ETV Bharat / bharat

ಅಯೋಧ್ಯೆ ಮಸೀದಿ ಟ್ರಸ್ಟ್‌ಗೆ ಸರ್ಕಾರಿ ನಾಮಿನಿ ನೇಮಕಕ್ಕೆ ನಿರ್ದೇಶಿಸುವಂತೆ ಮನವಿ: ಸುಪ್ರೀಂಗೆ ಅರ್ಜಿ - ಅಯೋಧ್ಯೆ ಪ್ರಕರಣ

ಅಯೋಧ್ಯೆ ಮಸೀದಿ ಟ್ರಸ್ಟ್‌ಗೆ ಸರ್ಕಾರಿ ನಾಮಿನಿಯನ್ನು ನೇಮಕ ಮಾಡಲು ನಿರ್ದೇಶಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ನ್ಯಾಯವಾದಿ ವಿಷ್ಣು ಜೈನ್ ಮೂಲಕ ನ್ಯಾಯಾಲಯಕ್ಕೆ ಈ ಅರ್ಜಿ ಸಲ್ಲಿಕೆಯಾಗಿದೆ.

SC
ಸುಪ್ರೀಂ
author img

By

Published : Aug 26, 2020, 12:59 PM IST

Updated : Aug 26, 2020, 1:11 PM IST

ನವದೆಹಲಿ: ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕಾಗಿ ರಚನೆಯಾಗಿರುವ ಅಯೋಧ್ಯೆ ಮಸೀದಿ ಟ್ರಸ್ಟ್‌ಗೆ ಸರ್ಕಾರಿ ನಾಮನಿರ್ದೇಶಕನನ್ನು ನೇಮಕ ಮಾಡುವಂತೆ ನಿರ್ದೇಶನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

ಅಯೋಧ್ಯೆ ಪ್ರಕರಣದಲ್ಲಿ ಹಿಂದೂಗಳ ಪರ ನ್ಯಾಯವಾದಿ ಕರುಣೇಶ್ ಶುಕ್ಲಾ, ತಮ್ಮ ವಕೀಲ ವಿಷ್ಣು ಜೈನ್ ಮೂಲಕ ಘನ ನ್ಯಾಯಾಲಯಕ್ಕೆ ಈ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್‌ನ ಸೂಚನೆಯ ಮೇರೆಗೆ ಅಯೋಧ್ಯೆಯಲ್ಲಿ ಮಂಜೂರು ಮಾಡಲಾದ ಭೂಮಿಯಲ್ಲಿ ಮಸೀದಿ ಹಾಗೂ ಇದಕ್ಕೆ ಸಂಬಂಧಿಸಿದ ಇತರ ಸೌಲಭ್ಯಗಳನ್ನು ನಿರ್ಮಿಸಲು, ಉತ್ತರ ಪ್ರದೇಶ ಸುನ್ನಿ ಕೇಂದ್ರ ವಕ್ಫ್ ಮಂಡಳಿಯು 15 ಸದಸ್ಯರನ್ನೊಳಗೊಂಡ 'ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್' ಟ್ರಸ್ಟ್ ಅನ್ನು ರಚಿಸಿದೆ. ಈ ಟ್ರಸ್ಟ್​ಗೆ ಸರ್ಕಾರದಿಂದಲೇ ಓರ್ವ ನಾಮಿನಿ ಬೇಕು ಎಂದು ಉನ್ನತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿದೆ.

ಅಯೋಧ್ಯೆ-ಬಾಬರಿ ಮಸೀದಿ ಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದ ನವೆಂಬರ್ 9 ರಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿತ್ತು. ರಾಮ ಮಂದಿರದ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿರುವ ಸ್ಥಳವನ್ನು ಹಸ್ತಾಂತರಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅಲ್ಲದೆ ಅದಕ್ಕಾಗಿ ಒಂದು ಟ್ರಸ್ಟ್ ಅನ್ನು ಶೀಘ್ರದಲ್ಲೇ ರಚಿಸುವಂತೆ ಸೂಚಿಸಿತ್ತು.

Last Updated : Aug 26, 2020, 1:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.