ETV Bharat / bharat

ಬೇಡಿಕೆ ಹೆಚ್ಚಳಕ್ಕೆ ಪ್ಲಾನ್: ಪಿಜ್ಜಾ ತಯಾರಿಸುವುದನ್ನು ಗ್ರಾಹಕರು ಲೈವ್​ ನೋಡಬಹುದು

ಬೇಡಿಕೆ ಹೆಚ್ಚಿಸುವ ಸಲುವಾಗಿ ನವದೆಹಲಿಯಲ್ಲಿ ಇನ್‌ಸ್ಟಾಪಿಜ್ಜಾ ಮಾಲೀಕರು ಪಿಜ್ಜಾ ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ಆರ್ಡರ್​ ಮಾಡುವವರು ಲೈವ್ ಆಗಿ ನೋಡುವ ಅವಕಾಶ ಕಲ್ಪಿಸಿದ್ದಾರೆ.

author img

By

Published : Jun 4, 2020, 4:13 PM IST

Pizza shop in Delhi battles corona
ಬೇಡಿಕೆ ಹೆಚ್ಚಾಳಕ್ಕೆ ಪ್ಲಾನ್

ನವದೆಹಲಿ: ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ಪಿಜ್ಜಾದ ಬೇಡಿಕೆ ಕೂಡ ಕಡಿಮೆಯಾಗುತ್ತಿದೆ. ಇದನ್ನ ಗಮನದಲ್ಲಿಟ್ಟುಕೊಂಡು ನೈರುತ್ಯ ದೆಹಲಿಯ ಇನ್‌ಸ್ಟಾಪಿಜ್ಜಾ, ಮಾರಾಟವನ್ನು ಹೆಚ್ಚಿಸಲು ಒಂದು ಮಾಸ್ಟರ್​ ಪ್ಲಾನ್ ಮಾಡಿದೆ.

ಪಿಜ್ಜಾ ಡೆಲಿವರಿ ಬಾಯ್​ ಕೊರೊನಾ ವೈರಸ್‌ಗೆ ತುತ್ತಾದ ಬಳಿಕ ಪಿಜ್ಜಾ ಬೇಡಿಕೆಯು ಆಶ್ಚರ್ಯಕರವಾಗಿ ಕಡಿಮೆಯಾಗಿದೆ. ಜನರು ಆರ್ಡರ್​ ಮಾಡುವುದನ್ನೇ ನಿಲ್ಲಿಸಿದ್ದಾರೆ. ನಾವು ಆರಂಭದಲ್ಲಿ ಹೆಚ್ಚು ಕಷ್ಟ ಅನುಭವಿಸಿದ್ದೇವೆ. ಆದಾಗ್ಯೂ ಇದನ್ನ ಸವಾಲಾಗಿ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ ಎಂದು ಅಂಗಡಿ ಮಾಲೀಕ ಸುಂದರ್ ಹೇಳಿದ್ದಾರೆ.

ಕ್ರಸ್ಟ್​ಫ್ಲಿಕ್ಸ್​ (crustflix) ಸೈಟ್ ಮೂಲಕ ಪಿಜ್ಜಾವನ್ನು ಹೇಗೆ ತಯಾರಿಸಲಾಗುತ್ತಿದೆ ಎಂಬುದನ್ನು ಆರ್ಡರ್​ ಮಾಡುವವರು ನೋಡಬಹುದು. ಪಿಜ್ಜಾ ತಯಾರಿಸುವ ಮುನ್ನ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಸಿಬ್ಬಂದಿ ಮೊದಲು ಅವರ ಕೈಯನ್ನು ಸ್ವಚ್ಛ ಗೊಳಿಸುತ್ತಾರೆ, ನಂತರ ಕೈಗವಸುಗಳು, ಮಾಸ್ಕ್​ಗಳನ್ನು ಧರಿಸುತ್ತಾರೆ. ಫಿಜ್ಜಾ ತಯಾರಿಸುವಾಗ ಅವರ ಶೂಗಳನ್ನೂ ಕವರ್​ಗಳಿಂದ ಮುಚ್ಚಲಾಗಿರುತ್ತದೆ ಎಂದು ಸುಂದರ್ ವಿವರಣೆ ನೀಡಿದ್ದಾರೆ.

ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಎಲ್ಲ ಉದ್ಯೋಗಿಗಳು ತಮ್ಮ ಮಾಸ್ಕ್​, ಕೈಗವಸು ಮತ್ತು ಶೂ ಕವರ್ ಅನ್ನು ಯಾವಾಗಲೂ ಧರಿಸಿರುತ್ತಾರೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.