ಹೈದರಾಬಾದ್: ಮಾನವ ಮತ್ತು ಪ್ರಾಣಿಗಳ ಜೀವನಕ್ಕೆ ಕೆಟ್ಟ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಅವುಗಳ ವಿಷಕಾರಿ ಪರಿಣಾಮಗಳಿಂದಾಗಿ 27 ಕೀಟನಾಶಕಗಳನ್ನು ನಿಷೇಧ ಮಾಡುವ ಕುರಿತಂತೆ ಮೇ 14 ರಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಆಕ್ಷೇಪಣೆ ಸಲ್ಲಿಸಲು ಮತ್ತು ಸಲಹೆ ನೀಡಲು ಸರ್ಕಾರ 45 ದಿನಗಳ ಕಾಲಾವಕಾಶ ನೀಡಿದೆ.
ತಿರಾಮ್, ಕ್ಯಾಪ್ಟನ್, ಡೆಲ್ಟಾಮೆಥ್ರಿನ್ ಮತ್ತು ಕಾರ್ಬೆಂಡಿಜ್ಮ್, ಮಾಲಾಥಿಯಾನ್ ಮತ್ತು ಕ್ಲೋರ್ಪಿರಿಫೊಸ್ ಇತ್ಯಾದಿ ನಿಷೇಧದ ಪಟ್ಟಿಯಲ್ಲಿರುವ ವಿಷಕಾರಿ 27 ರಾಸಾಯನಿಕಗಳಾಗಿವೆ. ಇದರ ಜೊತೆಗೆ, ಡಿಡಿವಿಪಿ ಅಥವಾ ಡಿಕ್ಲೋರ್ವೋಸ್ ಎಂಬ ಮತ್ತೊಂದು ರಾಸಾಯನಿಕವನ್ನು ಡಿಸೆಂಬರ್ 31 ರ ನಂತರ ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಈ ಕೀಟನಾಶಕಗಳಲ್ಲಿ ಹೆಚ್ಚಿನವು ಹೆಚ್ಚು ವಿಷಕಾರಿಯಾಗಿದೆ ಮತ್ತು ಹೊಸ ಮಾಲಿ ಕ್ಯೂಲ್ಸ್ ಮತ್ತು ಜೈವಿಕ ಕೀಟನಾಶಕಗಳು ಜಗತ್ತಿನಲ್ಲಿ ಲಭ್ಯವಿರುವುದರಿಂದ ಅವುಗಳನ್ನು ಸುರಕ್ಷಿತವಾಗಿ ಬದಲಿಸುವ ಸಾಧ್ಯತೆ ಇರುವುದರಿಂದ ಸರ್ಕಾರವು ಪರಿಸರ ಸುರಕ್ಷಿತ ಭಾರತದತ್ತ ಒಂದು ಬಹು ದೊಡ್ಡ ಹೆಜ್ಜೆ ಇಡುತ್ತಿದೆ. ರೈತರು ಮತ್ತು ಭಾರತೀಯ ಆರ್ಥಿಕತೆಯ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಈ ಕಾರ್ಯಕ್ಕೆ ಮುಂದಾಗಿದೆ. ಕೇಂದ್ರ ಕೈಗೊಂಡಿರುವ ಈ ನಿರ್ಧಾರವನ್ನ ಸ್ವಾಗತಿಸಿ, ಸಂಭ್ರಮಿಸುವವರಲ್ಲಿ ಜೇನುನೊಣ ಸಾಕುವವರು, ಸಾವಯವ ಕೃಷಿಕರು, ಮಸಾಲೆ ಉದ್ಯಮದಂತಹ ಅನೇಕ ಸಾವಯವ ಜಗತ್ತಿನ ಕೈಗಾರಿಕೆಗಳು ಸೇರಿವೆ.
