ETV Bharat / bharat

ಪ್ರಕೃತಿ ಪೂಜಿಸಿದರೆ ಫಲ, ಮುನಿದರೆ ಶಾಪ... ಪ್ಲಾಸ್ಟಿಕ್​ ಬಳಕೆಗೆ ಇರಲಿ ಕಡಿವಾಣ

ಜನರು ತಮ್ಮ ನಿತ್ಯದ ಬದುಕಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್​ ಬಳಸುತ್ತಾರೆ. ಹೀಗೆ ವ್ಯಾಪಕವಾಗಿ ಬಳಸಿರುವ ಪ್ಲಾಸ್ಟಿಕ್​ ಈಗ ಮಾನವರಿಗೇ ಶಾಪವಾಗಿ ಕಾಡುತ್ತಿದೆ. ಇಂತಹದೊಂದು ನಿದರ್ಶನ ಇಲ್ಲಿದೆ ನೋಡಿ.

Kerala road
author img

By

Published : Aug 12, 2019, 3:14 PM IST

ಪಾಲಕ್ಕಾಡ್(ಕೇರಳ): ಜನರು ತಮ್ಮ ನಿತ್ಯದ ಬದುಕಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್​ ಬಳಸುತ್ತಾರೆ. ಹೀಗೆ ವ್ಯಾಪಕವಾಗಿ ಬಳಸಿರುವ ಪ್ಲಾಸ್ಟಿಕ್​ ಈಗ ಮಾನವರಿಗೇ ಶಾಪವಾಗಿ ಕಾಡುತ್ತಿದೆ. ಇಂತಹದೊಂದು ನಿದರ್ಶನ ಇಲ್ಲಿದೆ ನೋಡಿ.

ಇತ್ತೀಚಿನ ದಿನಗಳಲ್ಲಿ ಬಳಸಿದಂತಹ ಪ್ಲಾಸ್ಟಿಕ್​ ಬಾಟಲ್ಸ್​, ಪ್ಲಾಸ್ಟಿಕ್​​ ಕವರ್​ಗಳನ್ನು ಜನರು ಎಲ್ಲಿ ಬೇಕೆಂದರಲ್ಲಿ ಎಸೆಯುತ್ತಾರೆ. ಅದರಲ್ಲೂ ಹೆಚ್ಚಾಗಿ ಕಡಲ ತೀರದ ಪ್ರದೇಶಗಳಲ್ಲಿ ಪ್ರವಾಸಕ್ಕೆಂದು ಹೋದವರು ಕಡಲ ತೀರದಲ್ಲೇ ಪ್ಲಾಸ್ಟಿಕ್​ ಬಾಟಲ್ಸ್​ನ್ನು ಎಸೆದು ನಿರ್ಲಕ್ಷ್ಯ ತೋರುತ್ತಾರೆ. ಹೀಗೆ ಎಸೆದ ಪ್ಲಾಸ್ಟಿಕ್​ ವಸ್ತುಗಳು ಈಗ ಮಳೆಯಿಂದಾಗಿ ಭೂ ತಾಯಿ ಈ ಎಲ್ಲ ತ್ಯಾಜ್ಯಗಳನ್ನು ಹೊರಹಾಕುತ್ತಿದ್ದಾಳೆ.

