ಔರಂಗಾಬಾದ್ (ಮಹಾರಾಷ್ಟ್ರ): ಕೊರೊನಾ ಹಿನ್ನೆಲೆ ಪಾನಿಪೂರಿ ಸವಿಯವುದು ಕೂಡ ಕಷ್ಟಕರವಾಗಿದೆ. ಕೊರೊನಾ ಹರಡುವ ಅನೇಕರು ತಮ್ಮ ಇಷ್ಟದ ಪಾನಿಪೂರಿ ತಿನ್ನುವುದನ್ನೇ ಮಿಸ್ ಮಾಡಿಕೊಂಡಿದ್ದಾರೆ.
ಆದರೆ, ಔರಂಗಾಬಾದ್‌ನ ಸಹೋದರರು ಪಾನಿಪೂರಿ ಎಟಿಎಂ ನಿರ್ಮಿಸಿದ್ದಾರೆ. ಆರೋಗ್ಯಕರ ಪಾನಿಪೂರಿಗಳನ್ನು ಯಾರೂ ಮುಟ್ಟದೆ ತಿನ್ನಬಹುದಾಗಿದೆ. ಪಾನಿಪೂರಿ ಎಟಿಎಂನಲ್ಲಿ ಸೆನ್ಸಾರ್ ಅಳವಡಿಸಲಾಗಿದೆ.
ಈ ಯಂತ್ರದಲ್ಲಿ ಮೂರು ಕಡೆ ನಿಂತು ಯಾರನ್ನೂ ಮುಟ್ಟದೆ ಪಾನಿಪೂರಿ ತಿನ್ನಬಹುದು. ಯಂತ್ರದ ಪ್ರತಿಯೊಂದು ಬದಿಯಲ್ಲಿ ಸೆನ್ಸಾರ್ ಜೋಡಿಸಲಾಗಿದ್ದು, ಐದು ವಿಭಿನ್ನ ಸುವಾಸನೆಗಳ ಪಾನಿಪೂರಿಯನ್ನು ತಿನ್ನಬಹುದು.
ನಿಮಗೆ ಬೇಕಾದ ಪಾನಿಪೂರಿ ವಿಧವನ್ನು ಆರಿಸಿ ನಂತರ ಯಂತ್ರದ ಬಳಿ ಕೈ ಇರಿಸಿದರೆ ಸ್ವಯಂಚಾಲಿತವಾಗಿ ಪೂರಿ, ಪಾನಿ ಮತ್ತು ಮಸಾಲೆ ಸಿಗುತ್ತದೆ.