ಆದರೆ ವಿಷಕಾರಿ ಕೀಟನಾಶಕ ರಾಸಾಯನಿಕ ಪರಿಣಾಮ ಕುರಿತಂತೆ ನಾವು ಅದನ್ನು ಬೀಜ ಉದ್ಯಮದ ದೃಷ್ಟಿಕೋನದಿಂದ ಪರಿಶೀಲಿಸಬೇಕಾದ ಅಗತ್ಯವಿದೆ. ಬೆಳೆಗಳ ಮೇಲೆ ಕೀಟನಾಶಕ ಬಳಸುವುದರ ಜೊತೆಗೆ, ನಿಷೇಧಿತ ವಿಷಕಾರಿ ಕೀಟನಾಶಕಗಳನ್ನು ಬೀಜ ಸಂಸ್ಕರಣಾ ಉತ್ಪನ್ನಗಳಾಗಿ ವ್ಯಾಪಕವಾಗಿ ಈ ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಮುಖ್ಯವಾಗಿ ಬೀಜ ಮತ್ತು ಮಣ್ಣಿನಿಂದ ಹರಡುವ ರೋಗಗಳು ಮತ್ತು ಕೀಟಗಳ ವಿರುದ್ಧ ಬೀಜ ರಕ್ಷಕರಾಗಿ ಬಳಸಲಾಗುತ್ತದೆ. ಬೀಜ ಸಂಸ್ಕರಣಾ ರಾಸಾಯನಿಕಗಳಾಗಿ ಬಳಸುವ ಪ್ರಮುಖ ಕೀಟನಾಶಕಗಳು ಎಂದರೆ ಥಿರಾಮ್, ಕ್ಯಾಪ್ಟನ್, ಡೆಲ್ಟಾಮೆಥ್ರಿನ್ ಮತ್ತು ಕಾರ್ಬೆಂಡಿಜ್ಮ್ ಗಳಾಗಿವೆ ಎಂದು ಸರ್ಕಾರ ಮಾಡಿರುವ ಪಟ್ಟಿಯಲ್ಲಿ ಪ್ರಸ್ತಾಪ ಮಾಡಲಾಗಿದೆ.
ಹಲವು ವರ್ಷಗಳಿಂದ ಮೆಕ್ಕೆಜೋಳ, ಬಜ್ರಾ, ಸೋರ್ಗಮ್, ಸೂರ್ಯಕಾಂತಿ, ಸಾಸಿವೆ ಮತ್ತು ತರಕಾರಿಗಳಿಗೆ ಮಣ್ಣಿನಿಂದ ಹರಡುವ ಕೀಟಗಳ ವಿರುದ್ಧ ಬಳಸುವ ಬೀಜ ಸಂಸ್ಕರಣೆಯ ಕೀಟನಾಶಕಗಳಲ್ಲಿ ಡೆಲ್ಟಾಮೆಥ್ರಿನ್ ಕೂಡ ಒಂದು. ಕಾರ್ಬೆಂಡಜಿಮ್ ಜೊತೆಗೆ ಇದು ಸಾಕಷ್ಟು ಅಗ್ಗವೂ ಆಗಿದ್ದು ಈ ಉಧ್ಯಮದಲ್ಲಿ ಹಲವು ದಶಕಗಳಿಂದ ಇದನ್ನು ಬಳಸಲಾಗುತ್ತಿದೆ, ಇದು ತುಂಬಾ ಕಡಿಮೆ ಬೆಳೆಗೆ ಸಿಗುವ ಜೊತೆಗೆ ಜನಪ್ರಿಯ ಶಿಲೀಂಧ್ರನಾಶಕವಾಗಿದೆ.
