ಕರಾಚಿ( ಪಾಕಿಸ್ತಾನ): ಆಧುನಿಕ ಸಿಂಧಿ ರಾಷ್ಟ್ರೀಯತೆಯ ಸ್ಥಾಪಕ ಪಿತಾಮಹರಲ್ಲಿ ಒಬ್ಬರಾದ ಜಿಎಂ ಸೈಯದ್ ಅವರ 117 ನೇ ಜನ್ಮ ದಿನಾಚರಣೆಯಂದು ಆಯೋಜಿಸಲಾಗಿದ್ದ ಬೃಹತ್ ಸ್ವಾತಂತ್ರ್ಯ ಪರ ರ‍್ಯಾಲಿಯಲ್ಲಿ ಪ್ರತಿಭಟನಾಕಾರರು ಸಿಂದ್ ಪ್ರಾಂತ್ಯದ ಸ್ವಾತಂತ್ರ್ಯಕ್ಕಾಗಿ ಮಧ್ಯಸ್ಥಿಕೆ ವಹಿಸುವಂತೆ ಕೋರಿ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ವಿಶ್ವ ನಾಯಕರ ಭಾವಚಿತ್ರಗಳ ಫಲಕಗಳನ್ನು ಪ್ರದರ್ಶಿಸಿದರು.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಮ್‌ಶೋರೊ ಜಿಲ್ಲೆಯ ಸೈಯದ್ ಅವರ ತವರೂರಾದ ಸಾನ್‌ನಲ್ಲಿ ಭಾನುವಾರ ನಡೆದ ಬೃಹತ್ ರ‍್ಯಾಲಿಯಲ್ಲಿ ಜನರು ಸ್ವಾತಂತ್ರ್ಯ ಪರ ಘೋಷಣೆಗಳನ್ನು ಕೂಗಿದರು.
ಸಿಂಧ್, ಸಿಂಧೂ ಬಯಲಿನ ನಾಗರೀಕತೆ ಮತ್ತು ವೈದಿಕ ಧರ್ಮದ ನೆಲೆಯಾಗಿದೆ. ಇದನ್ನು ಬ್ರಿಟಿಷ್ ಸಾಮ್ರಾಜ್ಯವು ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡು ಆನಂತರ 1947 ರಲ್ಲಿ ಪಾಕಿಸ್ತಾನದ ಇಸ್ಲಾಮಿಸ್ಟ್ ಗಳ ಕೈಯಲ್ಲಿ ಚೆಲ್ಲಿತು. "ಈ ಎಲ್ಲ ಇತಿಹಾಸ ಮತ್ತು ಸಂಸ್ಕೃತಿಯ ಮೇಲಿನ ಅನಾಗರಿಕ ದಾಳಿಗಳಲ್ಲಿ ಮತ್ತು ಎಲ್ಲ ಯುಗದ ಉದ್ಯೋಗ ಮತ್ತು ಸ್ವಾತಂತ್ರ್ಯದ ಉದಯಗಳಲ್ಲೂ ಸಿಂಧ್ ಪ್ರತ್ಯೇಕ ಐತಿಹಾಸಿಕ ಮತ್ತು ಸಾಂಸ್ಕೃತಿಕ ಗುರುತನ್ನು ಬಹುತ್ವವಾದಿ, ಸಹಬಾಳ್ವೆ, ಸಹಿಷ್ಣುತೆ ಮತ್ತು ಸಾಮರಸ್ಯದ ಸಮಾಜವಾಗಿ ಉಳಿಸಿಕೊಂಡಿದೆ"ಎಂದು ಜೀ ಸಿಂಧ್ ಮುಟ್ಟಾಹಿದಾ ಮಹಾಜ್‌ನ ಅಧ್ಯಕ್ಷ ಶಫಿ ಮುಹಮ್ಮದ್ ಬರ್ಫತ್ ಹೇಳಿದರು.
'ಸಿಂಧುದೇಶ್' ಪ್ರತ್ಯೇಕ ದೇಶವಾಗಬೇಕೆಂಬುದು ಸಿಂಧಿಗಳ ಬೇಡಿಕೆಯಾಗಿದ್ದು, ಇದು 1967 ರಲ್ಲಿ ಜಿಎಂ ಸೈಯದ್ ಮತ್ತು ಪಿರ್ ಅಲಿ ಮೊಹಮ್ಮದ್ ರಶ್ಡಿ ಅವರ ನೇತೃತ್ವದಲ್ಲಿ ರೂಪ ಪಡೆದುಕೊಂಡಿತು. ಇದಕ್ಕಾಗಿ ಶ್ರಮಿಸಿದ ಅದೆಷ್ಟೋ ಸಿಂಧಿ ರಾಷ್ಟ್ರೀಯತಾವಾದಿ ನಾಯಕರು, ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಕಳೆದ ಕೆಲವು ದಶಕಗಳಿಂದ ಪಾಕಿಸ್ತಾನದ ಭದ್ರತಾ ಸಂಸ್ಥೆಗಳಿಂದ ಕಣ್ಮರೆಯಾದರು, ಹಿಂಸಿಸಲ್ಪಟ್ಟರು ಮತ್ತು ಕೊಲ್ಲಲ್ಪಟ್ಟರು.