ETV Bharat / bharat

ಪಾಲ್ಘರ್​ ಪ್ರಕರಣಕ್ಕೆ ರಾಜಕೀಯ ಬಣ್ಣ: ಪ್ರತಿಪಕ್ಷಗಳ ವಿರುದ್ಧ ಅನಿಲ್​ ದೇಶ್​ಮುಖ್​ ವಾಗ್ದಾಳಿ - ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್​ಮುಖ್​

ಪಾಲ್ಘರ್​ನಲ್ಲಿ ಸಾಧುಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್​ಮುಖ್​, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅನಿಲ್​ ದೇಶ್​ಮುಖ್
ಅನಿಲ್​ ದೇಶ್​ಮುಖ್
author img

By

Published : Jul 17, 2020, 8:41 AM IST

ಮುಂಬೈ: ಪಾಲ್ಘರ್​ನಲ್ಲಿ ಸಾಧುಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ರಾಜಕೀಯ ಬಣ್ಣ ಬಳಿಯುತ್ತಿವೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್​ಮುಖ್​ ವಾಗ್ದಾಳಿ ನಡೆಸಿದ್ದಾರೆ.

ನಿನ್ನೆ ಈ ಪ್ರಕರಣದ ಕುರಿತು ಸಿಐಡಿ ಚಾರ್ಜ್​ಶೀಟ್​ ದಾಖಲಿಸಿದೆ. ಈ ಬಗ್ಗೆ ಮಾತನಾಡಿದ ಅನಿಲ್​, ಇಬ್ಬರು ಸಾಧುಗಳು ಹಾಗೂ ಅವರ ಡ್ರೈವರ್ ನ​ನ್ನು ಕೊಲೆ ಮಾಡಲಾಗಿದೆ. ಪ್ರಕರಣದ ಸಂಬಂಧ ಸದ್ಯ ಸಿಐಡಿ ವಿಚಾರಣೆ ನಡೆಸುತ್ತಿದ್ದು, ಈಗಾಗಲೇ 808 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. 154 ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ 11 ಮಂದಿ ಬಾಲಾಪರಾಧಿಗಳಾಗಿದ್ದಾರೆ. ಇವರಿಗೆ ಜಾಮೀನು ಮಂಜೂರು ಮಾಡಿಲ್ಲ. ಆದರೆ, ಕೆಲವರು ಈ ಪ್ರಕರಣಕ್ಕೆ ರಾಜಕೀಯ ಬಣ್ಣ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬೈನಿಂದ ಸೂರತ್​ಗೆ ತೆರಳುತ್ತಿದ್ದ ಮೂವರು ಸಾಧುಗಳಾದ ಕಲ್ಪವೃಕ್ಷಗಿರಿ ಮಹಾರಾಜ್​ (70), ಸಹಾಯಕ ಸುಶೀಲ್​ಗಿರಿ ಮಹಾರಾಜ್​ (35), ಜುನಾ ಅಖಾಡ (30) ಮತ್ತು ಅವರ ಡ್ರೈವರ್​ ನೀಲೇಶ್​ ತೇಲ್ಗಡೆ (30)ಯವರನ್ನು ಏಪ್ರಿಲ್​ 16ರ ರಾತ್ರಿ ವೇಳೆ ಪಾಲ್ಘರ್​ ಸಮೀಪ ಕೊಲೆ ಮಾಡಲಾಗಿತ್ತು. ಅಲ್ಲಿನ ಕೆಲ ಬುಡಕಟ್ಟು ಜನಾಂಗದ ಜನರು ಕಲ್ಲು ಎಸೆದು, ದೊಣ್ಣೆಯಿಂದ ಹೊಡೆದು ಇವರನ್ನು ಸಾಯಿಸಿದ್ದರು ಎಂದು ಹೇಳಲಾಗಿತ್ತು.

ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್​ಮುಖ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.