ನವದೆಹಲಿ: ದೇಶವನ್ನು ಮುನ್ನಡೆಸಿದ ಮಾಜಿ ಪ್ರಧಾನಿಗಳ ಮ್ಯೂಸಿಯಂ ನಿರ್ಮಾಣ ಮಾಡಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದು, ಇಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ವಿಶೇಷ ವಸ್ತುಸಂಗ್ರಹಾಲಯ ನಿರ್ಮಿಸಲು ಮೋದಿ ನಿರ್ಧರಿಸಿದ್ದು, ಮಾಜಿ ಪ್ರಧಾನಿಗಳಾದ ಐ.ಕೆ ಗುಜ್ರಾಲ್,ಚರಣ್ ಸಿಂಗ್, ದೇವೇಗೌಡ ಹಾಗೂ ಡಾ.ಮನಮೋಹನ್ ಸಿಂಗ್ ಸೇರಿ ಪ್ರಮುಖ ಪ್ರಧಾನಿಗಳ ಮ್ಯೂಸಿಯಂ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಹಿಂದಿನ ಪ್ರಧಾನಿಗಳು ನಡೆದುಕೊಂಡ ಬಂದ ಹಾದಿ, ಅವರ ಸಾಧನೆ ಹಾಗೂ ಮಹತ್ವದ ಕಾರ್ಯಗಳ ಬಗ್ಗೆ ಇಲ್ಲಿ ಮಾಹಿತಿ ಸಿಗಲಿದೆ ಎಂದು ಕಾರ್ಯಕ್ರಮವೊಂದರ ವೇಳೆ ಮೋದಿ ಪ್ರಕಟಿಸಿದ್ರು.