ನಾವು ಕೀಟನಾಶಕ ತಿರಾಮ್ ಬಗ್ಗೆ ಮಾತನಾಡುವುದಾದರೇ, ಬೀಜ-ಸಂಸ್ಕರಣೆ-ಶಿಲೀಂಧ್ರನಾಶಕಗಳಿಗೆ ಹೆಚ್ಚು ಪರಿಣಾಮಕಾರಿ ಆಯ್ಕೆಯಾಗಿದೆ. ಪ್ರಮುಖ ಬೀಜದಿಂದ ಹರಡುವ ಮತ್ತು ಮಣ್ಣಿನಿಂದ ಹರಡುವ ರೋಗಗಳು ಅಥವಾ ರೋಗಕಾರಕಗಳ ವಿರುದ್ಧ ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕವಾಗಿದೆ. ಇದಲ್ಲದೆ, ಪ್ರಾಥಮಿಕವಾಗಿ ಭತ್ತ, ದ್ವಿದಳ ಧಾನ್ಯಗಳಂತಹ ತೆರೆದ ಪರಾಗಸ್ಪರ್ಶ ಪ್ರಭೇದಗಳೊಂದಿಗೆ ವ್ಯವಹರಿಸುವ ಬೀಜ ಉತ್ಪಾದಕರ ವಿಷಯದಲ್ಲಿ ಇದು ಹೆಚ್ಚು ಕಡ್ಡಾಯವಾಗುತ್ತದೆ, ಯಾಕೆಂದರೆ, ಮಿಶ್ರತಳಿಗಳು ಅಥವಾ ಜೀವಾಂತರ ಬೆಳೆಗಳಿಗೆ ಹೋಲಿಸಿದರೆ ಅತಿ ಹೆಚ್ಚು ಅಗ್ಗವಾಗಿದೆ. ಮಿಶ್ರ ತಳಿ ಬೀಜ ಉತ್ಪಾದಕರು ಇವುಗಳಿಂದ ಲಾಭಾಂಶವು ತುಂಬಾ ಕಡಿಮೆ ಇರುವುದರಿಂದ ದುಬಾರಿ ಬೆಳೆಯ ಕೀಟನಾಶಕಗಳನ್ನು ಕೊಂಡು ಬಳಸಲು ಸಾಧ್ಯವಿಲ್ಲ.
ಗೋಧಿ ಮತ್ತು ಭತ್ತದಂತಹ ಬೆಳೆಗಳ ಸಂದರ್ಭದಲ್ಲಿ ತಿರಮ್ ಮತ್ತು ಕಾರ್ಬೆಂಡಜಿಮ್‌ನ ಅನುಮತಿಯನ್ನು ಸಹ ಪರಿಗಣಿಸಬಹುದು, ಅಂದರೆ ಒಂದು ಯೂನಿಟ್ ಪ್ರದೇಶಕ್ಕೆ ಬೀಜದ ಅವಶ್ಯಕತೆ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿರುವ (20 ಕೆಜಿಯಿಂದ 40 ಕೆಜಿ) ಮತ್ತು ಪ್ರತಿ ಕೆಜಿಗೆ ಬೀಜದ ಬೆಲೆ 30 ರೂ.ಗಿಂತ ಕಡಿಮೆ ಇರುವಲ್ಲಿ ಈ ರಾಸಾಯನಿಕವನ್ನು ಪರಿಗಣಿಸಬಹುದು. ಯಾಕೆಂದರೆ, ಹೊಸದಾಗಿ ಶಿಫಾರಸು ಮಾಡಲಾದ ದುಬಾರಿ ರಾಸಾಯನಿಕಗಳಿಗೆ ಹೋಲಿಸಿದರೆ ಈ ರಾಸಾಯನಿಕಗಳಿಂದ ಬೀಜ ಸಂಸ್ಕರಣೆಯ ವೆಚ್ಚವು ತುಂಬಾ ಕಡಿಮೆಯಾಗಿರುವುದರಿಂದ ಬೀಜ ಸಂಸ್ಕರಣೆಯು ಬಹುಪಾಲು ಲಾಭ ಬೀಜ ಕಂಪನಿಗಳಿಗೆ ಮತ್ತು ರೈತರಿಗೆ ಸಿಗುತ್ತದೆ.
ಈ ರಾಸಾಯನಿಕಗಳ ನಿಷೇಧದ ಆದೇಶವನ್ನು ಜಾರಿಗೆ ತರುವ ಮೊದಲು ಉದ್ದೇಶಿತ ಕರಡು ನಿಷೇಧದ ಆದೇಶವನ್ನು ಗಮನದಲ್ಲಿಟ್ಟುಕೊಂಡು ಬೀಜ ಸಂಸ್ಕರಣೆಗಾಗಿ ಸರ್ಕಾರವು ಪರ್ಯಾಯ ರಾಸಾಯನಿಕಗಳು / ಕೀಟನಾಶಕಗಳನ್ನು ಪ್ರಸ್ತಾಪಿಸಬಹುದು. ಪ್ರಸ್ತಾಪಿಸಲಾದ ಪರ್ಯಾಯ ರಾಸಾಯನಿಕಗಳು / ಅಣುಗಳು(molecules) ಕೆಲ ನಿಯಂತ್ರಕ ಪ್ರಯೋಗಗಳನ್ನು ಸಹ ಪೂರ್ಣಗೊಳಿಸಬೇಕಾಗಿದೆ, ಇದಕ್ಕಾಗಿ ಅಸ್ತಿತ್ವದಲ್ಲಿರುವ ಕೀಟನಾಶಕಗಳನ್ನು ನಿಷೇಧಿಸುವ ಮೊದಲು ಹಂತ ಹಂತದ ವಿಧಾನದ ಅಳವಡಿಕೆ ಅವಶ್ಯಕತೆ ಇದೆ.
