ETV Bharat / bharat

ಪೆಟ್ರೋಲ್​- ಡೀಸೆಲ್​​: ದೇಶಾದ್ಯಂತ ಎಲ್ಲೆಲ್ಲಿ ಎಷ್ಟು ಬೆಲೆ ಏರಿಕೆ... ಇಲ್ಲಿದೆ ಡೀಟೇಲ್ಸ್​ - ಡಿಸೇಲ್​​​​ ಬೆಲೆ

ಡಿಸೇಲ್​​​​ನ ಬೆಲೆಯಲ್ಲಿ 14 ಪೈಸೆ ಹೆಚ್ಚಳವಾಗಿದ್ದು, ಒಟ್ಟಾರೆ ಲೀಟರ್​​​ಗೆ ಗ್ರಾಹಕ 80.02 ರೂ. ತೆರಬೇಕಿದೆ. ಅಂದ ಹಾಗೆ ದೇಶದಲ್ಲಿ ಇದೇ ಮೊದಲ ಬಾರಿಗೆ ನಿನ್ನೆಯಿಂದ ದೆಹಲಿಯಲ್ಲಿ ಪೆಟ್ರೋಲ್​​​ಗಿಂತ ಡೀಸೆಲ್ ಬೆಲೆ ಏರಿಕೆಯಾಗಿದೆ.

ಸತತ 19ನೇ ದಿನವೂ ಇಂಧನ ಬೆಲೆ ಏರಿಕೆ
ಸತತ 19ನೇ ದಿನವೂ ಇಂಧನ ಬೆಲೆ ಏರಿಕೆ
author img

By

Published : Jun 25, 2020, 7:10 AM IST

Updated : Jun 25, 2020, 2:25 PM IST

ನವದೆಹಲಿ: ಸತತ 19ನೇ ದಿನವೂ ತೈಲಬೆಲೆಯಲ್ಲಿ ಹೆಚ್ಚಳವಾಗಿದ್ದು, ರಾಷ್ಟ್ರರಾಜಧಾನಿಯಲ್ಲಿ ಪ್ರತಿ ಲೀಟರ್​ ಡೀಸೆಲ್​ ಬೆಲೆ 80 ರೂ. ಗಡಿ ತಲುಪಿದೆ.

ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಲೀಟರ್​ ಪೆಟ್ರೋಲ್​ಗೆ ಇಂದು 16 ಪೈಸೆ, ಡೀಸೆಲ್​​ಗೆ ​14 ಪೈಸೆ ಹೆಚ್ಚಿಸಿವೆ. ಈ ಮೂಲಕ 3 ವಾರದೊಳಗಡೆ ಪೆಟ್ರೋಲ್​​ ಮೇಲೆ ಒಟ್ಟು 8.66 ರೂ. ಹಾಗೂ ಡೀಸೆಲ್​ ಮೇಲೆ 10.63 ರೂ. ಏರಿಕೆಯಾದಂತಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ದೇಶದಲ್ಲಿಇದೇ ಮೊದಲ ಬಾರಿಗೆ ನಿನ್ನೆಯಿಂದ ಪೆಟ್ರೋಲ್​​​ಗಿಂತ ಡೀಸೆಲ್​ಗೆ ಗ್ರಾಹಕರು ಹೆಚ್ಚಿನ ಬೆಲೆ ತೆರಬೇಕಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ತೆರಿಗೆ ನೀತಿ ಇದಕ್ಕೆ ಕಾರಣವಾಗಿದೆ.

ದೇಶದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್​ ಹಾಗೂ ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್​, ಡೀಸೆಲ್ ದರ ಹೀಗಿವೆ.

Petrol and diesel prices at Rs 79.92/litre
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್​, ಡೀಸೆಲ್ ದರ

ಇತ್ತ ವ್ಯಾಪಾರ ವಹಿವಾಟು ಕೂಡ ಕ್ಷೀಣಿಸಿದ್ದು, ದುಡ್ಡಿಲ್ಲದ ಈ ಹೊತ್ತಿನಲ್ಲಿ ಇಂಧನ ಬೆಲೆಯಲ್ಲಿ ದಿನೇ ದಿನೆ ಏರಿಕೆ ಕಾಣುತ್ತಿರುವುದರಿಂದ ಜನರು ಕಂಗಾಲಾಗಿದ್ದಾರೆ.

Last Updated : Jun 25, 2020, 2:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.