ನ್ಯೂಯಾರ್ಕ್: ಭಾರತ - ಅಮೆರಿಕ ನಡುವಿನ ಸಂಬಂಧ ಉತ್ತಮವಾಗಿದೆ ಎಂಬುದಕ್ಕೆ ಇದೀಗ ಮತ್ತೊಂದು ಉದಾಹರಣೆ ಸಿಕ್ಕಿದ್ದು, ಅಮೆರಿಕದ ವೈಟ್ ಹೌಸ್ ಪ್ರಧಾನಿ ಮೋದಿ ಫಾಲೋ ಮಾಡ್ತಿರುವುದೇ ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ವೈಟ್ ಹೌಸ್ ಕೇವಲ 19 ಜನರಿಗೆ ಫಾಲೋ ಮಾಡ್ತಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೇರಿಕೊಂಡಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ ಮೋದಿ ಮತ್ತು ಕೋವಿಂದ್ ಅವರು ಮಾತ್ರ ಅಮೆರಿಕೇತರ ನಾಯಕರು ಎಂಬುದು ಗಮನಾರ್ಹ ಸಂಗತಿ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕೃತ ನಿವಾಸವಾಗಿರುವ ವೈಟ್ ಹೌಸ್ ಟ್ವಿಟರ್ ಖಾತೆಯಲ್ಲಿ ಇದೀಗ ಮೋದಿ ಫಾಲೋ ಮಾಡ್ತಿದ್ದು, ಒಟ್ಟು 19 ಮಂದಿ ಮಾತ್ರ ಈ ಟ್ವಿಟ್ಟರ್ನಲ್ಲಿ ಫಾಲೋ ಆಗ್ತಿದ್ದಾರೆ. ಇದಲ್ಲದೇ ಮೈಕ್ರೋ ಬ್ಲಾಗಿಂಗ್ ಸೈಟ್ನಲ್ಲಿ ಭಾರತದಲ್ಲಿರುವ ಯುಎಸ್ ರಾಯಭಾರಿ ಕಚೇರಿ ಹಾಗೂ ವಾಷಿಂಗ್ಟನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಫಾಲೋ ಮಾಡ್ತಿದೆ.
ವಿಶೇಷವೆಂದರೆ, ಭಾತರ ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್ ನಡುವೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ರಫ್ತಿಗೆ ಸಂಬಂಧಿಸಿದಂತೆ ಮಾತುಕತೆ ನಡೆದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ. ಅಮೆರಿಕ, ಬ್ರೆಜಿಲ್ ಹಾಗೂ ಇಸ್ರೇಲ್ ಸೇರಿದಂತೆ ಅನೇಕ ದೇಶಗಳಿಗೆ ಕೊರೊನಾ ರಾಮಬಾಣ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ರವಾನೆ ಮಾಡಲು ಭಾರತ ಒಪ್ಪಿಕೊಂಡಿದೆ.