ಹೈದರಾಬಾದ್: ಪ್ರವಾಸಿ ತಾಣಗಳಿಗೆ ಹೋದಾಗ ಗೈಡ್ಗಳು ನಿಮ್ಮ ಸುತ್ತ ಸುತ್ತಿಕೊಳ್ಳುವುದು ಸಾಮಾನ್ಯ. ಮೂರ್ನಾಲ್ಕು ಗೈಡ್ಗಳಿದ್ದರೆ ಒಬ್ಬೊಬ್ಬರು ನೀಡುವ ವಿವರಣೆ ಕೂಡ ಬೇರೆ ರೀತಿ ಇರುತ್ತದೆ. ಇದರಲ್ಲಿ ಯಾವುದು ಸರಿಯಾದದ್ದು ಎಂದು ಆಯ್ಕೆ ಮಾಡುವುದೇ ಪ್ರವಾಸಿಗರಿಗೆ ದೊಡ್ಡ ಸವಾಲು. ಊರು, ಅದರ ನಾಡಿ ಮಿಡಿತ ಗೊತ್ತಿಲ್ಲದ ಜನ ಗೈಡ್ ಏನು ಹೇಳುತ್ತಾರೋ ಅದನ್ನೇ ನಂಬಿ ಮುಂದೆ ಹೋಗ್ತಾರೆ. ಅದನ್ನು ಇನ್ನೊಬ್ಬರಿಗೆ ವಿವರಿಸುವಾಗ ಇನ್ನಷ್ಟು ರೆಕ್ಕೆ ಪುಕ್ಕಗಳು ಸೇರಿಕೊಳ್ಳಬಹುದು. ಪ್ರವಾಸಿಗರು ಅನುಭವಿಸುವ ಇಂತಹ ಸಮಸ್ಯೆ ತಪ್ಪಿಸಲು ಪಿನಾಕಿನ್ ಎನ್ನುವ ಆ್ಯಪ್ ಬೆಂಗಳೂರಿನಲ್ಲೇ ಜನ್ಮ ತಾಳಿದೆ.
ಪ್ರವಾಸಿ ತಾಣಗಳ ವಿವರಣೆ ನೀಡುತ್ತೆ ಪಿನಾಕಿನ್ ತಮಿಳುನಾಡು ಮೂಲದ ಟೆಕ್ಕಿ ಶ್ರೀಕಾಂತ್ ಅಯ್ಯರ್ ಅಂಗೈನಲ್ಲೇ ಆಡಿಯೊ ಟೂರ್ ಗೈಡ್ ನೀಡುವ ಆ್ಯಪ್ ಅಭಿವೃದ್ಧಿಪಡಿಸಿದ್ದು, ಪ್ರವಾಸಿಗರು ಗೈಡ್ಗಳ ನೆರವಿಲ್ಲದೇ ಆಡಿಯೊ ಮೂಲಕ ತಾವು ಭೇಟಿ ನೀಡುವ ಸ್ಥಳದ ಪರಿಚಯ ಮಾಡಿಕೊಳ್ಳಬಹುದಾಗಿದೆ. ಯಾವ್ಯಾವ ಸ್ಥಳಗಳಿವೆ?: ಸದ್ಯ ಮೈಸೂರು ಅರಮನೆ, ಶ್ರೀರಂಗಪಟ್ಟಣ ಕೋಟೆ, ಹೋಲಿ ಟ್ರಿನಿಟಿ ಚರ್ಚ್,ಸೋಮೇಶ್ವರ ಸ್ವಾಮಿ ದೇಗುಲ,ಟಿಪ್ಪು ಸುಲ್ತಾನ್ ಅರಮನೆ, ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಬೇಲೂರಿನ ಚೆನ್ನಕೇಶವ ದೇಗುಲ, ಲಾಲ್‌ಬಾಗ್, ಬೆಂಗಳೂರಿನ ಸರಕಾರಿ ವಸ್ತುಸಂಗ್ರಹಾಲಯ ಕುರಿತ ಆಡಿಯೊ ಕ್ಲಿಪ್ಪಿಂಗ್‌ಗಳು ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು ಭಾಷೆಯಲ್ಲಿ ಲಭ್ಯವಿದೆ. ಲಾಲ್‌ಬಾಗ್‌ನಲ್ಲಿರುವ ಸಸ್ಯಗಳು, ಪುಷ್ಪ ಗಡಿಯಾರ, ಗುಲಾಬಿ ತೋಟ, ಲಾಲ್‌ಬಾಗ್ ಕೆರೆ ಮೊದಲಾದ ಸ್ಥಳಗಳ ಕುರಿತ ಆಡಿಯೊ ಕೂಡ ಲಭ್ಯವಿದೆ. ಇನ್ನು ಬೇಲೂರು ಶ್ರೀ ಚೆನ್ನಕೇಶವನ ದೇಗುಲದ ಇತಿಹಾಸ, ಹೊಯ್ಸಳ ಸಾಮ್ರಾಜ್ಯದ ಇತಿಹಾಸ ದೇವಾಲಯದ ಶಿಲ್ಪಕಲೆಗಳ ಪರಿಚಯವನ್ನೂ ಈ ಆ್ಯಪ್ ಮಾಡಿಕೊಡುತ್ತದೆ. ಆಗಸ್ಟ್ ತಿಂಗಳಿನೊಳಗಾಗಿ ಉತ್ತರ ಭಾರತದ ಪ್ರವಾಸಿ ತಾಣಗಳನ್ನು ಪರಿಚಯಿಸುವ ಉದ್ದೇಶ ಶ್ರೀಕಾಂತ್ ಅವರಿಗಿದೆ. ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಎರಡೂ ಮೊಬೈಲ್‌ಗಳಲ್ಲೂ ಈ ಆ್ಯಪ್ ಸುಲಭವಾಗಿ ಕೆಲಸ ಮಾಡಬಹುದು. ಪ್ಲೇ ಸ್ಟೋರ್‌ನಲ್ಲಿ ಪಿನಾಕಿನ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸೈನ್ ಇನ್ ಆದರೆ, ನಾಲ್ಕರಲ್ಲಿ ನೀವಿಷ್ಟಪಡುವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಮೊಬೈಲ್‌ನಲ್ಲಿ ನೀವಿರುವ ಲೊಕೇಷನ್ ಆನ್ ಮಾಡಿಕೊಂಡರೆ ಸಮೀಪದಲ್ಲೇ ಇರುವ ಪ್ರವಾಸಿ ತಾಣಗಳು ಯಾವವು ಎಂಬ ಬಗ್ಗೆ ಮಾಹಿತಿ ಸಿಗುತ್ತದೆ. ಜತೆಗೆ ಆ ಸ್ಥಳಗಳ ಕುರಿತ ಆಡಿಯೋ ಕ್ಲಿಪ್ಪಿಂಗ್‌ಗಳೂ ಲಭ್ಯವಿದೆ. ಆಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು ಅಥವಾ ಆನ್‌ಲೈನ್‌ನಲ್ಲೂ ಕೇಳಬಹುದಾಗಿದೆ. ಚೆನ್ನೈ ಮೂಲದ ಬೆಂಗಳೂರಿನ ಟೆಕ್ಕಿ ಶ್ರೀಕಾಂತ್ ಅಯ್ಯರ್ ಅವರು ಈ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಪ್ರವಾಸೋದ್ಯಮಕ್ಕೆ ಈ ಆ್ಯಪ್ ಲಾಭ ತಂದುಕೊಡುವ ಕಾರಣ ಪಿಒಸಿ (ಪ್ರೂಫ್ ಆಫ್ ಕಾನ್ಸೆಪ್ಟ್) ಯೋಜನೆಯಡಿ ಈ ನವೋದ್ಯಮಕ್ಕೆ ಅನುದಾನ ನೀಡಲಾಗಿದೆ. ಚೋಳನ್ ಟೂರ್ಸ್ ಸಂಸ್ಥೆಯು ಪಿನಾಕಿನ್ನಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದು, ಆ್ಯಪ್ ಅಭಿವೃದ್ಧಿಗೆ ಇಂಬು ನೀಡಿದಂತಾಗಿದೆ. 