ದಾಂತೇವಾಡ : ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯು ಸಂಪ್ರದಾಯಿಕ ಆಚರಣೆಗಳಿಗೆ ಹೆಸರುವಾಸಿಯಾಗಿದೆ. ಈ ಹಿನ್ನೆಲೆಯಲ್ಲಿಯೇ ಮಳೆಗಾಗಿ ಇಲ್ಲಿನ ಜನರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮಳೆಯ ಕೊರತೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಗಾಗಿ ಇಲ್ಲಿನ ಜನರು ವಿಶಿಷ್ಟ ಆಚರಣೆಯನ್ನು ಮಾಡಿದ್ದಾರೆ. ಉಡೆಲಾ ಹಳ್ಳಿಯಲ್ಲಿರುವ ಕಲ್ಲಿನ ಬಳಿ ಜಮಾಯಿಸಿದ ಜನರು, ಅದರ ಸುತ್ತಲೂ ನೆರೆದು ಮಳೆಗಾಗಿ ವಿಶಿಷ್ಟವಾಗಿ ಪ್ರಾರ್ಥನೆ ಮಾಡಿದ್ದಾರೆ.
ಸುಮಾರು 84 ಗ್ರಾಮಗಳ ಜನರು ಈ ಕಲ್ಲಿನ ಬಳಿ ಬಂದು ಮಳೆಗಾಗಿ ಪ್ರಾರ್ಥಿಸಿದ್ದಾರೆ. ಈ ರೀತಿ ಮಾಡುವುದರಿಂದ ಶೀಘ್ರದಲ್ಲೇ ಮಳೆ ಬೀಳುತ್ತದೆ ಮತ್ತು ರೈತರು ಸಂತೋಷವಾಗುತ್ತಾರೆ ಎಂಬ ನಂಬಿಕೆ ಇಲ್ಲಿನ ಸ್ಥಳೀಯರಲ್ಲಿದೆ.