಿಗೆ ಹಿರಿಯ ಸೇನಾಧಿಕಾರಿಗಳು ಪೂರ್ವ ಲಡಾಖ್ ವಲಯದಲ್ಲಿನ ಸದ್ಯದ ಪರಿಸ್ಥಿತಿ ಕುರಿತು ಮಾಹಿತಿ ನೀಡಿದರು.
11:11 July 03
ಭೂ ಸೇನೆ, ವಾಯುಪಡೆ ಮತ್ತು ಐಟಿಬಿಪಿ ಸಿಬ್ಬಂದಿಯೊಂದಿಗೆ ಮೋದಿ ಚರ್ಚೆ
ಸಿಂಧೂ ನದಿ ತೀರದಲ್ಲಿರುವ ಲೇಹ್ ಪ್ರದೇಶವು ಜನ್ಸ್ಕರ್ ಶ್ರೇಣಿಯಿಂದ ಆವೃತವಾಗಿದ್ದು, 11,000 ಅಡಿ ಎತ್ತರದಲ್ಲಿದೆ. ಇಲ್ಲಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಭೂ ಸೇನೆ, ವಾಯುಪಡೆ ಮತ್ತು ಐಟಿಬಿಪಿ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದ್ದಾರೆ.
10:29 July 03
ಭಾರತ-ಚೀನಾ ಗಡಿಯ ಮುಂಚೂಣಿ ನೆಲೆ ನಿಮು ಪ್ರದೇಶಕ್ಕೆ ಪಿಎಂ ಮೋದಿ, ಬಿಪಿನ್ ರಾವತ್ ಭೇಟಿ
ನವದೆಹಲಿ: ಭಾರತ - ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯಿರುವ ವೇಳೆಯಲ್ಲೇ ಪ್ರಧಾನಿ ನರೇಂದ್ರ ಮೋದಿ ಲಡಾಖ್ಗೆ ದಿಢೀರ್ ಭೇಟಿ ನೀಡಿದ್ದಾರೆ. ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರು ಕೂಡ ಪ್ರಧಾನಿ ಮೋದಿ ಜೊತೆ ತೆರಳಿದ್ದಾರೆ. ಪೂರ್ವ ಲಡಾಖ್ ವಲಯದಲ್ಲಿನ ಸದ್ಯದ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.
ಹಿರಿಯ ಸೇನಾಧಿಕಾರಿಗಳು ಸದ್ಯದ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಮತ್ತು ಬಿಪಿನ್ ರಾವತ್ ಅವರಿಗೆ ಮಾಹಿತಿ ನೀಡಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಡಾಖ್ ಭೇಟಿಯನ್ನು ಮುಂದೂಡಿದ್ದರು. ಹೀಗಾಗಿ ರಾವತ್ ಅವರ ಇಂದಿನ ಭೇಟಿ ಭಾರಿ ಮಹತ್ವ ಪಡೆದುಕೊಂಡಿದೆ.
ಚೀನಾ ಜೊತೆಗಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಸೇನೆಯ ಸನ್ನದ್ಧತೆಯನ್ನು ಪರಿಶೀಲಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಲಡಾಖ್ಗೆ ಭೇಟಿ ನೀಡಬೇಕಿತ್ತು.
ಜೂನ್ 15ರಂದು ಗಡಿಯಲ್ಲಿ ಚೀನಾ ಯೋಧರು ನಡೆಸಿದ ಘರ್ಷಣೆಯಲ್ಲಿ ಭಾರತದ 22 ಮಂದಿ ಯೋಧರು ಹುತಾತ್ಮರಾಗಿದ್ದರು. ಚೀನಾ ಕಡೆಯಲ್ಲೂ ಭಾರಿ ಸಾವು ನೋವು ಸಂಭವಿಸಿತ್ತು. ಅಂದಿನಿಂದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ.