ಭುವನೇಶ್ವರ್: ಒಡಿಶಾದ ಭುವನೇಶ್ವರ್ನಲ್ಲಿ ಬೆಳಗ್ಗೆ 8.20 ರಿಂದ 11.28ರವರೆಗೆ ಕಂಕಣ ಸೂರ್ಯಗ್ರಹಣ ನಡೆಯಲಿದೆ. ಈ ಸಮಯದಲ್ಲಿ ಎಲ್ಲ ದೇವಾಲಯಗಳ ಬಾಗಿಲು ಮುಚ್ಚಲಿದ್ದು, ಯಾವುದೇ ಪೂಜೆ-ಪುನಸ್ಕಾರ ನಡೆಯುವುದಿಲ್ಲ.
ಕಂಕಣ ಸೂರ್ಯಗ್ರಹಣ ನಾಳೆ ಬೆಳಗ್ಗೆ 8.20 ಕ್ಕೆ ಆರಂಭವಾಗುತ್ತದೆ. 9.46 ಗಂಟೆಯಷ್ಟರಲ್ಲಿ ಸಂಪೂರ್ಣ ಗೋಚರವಾಗುತ್ತದೆ. 11.28 ಗಂಟೆಯಷ್ಟರಲ್ಲಿ ಸಂಪೂರ್ಣವಾಗಿ ಗ್ರಹಣ ಮುಗಿದುಹೋಗುತ್ತದೆ ಎಂದು ಭುವನೇಶ್ವರದಲ್ಲಿರುವ ಹವಾಮಾನ ಇಲಾಖೆಯ ಸಲಹೆಗಾರರೊಬ್ಬರು ತಿಳಿಸಿದ್ದಾರೆ.
ಈ ಬಾರಿ ಸೂರ್ಯನಿಗೂ ಭೂಮಿಗೂ ಅಂತರ ಕಡಿಮೆ ಇದೆ. ಈ ಹಿನ್ನೆಲೆ ಸೂರ್ಯ ದೊಡ್ಡದಾಗಿರುತ್ತಾನೆ. ಚಂದ್ರ ಅಡ್ಡ ಬಂದರೂ ಕೂಡ ಸೂರ್ಯ ಸಂಪೂರ್ಣವಾಗಿ ಮುಚ್ಚುವುದಿಲ್ಲ. ಬೆಂಕಿ ಉಗುಂರ ಆಕಾರದಲ್ಲಿ ಸೂರ್ಯ ಗೋಚರವಾಗುತ್ತಾನೆ ಎಂದು ಸಲಹೆಗಾರರು ಹೇಳಿದ್ದಾರೆ.
ಹೆಚ್ಚು ಮೋಡ ಇರುವುದರಿಂದ ಕಂಕಣ ಸೂರ್ಯ ಗ್ರಹಣ ಗೋಚರವಾಗುವುದಿಲ್ಲ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಶೇ. 90ರಷ್ಟು ಸೂರ್ಯಗ್ರಹಣ ಗೋಚರವಾಗುತ್ತದೆ. ಊಟಿ, ಕಣ್ಣೂರು, ಕೊಯಮತ್ತೂರು, ಮಧುರೈನಲ್ಲಿ ಸೇರಿಂತೆ ಅನೇಕ ನಗರಗಳಲ್ಲಿ ಕಂಕಣ ಸೂರ್ಯಗ್ರಹಣ ಗೋಚರವಾಗುತ್ತದೆ ಎಂದು ಹೇಳಿದರು.
ನಾಳೆ ಬೆಳಗ್ಗೆ ಸಂಭವಿಸುವ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಲೇಬಾರದು ಎಂದು ಸಲಹೆಗಾರರು ಹೇಳಿದ್ದಾರೆ. ಸುರಕ್ಷಿತಾ ವಿಧಾನವಾದ ಸೋಲಾರ್ ಗಾಗಲ್ಸ್, ವೆಲ್ಡರ್ಸ್ ಗ್ಲಾಸ್, ಅಲ್ಟ್ರಾ ವೈಲೆಟ್ ರೇಸ್ ಮೂಲಕ ಗ್ರಹಣ ವೀಕ್ಷಿಸಬಹುದು.
9 ವರ್ಷಗಳ ಬಳಿಕ ಸಂಭವಿಸುತ್ತಿರುವ ಕಂಕಣ ಸೂರ್ಯ ಗ್ರಹಣ ಇದಾಗಿದೆ. ಇದನ್ನು ಕಣ್ತುಂಬಿಕೊಳ್ಳಲು ವಿಜ್ಞಾನಿಗಳು ಹಾಗೂ ಜನರು ಕಾತರರಾಗಿದ್ದಾರೆ.