80 ಸಾವಿರ ಡೌನ್‌ಲೋಡ್: ತಮಿಳು, ಕನ್ನಡ, ಇಂಗ್ಲಿಷ್, ಹಿಂದಿ, ಫ್ರೆಂಚ್ ಭಾಷೆಯಲ್ಲಿ ಲಭ್ಯವಿರುವ ಈ ಆ್ಯಪ್ನ ಆ್ಯಂಡ್ರಾಯ್ಡ್ ವರ್ಷನ್ 80 ಸಾವಿರ ಹಾಗೂ ಐಫೋನ್ ವರ್ಷನ್ 22 ಸಾವಿರ ಡೌನ್‌ಲೋಡ್ ಆಗಿದೆ. ರಾಜ್ಯದ ನೂರಕ್ಕೂ ಹೆಚ್ಚು ಪ್ರವಾಸಿ ತಾಣಗಳ ಆಡಿಯೊ ಗೈಡ್ ಆ್ಯಪ್‌ನಲ್ಲಿ ಲಭ್ಯವಾಗುವಂತೆ ಮಾಡುವುದು ಆ್ಯಪ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಅಯ್ಯರ್ ಅವರ ಮಹದಾಸೆ.
ಶ್ರೀಕಾಂತ್ ಅಯ್ಯರ್ ಇ ಮೇಲ್ ವಿಳಾಸ: srikanth@pinakinapp.com
ಪ್ಲೇ ಸ್ಟೋರ್ : Pinakin - Travel Audio Guide App

Intro:Body:
ಮೊಬೈಲ್ನಲ್ಲೇ ಆಡಿಯೊ ಟೂರ್ ಗೈಡ್... ಪ್ರವಾಸಿ ತಾಣಗಳ ವಿವರಣೆ ನೀಡುತ್ತೆ ಪಿನಾಕಿನ್
ಹೈದರಾಬಾದ್: ಪ್ರವಾಸಿ ತಾಣಗಳಿಗೆ ಹೋದಾಗ ಗೈಡ್ಗಳು ನಿಮ್ಮ ಸುತ್ತ ಸುತ್ತಿಕೊಳ್ಳುವುದು ಸಾಮಾನ್ಯ. ಮೂರ್ನಾಲ್ಕು ಗೈಡ್ಗಳಿದ್ದರೆ ಒಬ್ಬೊಬ್ಬರು ನೀಡುವ ವಿವರಣೆ ಕೂಡ ಬೇರೆ ರೀತಿ ಇರುತ್ತದೆ. ಇದರಲ್ಲಿ ಯಾವುದು ಸರಿಯಾದದ್ದು ಎಂದು ಆಯ್ಕೆ ಮಾಡುವುದೇ ಪ್ರವಾಸಿಗರಿಗೆ ದೊಡ್ಡ ಸವಾಲು.
ಊರು, ಅದರ ನಾಡಿ ಮಿಡಿತ ಗೊತ್ತಿಲ್ಲದ ಜನ ಗೈಡ್ ಏನು ಹೇಳುತ್ತಾರೋ ಅದನ್ನೇ ನಂಬಿ ಮುಂದೆ ಹೋಗ್ತಾರೆ. ಅದನ್ನು ಇನ್ನೊಬ್ಬರಿಗೆ ವಿವರಿಸುವಾಗ ಇನ್ನಷ್ಟು ರೆಕ್ಕೆ ಪುಕ್ಕಗಳು ಸೇರಿಕೊಳ್ಳಬಹುದು. ಪ್ರವಾಸಿಗರು ಅನುಭವಿಸುವ ಇಂತಹ ಸಮಸ್ಯೆ ತಪ್ಪಿಸಲು ಪಿನಾಕಿನ್ ಎನ್ನುವ ಆ್ಯಪ್ ಬೆಂಗಳೂರಿನಲ್ಲೇ ಜನ್ಮ ತಾಳಿದೆ.
