ETV Bharat / bharat

ಕೊರೊನಾ ವೈರಸ್​​ ತಡೆಯಲು ಬುಡಕಟ್ಟು ಜನರ ಪ್ಲಾನ್​ ಹೀಗಿದೆ ನೋಡಿ- ವಿಡಿಯೋ - ಛತ್ತೀಸ್​​ಗಢದ ಬುಡಕಟ್ಟು ಜನರು

ಛತ್ತೀಸ್​​ಗಡದ ಬುಡಕಟ್ಟು ಜನರು ಕೊರೊನಾ ವಿರುದ್ಧ ಹೋರಾಡಲು ನೈಸರ್ಗಿಕ ವಸ್ತುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇವರು ಮಾಸ್ಕ್​​ ತಯಾರಿಸಲು ಸಾಲ್​ ಮರದ ಎಲೆಗಳನ್ನು ಬಳಸಿಕೊಂಡಿದ್ದಾರೆ.

tribals made desi masks
ಎಲೆಗಳಲ್ಲಿ ಮಾಸ್ಕ್​​ ನಿರ್ಮಾಣ
author img

By

Published : Mar 26, 2020, 9:51 PM IST

Updated : Mar 26, 2020, 11:21 PM IST

ಕಾಂಕೆರ್​​: ಕೊರೊನಾ ವೈರಸ್​​​ ವಿರುದ್ಧ ಹೋರಾಡಲು ಛತ್ತೀಸ್​​ಗಡದ ಬುಡಕಟ್ಟು ಜನರು ಸನ್ನದ್ಧರಾಗಿದ್ದು, ಇದಕ್ಕಾಗಿ ಅವರು ಸಾಲ್​​ ಮರದ ಎಲೆಗಳನ್ನು ಬಳಸಿ ಮಾಸ್ಕ್​​ ತಯಾರಿಸಿದ್ದಾರೆ.

ಆಮಾಬೆಡಾ ಪ್ರದೇಶದ ಭಾರ್ರಿಟೋಲಾ ಗ್ರಾಮದ ಬುಡಕಟ್ಟು ಜನರು, ಕೊರೊನಾ ವೈರಸ್​ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನೈಸರ್ಗಿಕ ವಸ್ತುಗಳನ್ನೇ ಬಳಸಿಕೊಳ್ಳುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಸಾಲ್ ಮರದ ಎಲೆಗಳಿಂದ ಮುಖವಾಡಗಳನ್ನು ತಯಾರಿಸಿದ್ದಾರೆ. ಜೊತೆಗೆ ಗ್ರಾಮಸ್ಥರು ಮನೆಯಿಂದ ಹೊರಬರುತ್ತಿಲ್ಲ.

ಬುಡಕಟ್ಟು ಜನರಿಂದ ಎಲೆಗಳಲ್ಲಿ ಮಾಸ್ಕ್​​ ನಿರ್ಮಾಣ

ಈ ಪ್ರದೇಶದಲ್ಲಿ ಯಾವುದೇ ಮಾಸ್ಕ್​ಗಳು ದೊರೆಯುತ್ತಿಲ್ಲ ಮತ್ತು ಕಾಂಕೆರ್​​ ನಗರಕ್ಕೆ ಹೋಗಲೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಗ್ರಾಮಸ್ಥರು ಸ್ಥಳೀಯವಾಗಿ ಸಿಗುವ ಮರದ ಎಲೆಗಳನ್ನೇ ಬಳಸಿಕೊಂಡು ಸುರಕ್ಷಿತವಾಗಿರಲು ಪ್ರಯತ್ನಿಸುತ್ತಿದ್ದಾರೆ.

ನಗರ ಪ್ರದೇಶಗಳಲ್ಲಿ ಜನರು ಈ ಸಾಂಕ್ರಾಮಿಕ ರೋಗದಿಂದ ತಪ್ಪಿಸಿಕೊಳ್ಳಲು ಹೊಸ ಮಾರ್ಗಗಳನ್ನು ಹುಡುಕುವಲ್ಲಿ ನಿರತರಾಗಿದ್ದಾರೆ. ಆದ್ರೆ ಈ ಬುಡಕಟ್ಟು ಜನರು ಸ್ಥಳೀಯ ಮುಖವಾಡ ಬಳಸಿ, ಕೈ ತೊಳೆಯುವುದು ಮತ್ತು ಪರಸ್ಪರ ದೂರವಿರುವುದರ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ಈ ಗ್ರಾಮಕ್ಕೆ ಪಟ್ಟಣದಿಂದ ಬರುವವರು ಮೊದಲು ಆಸ್ಪತ್ರೆಗೆ ಹೋಗಿ, ಅಲ್ಲಿ ತಪಾಸಣೆ ಮಾಡಿಸಿಕೊಂಡೇ ಬರಬೇಕು. ಇಲ್ಲವಾದ್ರೆ ಗ್ರಾಮದೊಳಗೆ ಯಾರಿಗೂ ಪ್ರವೇಶ ಇರುವುದಿಲ್ಲ.

Last Updated : Mar 26, 2020, 11:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.