ನವದೆಹಲಿ: ಇಸ್ಲಾಮಾಬಾದ್‌ನಲ್ಲಿ ಭಾರತೀಯ ಹೈಕಮಿಷನ್‌ನ ಆ್ಯಕ್ಟಿಂಗ್ ಹೆಡ್ ಆಗಿ ನೇಮಕಗೊಳ್ಳಲಿದ್ದ ಹಿರಿಯ ರಾಜತಾಂತ್ರಿಕ ಜಯಂತ್ ಖೋಬ್ರಗಡೆ ಅವರಿಗೆ ಪಾಕಿಸ್ತಾನ ವೀಸಾ ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ.
ಅವರು ಈ ಹುದ್ದೆಗೆ ತುಂಬಾ ಹಿರಿಯರು ಎಂಬ ಕಾರಣಕ್ಕೆ ಪಾಕಿಸ್ತಾನ ಅವರ ವೀಸಾವನ್ನು ಅನುಮೋದಿಸಿಲ್ಲ ಎಂದು ತಿಳಿದು ಬಂದಿದೆ. ಖೋಬ್ರಗಡೆ ಅವರನ್ನು ಭಾರತದ ಉಪ ಹೈಕಮಿಷನರ್ ಆಗಿ ಪಾಕ್ಗೆ ಕಳುಹಿಸುವ ಬಗ್ಗೆ ಜೂನ್‌ನಲ್ಲೇ ಭಾರತ ತಿಳಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಆದರೆ ಈ ವಿಷಯದ ಬಗ್ಗೆ ಪಾಕಿಸ್ತಾನ ಅಥವಾ ಭಾರತ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಕಳೆದ ವರ್ಷ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಭಾರತದ ನಿರ್ಧಾರವನ್ನು ಅನುಸರಿಸಿ, ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನರ್ ಅವರನ್ನು ಹೊರ ಹಾಕುವ ಮೂಲಕ ರಾಜತಾಂತ್ರಿಕ ಸಂಬಂಧ ಹಳಸಲು ಕಾರಣವಾಗಿತ್ತು.