ನವದೆಹಲಿ: ಭಾರತೀಯ ಗ್ರಾಹಕರನ್ನು ಬೆಂಬಲಿಸಲು ಪೇಟಿಎಂ ತನ್ನ ಆಂಡ್ರಾಯ್ಡ್ ಮಿನಿ ಆ್ಯಪ್ ಸ್ಟೋರ್ ಪ್ರಾರಂಭಿಸಿದ್ದು, ಗೂಗಲ್ ಹಾಗೂ ಫಿನ್ಟೆಕ್ಗೆ ಸವಾಲೊಡ್ಡಿದೆ.
ಪೇಟಿಎಂನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಕಟ್ಟುವವರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಗೂಗಲ್ ಪ್ಲೇ ಸ್ಟೋರ್ನಲ್ಲಿ ಪೇಟಿಎಂ ಆ್ಯಪ್ ಅನ್ನು ಕೆಲ ಗಂಟೆಗಳ ಕಾಲ ತೆಗೆದು ಹಾಕಲಾಗಿತ್ತು. ಇದಾದ ಬಳಿಕ ಪೇಟಿಎಂ ತನ್ನದೇ ಆ್ಯಪ್ ಸ್ಟೋರ್ ಪ್ರಾರಂಭಿಸಿದ್ದು, ಗೂಗಲ್ ಪ್ಲೇ ಸ್ಟೋರ್ಗೆ ತಿರುಗೇಟು ನೀಡಿದೆ.
ಈ ಆ್ಯಪ್ ಪ್ಲೇ ಸ್ಟೋರ್ನಲ್ಲಿ ಪೇಟಿಎಂ ವ್ಯಾಲೆಟ್, ಪೇಟಿಎಂ ಪೇಮೆಂಟ್ ಬ್ಯಾಂಕ್, ಯುಪಿಐ, ನೆಟ್ ಬ್ಯಾಂಕಿಂಗ್ ಸೇರಿದಂತೆ ವಿವಿಧ ಆಯ್ಕೆಗಳಿದ್ದು ಗ್ರಾಹಕರ ವಹಿವಾಟಿಗೆ ಅನುಕೂಲವಾಗಲಿದೆ. ಈಗಾಗಲೇ ಈ ಮಿನಿ ಆ್ಯಪ್ ಸ್ಟೋರ್ಗೆ ಡೆಕಾಥ್ಲಾನ್, ಓಲಾ, ಪಾರ್ಕ್+, ರಾಪಿಡೊ, ನೆಟ್‌ಮೆಡ್ಸ್, ಒನ್ ಎಂಜಿ, ಡೊಮಿನೊಸ್ ಪಿಜ್ಜಾ, ಫ್ರೆಶ್ ಮೆನು ಸೇರ್ಪಡೆಗೊಂಡಿವೆ.
ಪ್ರತಿಯೊಬ್ಬ ಭಾರತೀಯ ಆ್ಯಪ್ ಡೆವಲಪರ್ಗಳಿಗೆ ನಾವಿಂದು ಅವಕಾಶ ಸೃಷ್ಟಿಸುತ್ತಿದ್ದೇವೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ. ಈ ಆ್ಯಪ್ ಸೀಮಿತ ಡೇಟಾ ಮತ್ತು ಫೋನ್ ಮೆಮೊರಿ ಹೊಂದಿರುವ ಬಳಕೆದಾರರಿಗೆ ಸಹಾಯ ಮಾಡುತ್ತದೆ ಎಂದು ಪೇಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಹೇಳಿದರು.
ಕ್ರೀಡಾ ಬೆಟ್ಟಿಂಗ್ ವಿಚಾರವಾಗಿ ಸೆಪ್ಟೆಂಬರ್ 18 ರಂದು ಪೇಟಿಎಂ ತನ್ನ ನೀತಿ ನಿಯಮ ಉಲ್ಲಂಘಿಸಿದೆ ಎಂದು ಹೇಳಿ ಗೂಗಲ್ ಪ್ಲೇ ಸ್ಟೋರ್ ಕೆಲ ಕಾಲ ಈ ಆ್ಯಪ್ಗೆ ನಿರ್ಬಂಧ ಹೇರಿತ್ತು. ಮಾರ್ಕೆಟ್ನಲ್ಲಿ ಗೂಗಲ್ ತನ್ನ ಪ್ರಾಬಲ್ಯ ಸಾಧಿಸಲು ಈ ರೀತಿಯ ಪಕ್ಷಪಾತ ನೀತಿಗಳನ್ನ ಅನುಸರಿಸುತ್ತಿದೆ ಎಂದು ಪೇಟಿಎಂ ಆರೋಪಿಸಿತ್ತು.