ನವದಹಲಿ: ಮುಂಚೂಣಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಚುಚ್ಚುಮದ್ದು ಗುರಿ ಹೊಂದಿರುವ ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್‌ನ ಮೊದಲ ಹಂತಕ್ಕೆ ಪಿಎಂ - ಕೇರ್ಸ್ ನಿಧಿಯಿಂದ 2,200 ಕೋಟಿ ರೂ. ಬಳಸಿಕೊಳ್ಳಲಾಗಿದೆ.
ಕಾರ್ಪೊರೇಟ್ ಮತ್ತು ವ್ಯಕ್ತಿಗಳ ಸ್ವಯಂಪ್ರೇರಿತವಾಗಿ ದೇಣಿಗೆ ಸಂಗ್ರಹಿಸಲು 2020ರ ಮಾರ್ಚ್ನಲ್ಲಿ ಪಿಎಂ ಕೇರ್ಸ್ ಫಂಡ್ ಸ್ಥಾಪಿಸಲಾಗಿತ್ತು. ಈ ನಿಧಿಯ ಅಡಿ ನಿಖರವಾದ ಸಂಗ್ರಹದ ಮೊತ್ತ ತಿಳಿದು ಬಂದಿಲ್ಲ. ಆದರೆ, ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಬಳಲುತ್ತಿರುವ ಕ್ಷೇತ್ರಗಳಿಗೆ ಮೀಸಲು ನೆರವು ನೀಡುತ್ತಿದೆ.
ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ತಮ್ಮ 2021ರ ಬಜೆಟ್ ಭಾಷಣದಲ್ಲಿ ವ್ಯಾಕ್ಸಿನೇಷನ್ಗಾಗಿ 35,000 ಕೋಟಿ ರೂ. ಮೀಸಲಿಡಲಾಗಿದೆ ಎಂದರು. ಜನವರಿಯಿಂದ ಮಾರ್ಚ್ವರೆಗೆ ವ್ಯಾಕ್ಸಿನೇಷನ್ ವೆಚ್ಚದ ಶೇ 82ಕ್ಕಿಂತ ಹೆಚ್ಚು ಹಣ ಪಿಎಂ-ಕೇರ್ಸ್ ಫಂಡ್ ಭರಿಸುತ್ತಿದೆ.
ಇದನ್ನೂ ಓದಿ: ಪ್ರವಾಸೋದ್ಯಮ ಪ್ರಚಾರಕ್ಕಾಗಿ ಮಾಧ್ಯಮಗಳಲ್ಲಿ 124 ಕೋಟಿ ರೂ. ಖರ್ಚು: ಕೇಂದ್ರ
ಕೇಂದ್ರ ಖರ್ಚು ಕಾರ್ಯದರ್ಶಿ ಟಿ.ವಿ.ಸೋಮನಾಥನ್ ಸುದ್ದಿ ಸಂಸ್ಥೆ ಜತೆ ಮಾತನಾಡಿ, ಜನವರಿ-ಮಾರ್ಚ್ ವರೆಗೆ ವ್ಯಾಕ್ಸಿನೇಷನ್ ವೆಚ್ಚವು ಸುಮಾರು 2,700 ಕೋಟಿ ರೂ.ಆಗಿದೆ. ಅದರ ಒಂದು ಭಾಗವು ಆರೋಗ್ಯ ಸಚಿವಾಲಯದಿಂದ ಬರುತ್ತಿದೆ. ಕೆಲವು ಭಾಗವನ್ನು ಪಿಎಂ ಕೇರ್ಸ್ ನಿಧಿಯಿಂದ ನೀಡಲಾಗುತ್ತದೆ. ಲಸಿಕೆಯ ಮೊದಲ ಸುತ್ತಿನಲ್ಲಿ 3 ಕೋಟಿ ಮುಂಚೂಣಿ ಮತ್ತು ಆರೋಗ್ಯ ಕಾರ್ಯಕರ್ತರ ಇದ್ದಾರೆ ಎಂದರು.
ಮೊದಲ ಹಂತದ ಸಂಪೂರ್ಣ ವೆಚ್ಚವನ್ನು ಕೇಂದ್ರವು ಭರಿಸಲಿದೆ. ವ್ಯಾಕ್ಸಿನೇಷನ್‌ಗೆ ಪ್ರಾಸಂಗಿಕ ವೆಚ್ಚಗಳಿಗಾಗಿ ನಾವು ಆರೋಗ್ಯ ಸಚಿವಾಲಯಕ್ಕೆ ಹೆಚ್ಚುವರಿ ಹಣ ಒದಗಿಸಿದ್ದೇವೆ. ವ್ಯಾಕ್ಸಿನೇಷನ್‌ನ 3 ಕೋಟಿ ಬ್ಯಾಚ್‌ಗೆ ಹೆಚ್ಚುವರಿಯಾಗಿ 480 ಕೋಟಿ ರೂ. ಒದಗಿಸಲಾಗಿದೆ ಎಂದು ಹೇಳಿದರು.