ಮತ್ತೊಂದು ಪ್ರಮುಖ ಅಂಶವೆಂದರೆ, ಹೊಸದಾಗಿ ಪರಿಚಯಿಸಲು ಉದ್ದೇಶಿಸಿರುವ ರಾಸಾಯನಿಕಗಳು / ಅಣುಗಳು(molecules) ರೈತರಿಗೆ ಮತ್ತು ಬೀಜ ಉತ್ಪಾದಕರಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಾ ಎಂಬುದಾಗಿದೆ. ಅವುಗಳ ಬೆಲೆ ಹೆಚ್ಚಾಗಿದ್ದರೆ, ಅವು ಬೀಜಗಳ ಉತ್ಪಾದನಾ ಬೆಲೆ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ ಮತ್ತು ರೈತರು ಕೊಳ್ಳುವ ಬೀಜದ ಬೆಲೆ ದುಬಾರಿಯಾಗಲು ಕಾರಣವಾಗುತ್ತದೆ. ಮೇಲೆ ತಿಳಿಸಿದಂತೆ ಹೊಸದಾಗಿ ಬರುವ ರಾಸಾಯನಿಕಗಳು ಅಸ್ತಿತ್ವದಲ್ಲಿರುವ ಗುಣಮಟ್ಟದ ಬೀಜ ಸಂಸ್ಕರಣಾ ರಾಸಾಯನಿಕಗಳ ರೀತಿ ಕೈಗೆಟುಕುವ ದರ ಮತ್ತು ಸೂಕ್ತವಾದ ಗುಣಮಟ್ಟ ಕಾಯ್ದುಕೊಳ್ಳುವ ಪರ್ಯಾಯ ಆಗದೆ ಹೋದರೆ, ಬೀಜ ಮತ್ತು ಮಣ್ಣಿನಿಂದ ಹರಡುವ ರೋಗಗಳಿಂದಾಗಿ ರೈತರು ಭಾರಿ ನಷ್ಟವನ್ನು ಅನುಭವಿಸಬಹುದು, ಇದು ಒಟ್ಟಾರೆ ಉತ್ಪಾದಕತೆ ಮತ್ತು ರೈತರ ಲಾಭದಾಯಕತೆಯನ್ನು ಕಡಿಮೆ ಮಾಡಲು ಕಾರಣವಾಗಬಹುದು, ಬೀಜ ಉದ್ಯಮ ಮತ್ತು ಕೃಷಿ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.
ಬಳಕೆಯಲ್ಲಿರುವ ರಾಸಾಯನಿಕಗಳ ನಿಷೇಧವು ಆದೇಶವು 3 ರಿಂದ 4 ವರ್ಷಗಳಲ್ಲಿ ಹಂತ ಹಂತವಾಗಿ ಕಾರ್ಯಗತ ಮಾಡಬೇಕಾದ ಅಗತ್ಯವಿದೆ. ಇದರಿಂದಾಗಿ ಸರ್ಕಾರದ ನಿಷೇಧದ ಪಟ್ಟಿಯಲ್ಲಿರುವ ಬಳಕೆಯಲ್ಲಿರುವ ರಾಸಾಯನಿಕಗಳ ದಾಸ್ತಾನು ಮತ್ತು ಅವುಗಳಿಂದ ಸಂಸ್ಕರಣೆ ಮಾಡಿದ ಬೀಜದ ದಾಸ್ತಾನು ಖಾಲಿಯಾಗುತ್ತದೆ. ಇದರ ಜೊತೆಗೆ, ಮಾರುಕಟ್ಟೆಗೆ ಬಂದಿರುವ ಭಾರೀ ಪ್ರಾಮಾಣದ ಬೀಜ ದಾಸ್ತಾನನ್ನ ಅದರ ಅವಧಿ ಮುಗಿಯುವವರೆಗೂ ಮಾರಾಟಕ್ಕೆ ಅವಕಾಶ ಕಲ್ಪಿಸಿ ಕೊಡಬೇಕು.
ರೈತರಿಗೆ ಮತ್ತು ಬೀಜ ಉದ್ಯಮಕ್ಕೆ ಪರಿಣಾಮಕಾರಿ ಪರಿಹಾರವನ್ನು ಒದಗಿಸಲು ರಾಸಾಯನಿಕ ಕೀಟನಾಶಕ ಬೀಜ ಸಂಸ್ಕರಣೆಯ ಜೊತೆಗೆ ಜೈವಿಕ ಮತ್ತು ನ್ಯಾನೊ-ತಂತ್ರಜ್ಞಾನ ಆಧಾರಿತ ಬೀಜೋಪಚಾರಗಳನ್ನು ಭಾರತ ಸರ್ಕಾರ ಪರಿಗಣಿಸಬಹುದು. ಪ್ರಕೃತಿಯೊಂದಿಗೆ ಪ್ರಕೃತಿಯೊಂದಿಗೆ ಹೋರಾಡುವುದು ಹೆಚ್ಚು ಉತ್ತಮವಾದ ಕಾರಣ, ಜೈವಿಕ ನಿಯಂತ್ರಣ ಏಜೆಂಟ್ ಮತ್ತು ನ್ಯಾನೊ-ತಾಂತ್ರಿಕ ಮಧ್ಯಸ್ಥಿಕೆಗಳನ್ನು ಅಭಿವೃದ್ಧಿಪಡಿಸಲು ಸಾರ್ವಜನಿಕ ವ್ಯವಸ್ಥೆಗಳಾದ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಮತ್ತು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (IARI) ಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ (R & D) ಅನ್ನು ನಿರ್ಮಿಸುವ ಅವಶ್ಯಕತೆಯಿದೆ. ನಮ್ಮ ಪರಿಸರದಲ್ಲೇ ಲಕ್ಷಾಂತರ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿವೆ, ಇವು ಪರಿಸರಕ್ಕೆ ಹಾನಿಯಾಗದಂತೆ ಕೀಟಗಳು ಮತ್ತು ರೋಗಗಳ ವಿರುದ್ಧ ಹೋರಾಡುವ ಮೂಲಕ ನಮಗೆ ನೈಸರ್ಗಿಕವಾಗಿ ಸಹಾಯ ಮಾಡಿ, ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ
ಈ ಹೊಸ ಉತ್ಪನ್ನಗಳನ್ನು ಸಾರ್ವಜನಿಕ ವ್ಯವಸ್ಥೆಯೊಳಗೆ ಅಭಿವೃದ್ಧಿ ಮಾಡುವ ಕೆಲಸ ಮಾಡುವುದರಿಂದ, ಅವು ಪೇಟೆಂಟ್ ಮುಕ್ತವಾಗಿರುತ್ತವೆ ಮತ್ತು ಕೃಷಿ ಮತ್ತು ಕೃಷಿ ಸಂಬಂಧಿತ ವಲಯದ ಅಧಿಕ ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಅಂತಿಮವಾಗಿ ಇದರಿಂದ ಭಾರತದ ರೈತರಿಗೆ ಮತ್ತು ಪರಿಸರಕ್ಕೆ ಅನುಕೂಲವಾಗುತ್ತದೆ.
ಲೇಖಕರು- ಇಂದ್ರ ಶೇಖರ್ ಸಿಂಗ್, ನಿರ್ದೇಶಕರು, ಪಾಲಿಸಿ ಅಂಡ್ ಔಟ್ ರೀಚ್ ಅಂಡ್ ನ್ಯಾಷನಲ್ ಸೀಡ್ ಅಸೋಸಿಯೇಷನ್ ಆಫ್ ಇಂಡಿಯಾ