ಕಳೆದ ಕೆಲವು ವರ್ಷಗಳಿಂದ ನಾವು ನದಿ, ಸಾಗರ, ಸರೋವರ ತೀರಗಳ ಅಕ್ಕ ಪಕ್ಕದಲ್ಲಿ ಪ್ಲಾಸ್ಟಿಕ್​ ವಸ್ತುಗಳು ಹರಡಿರುವುದನ್ನು ಕಂಡಿದ್ದೇವೆ. ಆದರೆ, ಭೂ ತಾಯಿ ಜನರು ಏನೇ ತನ್ನ ಒಡಲಲ್ಲಿ ಹಾಕಿದರೂ ಬೇಡ ಎನ್ನದೇ ಎಲ್ಲವನ್ನು ಸ್ವೀಕರಿದ್ದಾಳೆ. ಇಷ್ಟಾದರೂ ಪ್ಲಾಸ್ಟಿಕ್​ ಬಳಕೆಯ ಪ್ರಮಾಣದಲ್ಲಿ ಮಾತ್ರ ಕಡಿಮೆಯಾಗಿಲ್ಲ. ಆದರೆ, ಕೆಲವು ದಿನಗಳಿಂದ ರಾಜ್ಯಾದ್ಯಂತ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದು, ಇದರಿಂದ ಮನಿಸಿಕೊಂಡ ಪ್ರಕೃತಿ ತನ್ನ ಅಂತರಾಳದಲ್ಲಿ ಅಡಗಿದ್ದ ಪ್ಲಾಸ್ಟಿಕ್​ ವಸ್ತುಗಳನ್ನು ಜನರಿಗೆ ಪುನಃ ಹಿಂತಿರುಗಿಸುವ ಮೂಲಕ ತನ್ನ ಪ್ರತಾಪವನ್ನು ತೋರಿಸಿದೆ.

ಈ ಸಂಬಂಧ ಪ್ರವೀಣ್​ ಕಸ್ವನ್​ ಎಂಬ ಅರಣ್ಯಾಧಿಕಾರಿವೋರ್ವರು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ನದಿ ತೀರದಲ್ಲಿ ರಾಶಿಗಟ್ಟಲೇ ಸಂಗ್ರಹಗೊಂಡಿರುವ ಪ್ಲಾಸ್ಟಿಕ್​ ವಸ್ತುಗಳ ಫೋಟೊವೊಂದನ್ನು ಶೇರ್ ಮಾಡಿದ್ದು, ''ಹೋಮ್​ ಡೆಲಿವರಿ!! ಇದು ಕೇರಳದ ಪಾಲಕ್ಕಾಡ್ ಪ್ರದೇಶದ ನದಿ ತೀರದಲ್ಲಿ ಸಂಗ್ರಹವಾಗಿರುವಂತಹ ಪ್ಲಾಸ್ಟಿಕ್​ ವಸ್ತುಗಳ ಚಿತ್ರಣ. ಮಾನವ ಕೊಟ್ಟಿದ್ದ ಉಡುಗೊರೆಯನ್ನು ಪ್ರಕೃತಿ ಪುನಃ ಮಾನವನಿಗೆ ಹಿಂದಿರುಗಿಸಿದೆ'' ಎಂಬ ಮಾರ್ಮಿಕ ಶಿರ್ಷಿಕೆಯನ್ನು ನೀಡಿ ಪೋಸ್ಟ್ ಮಾಡಿದ್ದರು.

ಇದು ಕೇರಳದಲ್ಲಿ ಉಂಟಾದ ಪ್ರವಾಹದಲ್ಲಿ ಕಂಡು ಬಂದಂತಹ ದೃಶ್ಯಗಳಾಗಿವೆ. ಈ ಒಂದು ಫೋಟೊವನ್ನು ಅಧಿಕಾರಿ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಜನರು ವಿವಿಧ ರೀತಿಯಾದ ಶಿರ್ಷಿಕೆಯನ್ನು ನೀಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಕೇವಲ ಕೇರಳದಲ್ಲಿ ಮಾತ್ರವಲ್ಲದೇ ಎಲ್ಲೆಲ್ಲಿ ಮಳೆಯಾಗಿದೆಯೋ ಆಯಾ ಪ್ರದೇಶಗಳಲ್ಲಿನ ಕಡಲ ತೀರದಲ್ಲಿ ಇಂತಹದ್ದೇ ದೃಶ್ಯಗಳು ಕಂಡು ಬರುತ್ತಿವೆ. ಪ್ರಕೃತಿ ಮುನಿಸಿಕೊಂಡರೆ ಯಾವೆಲ್ಲ ಅನಾಹುತಗಳು ಸಂಭವಿಸಬಹುದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ.

Intro:Body:

national

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.