ETV Bharat / bharat

ಬ್ಯಾಟ್​ನಿಂದ ಹಲ್ಲೆ ಮಾಡಿದ ಶಾಸಕನ ವಿರುದ್ಧ ಪ್ರಧಾನಿ ಗರಂ: ಆಕಾಶ್​ಗೆ ಉಚ್ಛಾಟನೆ ಭೀತಿ? - undefined

ಸರ್ಕಾರಿ ಅಧಿಕಾರಿಯನ್ನು ಸಾರ್ವಜನಿಕವಾಗಿ ಬ್ಯಾಟ್​ನಿಂದ ಥಳಿಸಿದ ಬಿಜೆಪಿ ಶಾಸಕ ಆಕಾಶ್​ ವಿಜಯ್​ ವರ್ಗಿಯಾ ವರ್ತನೆ ಕುರಿತಾಗಿ ಅಸಮಾಧಾನ ಹೊರಹಾಕಿರುವ ಮೋದಿ, ಇಂತಹ ವ್ಯಕ್ತಿಗಳನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಪಕ್ಷದ ಸಂಸದೀಯ ಸಭೆಯಲ್ಲಿ ಆಕ್ರೋಶದಿಂದ ಹೇಳಿದ್ದಾರೆ ಎನ್ನಲಾಗಿದೆ.

ಪ್ರಧಾನಿ ಮೋದಿ
author img

By

Published : Jul 2, 2019, 12:38 PM IST

ನವದೆಹಲಿ: ಸರ್ಕಾರಿ ಅಧಿಕಾರಿಯನ್ನು ಸಾರ್ವಜನಿಕವಾಗಿ ಬ್ಯಾಟ್​ನಿಂದ ಥಳಿಸಿದ ಬಿಜೆಪಿ ಶಾಸಕ ಆಕಾಶ್​ ವಿಜಯ್​ವರ್ಗಿಯಾ ವಿರುದ್ಧ ಪ್ರಧಾನಿ ಮೋದಿ ಗರಂ ಆಗಿದ್ದಾರೆ.

ವಿಜಯ್​ ವರ್ತನೆ ಕುರಿತಾಗಿ ಅಸಮಾಧಾನ ಹೊರಹಾಕಿರುವ ಮೋದಿ, ಇಂತಹ ವ್ಯಕ್ತಿಗಳನ್ನು ಪಕ್ಷದಿಂದ ಉಚ್ಛಾಟಿಸಬೇಕು. ಈ ವರ್ತನೆಯನ್ನು ಪಕ್ಷ ಸಹಿಸುವುದಿಲ್ಲ. ರಾಜಕಾರಣಿಯ ಮಗನಾದ ಮಾತ್ರಕ್ಕೆ ಮನಸ್ಸಿಗೆ ಬಂದಂತೆ ನಡೆದುಕೊಳ್ಳುವುದು ಖಂಡನೀಯ ಎಂದು ಇಂದು ನಡೆದ ಪಕ್ಷದ ಸಂಸದೀಯ ಸಭೆಯಲ್ಲಿ ಆಕ್ರೋಶದಿಂದ ಹೇಳಿದ್ದಾರೆ ಎನ್ನಲಾಗಿದೆ.

ಘಟನೆ ಕುರಿತಾಗಿ ಪ್ರಧಾನಿಯೇ ಕಿಡಿ ಕಾರಿರುವುದರಿಂದ ಪಕ್ಷವು, ಆಕಾಶ್​ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಿದೆ ಎಂದು ಹೇಳಲಾಗ್ತಿದೆ.

ಕಳೆದ ಬುಧವಾರ ಸಾರ್ವಜನಿಕವಾಗಿ ಸರ್ಕಾರಿ ಅಧಿಕಾರಿ ಮೇಲೆ ಆಕಾಶ್​ ಬ್ಯಾಟ್​ನಿಂದ ಹಲ್ಲೆ ನಡೆಸಿದ್ದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದರಿಂದ ಅವರನ್ನು ಬಂಧಿಸಲಾಗಿತ್ತು. ಎರಡು ದಿನಗಳ ಹಿಂದೆಯಷ್ಟೇ ಅವರು ಜಾಮೀನಿನ ಮೇಲೆ ಹೊರಬಂದಿದ್ದಾರೆ. ತಮ್ಮ ವರ್ತನೆ ಬಗ್ಗೆ ಪಾಪಪ್ರಜ್ಞೆ ಇಲ್ಲವೆಂದೂ ಹೇಳಿಕೊಂಡಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.