ತಮಿಳುನಾಡು ಮೂಲದ ಟೆಕ್ಕಿ ಶ್ರೀಕಾಂತ್ ಅಯ್ಯರ್ ಅಂಗೈನಲ್ಲೇ ಆಡಿಯೊ ಟೂರ್ ಗೈಡ್ ನೀಡುವ ಆ್ಯಪ್ ಅಭಿವೃದ್ಧಿಪಡಿಸಿದ್ದು, ಪ್ರವಾಸಿಗರು ಗೈಡ್ಗಳ ನೆರವಿಲ್ಲದೇ ಆಡಿಯೊ ಮೂಲಕ ತಾವು ಭೇಟಿ ನೀಡುವ ಸ್ಥಳದ ಪರಿಚಯ ಮಾಡಿಕೊಳ್ಳಬಹುದಾಗಿದೆ.
ಯಾವ್ಯಾವ ಸ್ಥಳಗಳಿವೆ?: ಸದ್ಯ ಮೈಸೂರು ಅರಮನೆ, ಶ್ರೀರಂಗಪಟ್ಟಣ ಕೋಟೆ, ಹೋಲಿ ಟ್ರಿನಿಟಿ ಚರ್ಚ್,ಸೋಮೇಶ್ವರ ಸ್ವಾಮಿ ದೇಗುಲ,ಟಿಪ್ಪು ಸುಲ್ತಾನನ ಅರಮನೆ, ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಬೇಲೂರಿನ ಚೆನ್ನಕೇಶವ ದೇಗುಲ, ಲಾಲ್‌ಬಾಗ್, ಬೆಂಗಳೂರಿನ ಸರಕಾರಿ ವಸ್ತುಸಂಗ್ರಹಾಲಯ ಕುರಿತ ಆಡಿಯೊ ಕ್ಲಿಪ್ಪಿಂಗ್‌ಗಳು ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು ಭಾಷೆಯಲ್ಲಿ ಲಭ್ಯವಿದೆ.
ಲಾಲ್‌ಬಾಗ್‌ನಲ್ಲಿರುವ ಸಸ್ಯಗಳು, ಪುಷ್ಪ ಗಡಿಯಾರ, ಗುಲಾಬಿ ತೋಟ, ಲಾಲ್‌ಬಾಗ್ ಕೆರೆ ಮೊದಲಾದ ಸ್ಥಳಗಳ ಕುರಿತ ಆಡಿಯೊ ಕೂಡ ಲಭ್ಯವಿದೆ. ಇನ್ನು ಬೇಲೂರು ಶ್ರೀ ಚೆನ್ನಕೇಶವನ ದೇಗುಲದ ಇತಿಹಾಸ, ಹೊಯ್ಸಳ ಸಾಮ್ರಾಜ್ಯದ ಇತಿಹಾಸ ದೇವಾಲಯದ ಶಿಲ್ಪಕಲೆಗಳ ಪರಿಚಯವನ್ನೂ ಈ ಆ್ಯಪ್ ಮಾಡಿಕೊಡುತ್ತದೆ.
ಈ ಆಗಸ್ಟ್ ತಿಂಗಳಿನೊಳಗಾಗಿ ಉತ್ತರ ಭಾರತದ ಪ್ರವಾಸಿ ತಾಣಗಳನ್ನು ಪರಿಚಯಿಸುವ ಉದ್ದೇಶ ಶ್ರೀಕಾಂತ್ ಅವರಿಗಿದೆ.
ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಎರಡೂ ಮೊಬೈಲ್‌ಗಳಲ್ಲೂ ಈ ಆ್ಯಪ್ ಸುಲಭವಾಗಿ ಕೆಲಸ ಮಾಡಬಹುದು. ಪ್ಲೇ ಸ್ಟೋರ್‌ನಲ್ಲಿ ಪಿನಾಕಿನ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸೈನ್ ಇನ್ ಆದರೆ, ನಾಲ್ಕರಲ್ಲಿ ನೀವಿಷ್ಟಪಡುವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಮೊಬೈಲ್‌ನಲ್ಲಿ ನೀವಿರುವ ಲೊಕೇಷನ್ ಆನ್ ಮಾಡಿಕೊಂಡರೆ ಸಮೀಪದಲ್ಲೇ ಇರುವ ಪ್ರವಾಸಿ ತಾಣಗಳು ಯಾವುವು ಎಂಬ ಬಗ್ಗೆ ಮಾಹಿತಿ ಸಿಗುತ್ತದೆ. ಜತೆಗೆ ಆ ಸ್ಥಳಗಳ ಕುರಿತ ಆಡಿಯೊ ಕ್ಲಿಪ್ಪಿಂಗ್‌ಗಳೂ ಲಭ್ಯವಿದೆ. ಆಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು ಅಥವಾ ಆನ್‌ಲೈನ್‌ನಲ್ಲೂ ಕೇಳಬಹುದಾಗಿದೆ.
ಚೆನ್ನೈ ಮೂಲದ ಬೆಂಗಳೂರಿನ ಟೆಕ್ಕಿ ಶ್ರೀಕಾಂತ್ ಅಯ್ಯರ್ ಅವರು ಈ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಪ್ರವಾಸೋದ್ಯಮಕ್ಕೆ ಈ ಆ್ಯಪ್ ಲಾಭ ತಂದುಕೊಡುವ ಕಾರಣ ಪಿಒಸಿ (ಪ್ರೂಫ್ ಆಫ್ ಕಾನ್ಸೆಪ್ಟ್) ಯೋಜನೆಯಡಿ ಈ ನವೋದ್ಯಮಕ್ಕೆ ಅನುದಾನ ನೀಡಲಾಗಿದೆ. ಚೋಳನ್ ಟೂರ್ಸ್ ಸಂಸ್ಥೆಯು ಪಿನಾಕಿನ್ನಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದು, ಆ್ಯಪ್ ಅಭಿವೃದ್ಧಿಗೆ ಇಂಬು ನೀಡಿದಂತಾಗಿದೆ.
80 ಸಾವಿರ ಡೌನ್‌ಲೋಡ್: ತಮಿಳು, ಕನ್ನಡ, ಇಂಗ್ಲಿಷ್, ಹಿಂದಿ, ಫ್ರೆಂಚ್ ಭಾಷೆಯಲ್ಲಿ ಲಭ್ಯವಿರುವ ಈ ಆ್ಯಪ್ನ ಆ್ಯಂಡ್ರಾಯ್ಡ್ ವರ್ಷನ್ 80 ಸಾವಿರ ಹಾಗೂ ಐಫೋನ್ ವರ್ಷನ್ 22 ಸಾವಿರ ಡೌನ್‌ಲೋಡ್ ಆಗಿದೆ.
ರಾಜ್ಯದ ನೂರಕ್ಕೂ ಹೆಚ್ಚು ಪ್ರವಾಸಿ ತಾಣಗಳ ಆಡಿಯೊ ಗೈಡ್ ಆ್ಯಪ್‌ನಲ್ಲಿ ಲಭ್ಯವಾಗುವಂತೆ ಮಾಡುವುದು ಆ್ಯಪ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಅಯ್ಯರ್ ಅವರ ಮಹದಾಸೆ.

Conclusion: