ETV Bharat / bharat

ಆರ್​ಜೆಡಿ ಮುಖ್ಯಸ್ಥ ಲಾಲೂಗೆ ಮತ್ತೆ ಸಂಕಷ್ಟ: ಜಾರ್ಖಂಡ್​ ಹೈಕೋರ್ಟ್​ನಲ್ಲಿ ಪಿಐಎಲ್​ ಸಲ್ಲಿಕೆ - ಜಾರ್ಖಂಡ್​ ಸುದ್ದಿ 2020

ಆರ್​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ವೈರಲ್​ ಆಡಿಯೋ ಆಧಾರದ ಮೇಲೆ ಭಾರತೀಯ ಜನತಾ ಪಕ್ಷದ ಮುಖಂಡ ಅನುರಂಜನ್ ಅಶೋಕ್ ಅವರು ಜಾರ್ಖಂಡ್​ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದಾರೆ.

ಆರ್​ಜೆಡಿ ಮುಖ್ಯಸ್ಥ ಲಾಲೂ
ಆರ್​ಜೆಡಿ ಮುಖ್ಯಸ್ಥ ಲಾಲೂ
author img

By

Published : Nov 26, 2020, 4:20 PM IST

ರಾಂಚಿ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತೊಮ್ಮೆ ತೊಂದರೆಯಲ್ಲಿ ಸಿಲುಕಿದ್ದಾರೆ. ವೈರಲ್ ಆಡಿಯೋಗೆ ಸಂಬಂಧಿಸಿದಂತೆ ಲಾಲು ಪ್ರಸಾದ್ ವಿರುದ್ಧ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಎನ್ಐಎ ತನಿಖೆಗೆ ಒತ್ತಾಯ: ಭಾರತೀಯ ಜನತಾ ಪಕ್ಷದ ಮುಖಂಡ ಅನುರಂಜನ್ ಅಶೋಕ್ ಅವರು ಬಿಹಾರದ ಮಾಜಿ ಮುಖ್ಯಮಂತ್ರಿ ಮೇವು ಹಗರಣ ಪ್ರಕರಣದ ವೈರಲ್ ಆಡಿಯೋ ಆಧಾರದ ಮೇಲೆ ಜಾರ್ಖಂಡ್​ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದಾರೆ.

ಅರ್ಜಿದಾರರ ಪರ ವಕೀಲ ರಾಜೀವ್ ಕುಮಾರ್ ಮಾತನಾಡಿ, ಜೈಲಿನಲ್ಲಿ ಫೋನ್ ಬಳಕೆ ಮತ್ತು ಫೋನ್ ಬದಲಾಯಿಸುವಂತೆ ಮಾತನಾಡಿರುವ ವೈರಲ್ ಆಡಿಯೋವನ್ನು ಆಧಾರವಾಗಿರಿಸಲಾಗಿದ್ದು, ಜೈಲಿನಿಂದ ಬಿಡುಗಡೆ ಹೊಂದಲು ನಡೆಸಿದ ತಂತ್ರಗಳ ಬಗ್ಗೆ ಪಿಐಎಲ್​ನಲ್ಲಿ ನಮೂದಿಸಲಾಗಿದೆ. ಅಷ್ಟೇ ಅಲ್ಲದೇ, ಜೈಲು ನಿಯಮಗಳನ್ನು ಉಲ್ಲಂಘನೆ ಸಹ ಮಾಡಲಾಗಿದೆ.

ಈ ಹಿಂದೆ ಸಲ್ಲಿಸಿದ್ದ ಅರ್ಜಿಯಲ್ಲಿ ಲಾಲು ಪ್ರಸಾದ್ ಜೈಲಿನಿಂದ ರಾಜಕೀಯ ತಂತ್ರಗಳನ್ನು ಮಾಡುತ್ತಿದ್ದು, ಬಿಹಾರ ಸರ್ಕಾರ ಉರುಳಿಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.