ETV Bharat / bharat

ಭಾರತದ ಒತ್ತಡಕ್ಕೆ ಮಣಿದ ಪಾಕ್​: 3ನೇ ಬಾರಿ ಕುಲಭೂಷಣ್​ ಜಾಧವ್​ಗೆ ಮುಕ್ತ ರಾಜತಾಂತ್ರಿಕ ಸಂಪರ್ಕಕ್ಕೆ ಅವಕಾಶ! - ವಿದೇಶಾಂಗ ಸಚಿವಾಲಯ

ಕುಲಭೂಷಣ್ ಜಾಧವ್ ಅವರಿಗೆ ಭಾರತದ ರಾಜತಾಂತ್ರಿಕ ಸಂಪರ್ಕಕ್ಕೆ ಪಾಕಿಸ್ತಾನವು ಮೂರನೇ ಬಾರಿ ಅನುಮತಿ ನೀಡುತ್ತದೆ. ಸಭೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ಹೊಂದಿರಬಾರದು ಎಂಬ ಭಾರತದ ಬೇಡಿಕೆಯನ್ನು ಈಡೇರಿಸಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರು ಪಾಕಿಸ್ತಾನ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Kulbhushan Jadhav
ಕುಲಭೂಷಣ್​ ಜಾಧವ್
author img

By

Published : Jul 17, 2020, 5:29 PM IST

ಇಸ್ಲಾಮಾಬಾದ್: ಭಾರತ ಸರ್ಕಾರದ ಒತ್ತಡಕ್ಕೆ ಮಣಿದ ಪಾಕಿಸ್ತಾ, ಬೇಹುಗಾರಿಕೆಯ ಸುಳ್ಳು ಆರೋಪದ ಮೇಲೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್​ ಜಾಧವ್ ಅವರಿಗೆ 3ನೇ ಬಾರಿ ಮುಕ್ತ ರಾಜತಾಂತ್ರಿಕ ಸಂಪರ್ಕಕ್ಕೆ ಅವಕಾಶ ನೀಡಿದೆ.

ಕುಲಭೂಷಣ್ ಜಾಧವ್ ಅವರಿಗೆ ಭಾರತದ ರಾಜತಾಂತ್ರಿಕ ಸಂಪರ್ಕಕ್ಕೆ ಪಾಕಿಸ್ತಾನವು ಮೂರನೇ ಬಾರಿ ಅನುಮತಿ ನೀಡುತ್ತದೆ. ಸಭೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ಹೊಂದಿರಬಾರದು ಎಂಬ ಭಾರತದ ಬೇಡಿಕೆಯನ್ನು ಈಡೇರಿಸಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರು ಪಾಕಿಸ್ತಾನ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನ ಗುರುವಾರ ಇಸ್ಲಾಮಾಬಾದ್‌ನ ಭಾರತದ ಹೈಕಮಿಷನ್‌ನ ಅಧಿಕಾರಿಗಳಿಗೆ ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಲು ಅನುಮತಿ ನೀಡಿತು. ಆದರೆ ಮಿಲಿಟರಿ ನ್ಯಾಯಮಂಡಳಿ ನೀಡಿದ ಮರಣದಂಡನೆಯನ್ನು ಮರುಪರಿಶೀಲಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ವಕೀಲರನ್ನು ವ್ಯವಸ್ಥೆ ಮಾಡಲು ಅವರ ಒಪ್ಪಿಗೆ ಪಡೆಯುವುದನ್ನು ತಡೆಯಿತು. 2017ರ ಏಪ್ರಿಲ್​ನಲ್ಲಿ ಈ ಶಿಕ್ಷೆ ವಿಧಿಸಿತ್ತು.

  • Pakistan offers third consular access to India for Kulbhushan Jadhav (file pic), a note verbale has been sent meeting India's demand to not have a security personnel during the meeting says Pakistani Foreign Minister Shah Mahmood Qureshi: Pakistan Media pic.twitter.com/K6G2zWUQk9

    — ANI (@ANI) July 17, 2020 " class="align-text-top noRightClick twitterSection" data=" ">

ಭಾರತದ ಹೈ ಕಮಿಷನ್ (ಹೆಚ್‌ಸಿಐ) ಅಧಿಕಾರಿಗಳು ತೆರಳಿದ್ದರು. ಈ ವೇಳೆ ಅಡೆತಡೆಯಿಲ್ಲದೆ, ಬೇಷರತ್​ ಮತ್ತು ಮುಕ್ತವಾಗಿ ಮಾತನಾಡುವ ಅವಕಾಶವನ್ನು ಭಾರತದ ಮಾಜಿ ನೌಕಾಪಡೆಯ ಅಧಿಕಾರಿಗಳಿಗೆ ನೀಡುವುದಾಗಿ ಇಸ್ಲಾಮಾಬಾದ್ ನವದೆಹಲಿಗೆ ನೀಡಿದ ಭರವಸೆಯನ್ನು ರದ್ದುಪಡಿಸಿತು.

ಸಭೆಯಲ್ಲಿ ಪಾಕಿಸ್ತಾನ ಸರ್ಕಾರದ ಅಧಿಕಾರಿಗಳು ಬೆದರಿಸುವ ವರ್ತನೆಯೊಂದಿಗೆ ಹಾಜರಿದ್ದರು. ಇಸ್ಲಾಮಾಬಾದ್​ನ ಈ ವರ್ತನೆ ಹಿಂದೆ ನವದೆಹಲಿಗೆ ನೀಡಿದ ಆಶ್ವಾಸನೆಗಳಿಗೆ ವಿರುದ್ಧವಾಗಿದೆ. ಇಸ್ಲಾಮಾಬಾದ್ ಪ್ರತೀಕಾರದ ಭಯದಿಂದ ಮುಕ್ತ ವಾತಾವರಣದಲ್ಲಿ ನಡೆಯುವಂತೆ ನೋಡಿಕೊಳ್ಳಬೇಕೆಂದು ನವದೆಹಲಿ ಒತ್ತಾಯಿಸಿದೆ ಎಂದು ಎಂದು ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ಅನುರಾಗ್ ಶ್ರೀವಾಸ್ತವ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.