ಮಥುರಾ: ನಗರದ ಭಗವಾನ್ ಕೃಷ್ಣ ದೇವಸ್ಥಾನದ ಬಳಿ ನಿರ್ಮಿಸಲಾಗಿರುವ 17 ನೇ ಶತಮಾನದ ಮಸೀದಿ ತೆರವುಗೊಳಿಸಬೇಕು ಎಂಬ ಮನವಿ ವಜಾಗೊಳಿಸಿರುವುದರ ವಿರುದ್ಧ ಮೇಲ್ಮನವಿ ಸಲ್ಲಿಕೆಯಾಗಿದ್ದು, ಜನವರಿ 18ಕ್ಕೆ ಮಥುರಾ ನ್ಯಾಯಾಲಯ ವಿಚಾರಣೆ ಮುಂದೂಡಿದೆ.
ಈ ಕುರಿತು ತೀರ್ಪನ್ನು ಜನವರಿ 11ಕ್ಕೆ ಕಾಯ್ದಿರಿಸಿದ್ದ ಮಹುರಾ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಸಾಧನಾ ರಾಣಿ ಠಾಕೂರ್, ಮೇಲ್ಮನವಿ ಸಂಬಂಧಿಸಿದಂತೆ ಹೆಚ್ಚಿನ ವಾದಗಳನ್ನು ಆಲಿಸಲು ನಿರ್ಧರಿಸಿದ್ದಾರೆ. ಉತ್ತರ ಪ್ರದೇಶ ಸುನ್ನಿ ಕೇಂದ್ರ ವಕ್ಫ್ ಮಂಡಳಿ ಮತ್ತು ಶಾಹಿ ಮಸೀದಿ ಇದ್ಗಾ ಟ್ರಸ್ಟ್ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ನ್ಯಾಯಾಲಯ ಸೂಚಿಸಿದೆ.
ಈ ಸುದ್ದಿಯನ್ನೂ ಓದಿ: ಪುಣೆ ವಿಮಾನ ನಿಲ್ದಾಣ ತಲುಪಿದ ಕೋವಿಶೀಲ್ಡ್ ಲಸಿಕೆ.. ರವಾನೆಗೆ ಸಿದ್ಧತೆ
ಲಖನೌ ನಿವಾಸಿ ರಂಜನಾ ಅಗ್ನಿಹೋತ್ರಿ ಮತ್ತು ಇತರರು ಈ ಮನವಿ ಸಲ್ಲಿಸಿದ್ದಾರೆ. ಮತ್ತಷ್ಟು ವಾದ ಪ್ರತಿವಾದ ಆಲಿಸಲು ಜನವರಿ 18 ರಂದು ದಿನ ನಿಗದಿಯಾಗಿದೆ ಎಂದು ಸರ್ಕಾರಿ ವಕೀಲ (ಸಿವಿಲ್) ಸಂಜಯ್ ರೈ ತಿಳಿಸಿದ್ದಾರೆ.