ETV Bharat / bharat

ಜ.8 ರಿಂದ ಭಾರತ - ಯುಕೆ ನಡುವೆ ಹಾರಲಿವೆ ವಿಮಾನಗಳು

ಭಾರತ ಮತ್ತು ಯುಕೆ ನಡುವಿನ ವಿಮಾನಗಳು 2021 ರ ಜನವರಿ 8 ರಿಂದ ಪುನಾರಂಭ ಮಾಡಲು ನಿರ್ಧರಿಸಲಾಗಿದೆ. ಜನವರಿ 23 ರವರೆಗೆ ಎರಡೂ ದೇಶಗಳ ವಿಮಾನಗಳಿಗೆ ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ಗೆ ಮಾತ್ರ ತೆರಳಲು ಅವಕಾಶ.

flight
ವಿಮಾನ
author img

By

Published : Jan 2, 2021, 6:37 AM IST

ನವದೆಹಲಿ: ಭಾರತ ಮತ್ತು ಯುಕೆ ನಡುವಿನ ವಿಮಾನಗಳು ಜನವರಿ 8 ರಿಂದ ಮತ್ತೆ ಪುನಾರಂಭಗೊಳ್ಳಲಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಡಿಸೆಂಬರ್ 23 ರಂದು ವಿಮಾನವನ್ನು ಬುಕ್​ ಪ್ರಯಾಣಿಕರಿಗೆ ಪ್ರಯಾಣಕ್ಕೆ ಮೊದಲ ಆದ್ಯತೆ ಎಂದು ಏರ್ ಇಂಡಿಯಾ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.

  • It has been decided that flights between India & UK will resume from 8 Jan 2021.
    Operations till 23 Jan will be restricted to 15 flights per week each for carriers of the two countries to & from Delhi, Mumbai, Bengaluru & Hyderabad only. @DGCAIndia will issue the details shortly

    — Hardeep Singh Puri (@HardeepSPuri) January 1, 2021 " class="align-text-top noRightClick twitterSection" data=" ">

ಎಲ್ಲ ಪ್ರಯಾಣಿಕರಿಗೆ ಡಿಸೆಂಬರ್ 22 ರಂದು ಅವರು ಕಾಯ್ದಿರಿಸಿದ ವಿಮಾನಗಳನ್ನು ರೀ ಶೆಡ್ಯೂಲ್​ ಮಾಡಲಾಗುವುದೆಂದು ತಿಳಿಸಲಾಗಿತ್ತು. ಇಂದು ಪ್ರಕಟಣೆಯ ಬಳಿಕ ಎಸ್‌ಎಂಎಸ್​ಗಳು ಮತ್ತು ಮೇಲ್‌ಗಳ ಮುಖಾಂತರ ಪ್ರಯಾಣಿಕರಿಗೆ ಮರು ನಿಗದಿಪಡಿಸಿದ ಪ್ರಯಾಣದ ದಿನಾಂಕವನ್ನು ತಿಳಿಸಲಾಗಿದೆ. ಡಿಸೆಂಬರ್ 23 ರಂದು ತಮ್ಮ ವಿಮಾನವನ್ನು ಕಾಯ್ದಿರಿಸಿದ ಪ್ರಯಾಣಿಕರು ಮೊದಲ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುವುದು "ಎಂದು ವಿಮಾನಯಾನ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತ ಮತ್ತು ಯುಕೆ ನಡುವಿನ ವಿಮಾನಗಳು 2021ರ ಜನವರಿ 8 ರಿಂದ ಪುನಾರಂಭ ಮಾಡಲು ನಿರ್ಧರಿಸಲಾಗಿದೆ. ಜನವರಿ 23 ರವರೆಗೆ ಎರಡೂ ದೇಶಗಳ ವಿಮಾನಗಳಿಗೆ ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ಗೆ ಮಾತ್ರ ತೆರಳಲು ಅವಕಾಶ ಹಾಗೂ ವಾರಕ್ಕೆ 15 ವಿಮಾನಗಳು ಮಾತ್ರ ಸಂಚರಿಸಬೇಕು, ಎಂದು ಸಚಿವರು ಟ್ವೀಟ್​ನಲ್ಲಿ ಹೇಳಿದ್ದಾರೆ.

ಡಿಸೆಂಬರ್ 30 ರಿಂದ ಜನವರಿ 7 ರವರೆಗೆ ಯುಕೆ ಮತ್ತು ಹೊರಗಿನ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸಚಿವಾಲಯ ನಿರ್ಧರಿಸಿತ್ತು.

ಯುಕೆಯಲ್ಲಿ ಪತ್ತೆಯಾದ ಹೊಸ ಕೋವಿಡ್​ ಅನ್ನು ಗಮನದಲ್ಲಿಟ್ಟುಕೊಂಡು ಡಿಸೆಂಬರ್ 22 ರಿಂದ ಜಾರಿಗೆ ಬರುವಂತೆ ಯುಕೆಯಿಂದ ಭಾರತಕ್ಕೆ ಬರುವ ವಿಮಾನಗಳಿಗೆ ಸರ್ಕಾರ ನಿಷೇಧ ಹೇರಿತ್ತು.

ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರವು ನಿಗದಿತ ವಾಣಿಜ್ಯ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು 2021 ಜನವರಿ 31 ರವರೆಗೆ ವಿಸ್ತರಿಸಿದೆ. ಆದರೆ, ವಿಶೇಷ ವಿಮಾನಗಳು ಮತ್ತು ಅಂತಾರಾಷ್ಟ್ರೀಯ ವಾಯು ಸರಕು ಸಾಗಣೆಯ ವಿಮಾನಗಳಿಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು ಅನುಮೋದಿಸಿದ ನಿರ್ಬಂಧಗಳು ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.