ETV Bharat / bharat

ಪ್ರಧಾನಿ, ಅರ್ನಾಬ್​ ಗೋಸ್ವಾಮಿ ವಿರುದ್ಧ ಸಿಡಿದೆದ್ದ ಪಾಕ್​ ಪ್ರಧಾನಿ ಇಮ್ರಾನ್​ - ನಿರೂಪಕ ಅರ್ನಾಬ್ ಗೋಸ್ವಾಮಿ ವಾಟ್ಸ್​ಆ್ಯಪ್​ ಚಾಟ್​

2019ರ ಬಾಲಾಕೋಟ್​ ಮೇಲೆ ನಡೆಸಿದ ಸೇನಾ ದಾಳಿಯನ್ನು ಪ್ರಧಾನಿ ಮೋದಿ ಚುನಾವಣೆಗೆ ಲಾಭವಾಗಿ ಬಳಸಿಕೊಂಡಿದ್ದಾರೆ ಎಂದು ಬಿಂಬಿಸುವ ಮಾಧ್ಯಮದವರ ಚಾಟ್​ಗಳ ಬಗ್ಗೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Pakistan PM
ಪಾಕ್​ ಪ್ರಧಾನಿ ಇಮ್ರಾನ್
author img

By

Published : Jan 19, 2021, 8:42 AM IST

ಇಸ್ಲಾಮಾಬಾದ್: ಪ್ರಧಾನ ಮಂತ್ರಿ ನರೇಂದ್ರ ಮೋದಿಯರು 2019ರ ಬಾಲಾಕೋಟ್​ ಮೇಲೆ ನಡೆಸಿದ ಸೇನಾ ದಾಳಿಯನ್ನು ಚುನಾವಣೆಗೆ ಲಾಭವಾಗಿ ಬಳಸಿಕೊಂಡಿದ್ದಾರೆ ಎಂದು ಸೂಚಿಸುವ ರಿಪಬ್ಲಿಕ್​​ ಟಿವಿ ನಿರೂಪಕ ಮತ್ತು ಮಾಜಿ ಮಾಧ್ಯಮ ಉದ್ಯಮದ ಕಾರ್ಯನಿರ್ವಾಹಕರ ನಡುವಿನ ಚಾಟ್​ಗಳ ಬಗ್ಗೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನಪ್ರಿಯ ನಿರೂಪಕ ಅರ್ನಾಬ್ ಗೋಸ್ವಾಮಿ ಮತ್ತು ಟಿವಿ ರೇಟಿಂಗ್ ಕಂಪನಿಯ ಮಾಜಿ ಮುಖ್ಯಸ್ಥ ಪಾರ್ಥೋ ದಾಸ್‌ಗುಪ್ತಾ ನಡುವಿನ ವಾಟ್ಸ್​ಆ್ಯಪ್​ ಮೆಸೇಜ್​ ಬಗ್ಗೆ ಭಾರತೀಯ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿದ ಇಮ್ರಾನ್ ಖಾನ್, "ವೈಮಾನಿಕ ದಾಳಿ ನಡೆಸುವ ಮೂರು ದಿನದ ಮೊದಲು ಗೋಸ್ವಾಮಿಗೆ ದಾಳಿಯ ಬಗ್ಗೆ ತಿಳಿದಿತ್ತು. ಇನ್ನು ಈ ದಾಳಿಯನ್ನು ಮೋದಿಯವರಿಗೆ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಉಪಯೋಗಿಸಲಾಗಿದೆ" ಎಂದು ಆರೋಪಿಸಿದರು.

ರಿಪಬ್ಲಿಕ್ ಟಿವಿಯ ಸಹ - ಮಾಲೀಕ ಮತ್ತು ಮುಖ್ಯ ಸಂಪಾದಕರಾಗಿರುವ ಆ್ಯಂಕರ್ ಗೋಸ್ವಾಮಿ ಅವರು ಮೋದಿ ಮತ್ತು ಅವರ ರಾಷ್ಟ್ರೀಯತಾವಾದಿ ನೀತಿಗಳನ್ನು ಬೆಂಬಲಿಸುವಲ್ಲಿ ಹೆಸರು ವಾಸಿಯಾಗಿದ್ದಾರೆ.

ಫೆಬ್ರವರಿ 26, 2019ರ ವೈಮಾನಿಕ ದಾಳಿಗೆ ಮೂರು ದಿನಗಳ ಮೊದಲು ಗೋಸ್ವಾಮಿ, ದಾಸ್‌ಗುಪ್ತಾ ಅವರಿಗೆ ಸಂದೇಶ ಕಳುಹಿಸಿದ್ದರು. “ಏನಾದರೂ ದೊಡ್ಡದೊಂದು ಸಂಭವಿಸುತ್ತದೆ. ಭಾರತೀಯರು ಉಲ್ಲಾಸಗೊಳ್ಳುವಂತೆ ಪಾಕಿಸ್ತಾನದ ಮೇಲೆ ದಾಳಿ ನಡೆಯುವ ವಿಶ್ವಾಸವಿದೆ” ಎಂದು ಹೇಳಿದ್ದರು. ಆಗ ಇದಕ್ಕೆ ಪ್ರತಿಕ್ರಿಯಿಸಿದ ದಾಸ್​ಗುಪ್ತಾ, "ಪಾಕಿಸ್ತಾನದ ಮೇಲಿನ ದಾಳಿಯು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿಗೆ ಬಹುಮತ ನೀಡುತ್ತದೆ" ಎಂದು ಹೇಳುತ್ತಾರೆ.

ಇದಾದ ತಿಂಗಳ ನಂತರ ಪ್ರಧಾನಿ ಮೋದಿ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.