ನವದೆಹಲಿ: ನಿನ್ನೆ ವಿಧಿವಶರಾದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಸಚಿವ ಸ್ಥಾನದ ಹೆಚ್ಚುವರಿ ಜವಾಬ್ದಾರಿಯನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ಗೆ ನೀಡಲಾಗಿದೆ.
ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯ ಹೆಚ್ಚುವರಿ ಜವಾಬ್ದಾರಿಯನ್ನು ಪಿಯೂಷ್ ಗೋಯಲ್ಗೆ ನೀಡುವ ಕೇಂದ್ರದ ಪ್ರಸ್ತಾಪಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ ಎಂದು ರಾಷ್ಟ್ರಪತಿ ಕಚೇರಿ ಮೂಲಗಳು ತಿಳಿಸಿವೆ.
-
Union Minister Piyush Goyal assigned additional charge of Ministry of Consumer Affairs, Food and Public Distribution, following demise of #RamVilasPaswan pic.twitter.com/eL8yJfCAR4
— ANI (@ANI) October 9, 2020 " class="align-text-top noRightClick twitterSection" data="
">Union Minister Piyush Goyal assigned additional charge of Ministry of Consumer Affairs, Food and Public Distribution, following demise of #RamVilasPaswan pic.twitter.com/eL8yJfCAR4
— ANI (@ANI) October 9, 2020Union Minister Piyush Goyal assigned additional charge of Ministry of Consumer Affairs, Food and Public Distribution, following demise of #RamVilasPaswan pic.twitter.com/eL8yJfCAR4
— ANI (@ANI) October 9, 2020
ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ನಿನ್ನೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ (74), ಎಲ್ಜೆಪಿ ಪಕ್ಷದ ನಾಯಕರಾಗಿದ್ದು, ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ಗಣ್ಯರು ಪಾಸ್ವಾನ್ ಅವರಿಗೆ ಅಂತಿಮ ನಮನ ಸಲ್ಲಿಸಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ದಲಿತ ನಾಯಕನ ಅಂತ್ಯಕ್ರಿಯೆ ನಡೆಯಲಿದೆ.