ETV Bharat / bharat

ವಿಶ್ವಾದ್ಯಂತ ಶ್ರೀರಾಮ ಮಂದಿರ ಭೂಮಿಪೂಜೆಯ ಸದ್ದು: US,UKಯಲ್ಲಿ ಅತಿ ಹೆಚ್ಚು ವೀಕ್ಷಣೆ

ಐತಿಹಾಸಿಕ ರಾಮ ಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಕೇಂದ್ರ ಸರ್ಕಾರಿ ಒಡೆತನದ ದೂರದರ್ಶನ ಸೇರಿದಂತೆ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲಿ ಈ ಐತಿಹಾಸಿಕ ಕಾರ್ಯಕ್ರಮದ ನೇರಪ್ರಸಾರವಾಗಿದೆ. ಮಂದಿರ ನಿರ್ಮಾಣದ ಶಿಲಾನ್ಯಾಸದ ಅಪರೂಪದ ಕ್ಷಣಗಳನ್ನು ಜಗತ್ತಿನ ನಾನಾ ಕಡೆಗಳಲ್ಲಿ ನೆಲೆಸಿರುವ ಭಾರತೀಯರು ಕಣ್ತುಂಬಿ ಖುಷಿ ಪಟ್ಟಿದ್ದಾರೆ. ಅದರಲ್ಲೂ ಅಮೆರಿಕ ಮತ್ತು ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಅತಿ ಹೆಚ್ಚು ವೀಕ್ಷಣೆಯಾಗಿದೆ.

PM Modi Ayodhya ceremony
PM Modi Ayodhya ceremony
author img

By

Published : Aug 6, 2020, 4:56 PM IST

ನವದೆಹಲಿ: ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಭವ್ಯ ರಾಮ ಮಂದಿರ ನಿರ್ಮಾಣಕ್ಕಾಗಿ ನಿನ್ನೆ ಐತಿಹಾಸಿಕ ಭೂಮಿ ಪೂಜೆ ನೆರವೇರಿಸಿದ್ದರು. ಈ ಕಾರ್ಯಕ್ರಮವನ್ನು ವಿಶ್ವದಾದ್ಯಂತ ನೆಲೆಸಿರುವ ಭಾರತೀಯರು ವೀಕ್ಷಿಸಿದ್ದಾರೆ. ಅದರಲ್ಲೂ ಯುನೈಟೆಡ್ ಕಿಂಗ್‌ಡಮ್​ ಹಾಗೂ ಅಮೆರಿಕದಲ್ಲಿ ಅತಿ ಹೆಚ್ಚು ಭಾರತೀಯರು ಕಾರ್ಯಕ್ರಮವನ್ನು ವೀಕ್ಷಣೆ ಮಾಡಿರುವುದು ತಿಳಿದುಬಂದಿದೆ.

ಯುಕೆ, ಯುಎಸ್​ಎ, ಕೆನಡಾ, ಆಸ್ಟ್ರೇಲಿಯಾ, ಇಂಡೋನೇಷ್ಯಾ, ಥಾಯ್ಲೆಂಡ್, ನೇಪಾಳ ಸೇರಿದಂತೆ ವಿವಿಧ ದೇಶಗಳಲ್ಲಿ ಕಾರ್ಯಕ್ರಮದ ಲೈವ್‌ ಟೆಲಿಕಾಸ್ಟ್‌ ಆಗಿದೆ.

PM Modi Ayodhya ceremony
ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ

ಯೂಟ್ಯೂಬ್‌ನಲ್ಲೂ ಪ್ರಸಾರ:

ಯೂಟ್ಯೂಬ್​​ನಲ್ಲೂ ಕಾರ್ಯಕ್ರಮದ ಅತಿ ಹೆಚ್ಚು ವೀಕ್ಷಣೆಯಾಗಿದೆ. ಪ್ರಮುಖವಾಗಿ ಯುಎಸ್​ಎ, ಯುಕೆ, ಫ್ರಾನ್ಸ್​, ಇಟಲಿ, ನೆದರಲ್ಯಾಂಡ್​, ಜಪಾನ್​, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​, ಯುಎಇ, ಸೌದಿ ಅರೇಬಿಯಾ, ಓಮನ್​, ಕುವೈತ್​, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಮಲೇಷಿಯಾ, ಇಂಡೋನೇಷ್ಯಾ, ಥಾಯ್ಲೆಂಡ್‌, ಪಿಲಿಪ್ಪೀನ್ಸ್, ಸಿಂಗಾಪುರ್​, ಶ್ರೀಲಂಕಾ ಸೇರಿದಂತೆ ಅನೇಕ ದೇಶಗಳಲ್ಲಿ ಜನರು ಕಾರ್ಯಕ್ರಮ ವೀಕ್ಷಿಸಿದ್ದಾರೆ.

ಭಾರತದಲ್ಲಿ 200ಕ್ಕೂ ಅಧಿಕ ಚಾನೆಲ್​ಗಳಲ್ಲಿ ಭೂಮಿ ಪೂಜೆ ಕಾರ್ಯಕ್ರಮ ನೇರಪ್ರಸಾರವಾಗಿದೆ. ಏಷ್ಯನ್​ ನ್ಯೂಸ್ ಇಂಟರ್‌ನ್ಯಾಶನಲ್‌ ​(ANI) ತನ್ನ 1,200 ಕೇಂದ್ರಗಳಲ್ಲಿ ಭೂಮಿಪೂಜೆಯನ್ನು ಪ್ರಸಾರ ಮಾಡಿದೆ. ಉಳಿದಂತೆ APTN ವಿಶ್ವದ 450 ಕೇಂದ್ರಗಳಲ್ಲಿ ಪ್ರಸಾರ ಮಾಡಿದ್ದು, ಇದರ ಜತೆಗೆ ಡಿಡಿ ನ್ಯೂಸ್​ ಕೂಡ ನೇರ ಪ್ರಸಾರ ಮಾಡಿದೆ. ಭಾರತದ ಎಲ್ಲ ರಾಷ್ಟ್ರೀಯ, ಪ್ರಾದೇಶಿಕ ಸುದ್ದಿ ವಾಹಿನಿಗಳಲ್ಲೂ ಕಾರ್ಯಕ್ರಮ ಪ್ರಸಾರಗೊಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.