ETV Bharat / bharat

ಪಾಕ್​​​ ಹೆಂಡ ಕುಡಿದ ಕೋತಿಯಂತೆ ವರ್ತಿಸುತ್ತಿದೆ: ಶಿವಸೇನೆ ವಾಗ್ದಾಳಿ - undefined

ಪಾಕಿಸ್ತಾನ ಹೆಂಡ ಕುಡಿದ ಕೋತಿಯಂತಾಡುತ್ತಿದೆ ಎಂದಿದೆ. ಭಾರತ ನಡೆಸಿದ ಬಾಲಕೋಟ್​ ದಾಳಿಯಿಂದ ಪಾಕಿಸ್ತಾನ ಹತಾಷೆಗೊಳಗಾಗಿ ಇಂತಹ ಕೆಲಸ ಮಾಡುತ್ತಿದೆ. ನೆರೆ ರಾಷ್ಟ್ರದ ಬಾಲ ಕತ್ತರಿಸಲು ಅಗತ್ಯ ಹೆಜ್ಜೆ ಇಡಬೇಕಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಮ್ನಾದಲ್ಲಿ ಬರೆದುಕೊಂಡಿದೆ.

ಶಿವಸೇನೆ
author img

By

Published : Jun 4, 2019, 12:05 PM IST

ಮುಂಬೈ: ಭಾರತೀಯ ಹೈಕಮಿಷನ್​ನ ಇಫ್ತಾರ್​ ಕೂಟಕ್ಕೆ ಆಗಮಿಸಿದ್ದ ಅತಿಥಿಗಳನ್ನು ತಡೆದು ವಿವಾದ ಸೃಷ್ಟಿಸಿದ ಪಾಕಿಸ್ತಾನವನ್ನು ಶಿವಸೇನೆ ಹೆಂಡ ಕುಡಿದ ಕೋತಿಗೆ ಹೋಲಿಸಿ ವಾಗ್ದಾಳಿ ನಡೆಸಿದೆ.

ತನ್ನ ಮುಖವಾಣಿ ಸಮ್ನಾದಲ್ಲಿ ಬರೆದುಕೊಂಡಿರುವ ಶಿವಸೇನೆ, ಪಾಕಿಸ್ತಾನ ಹೆಂಡ ಕುಡಿದ ಕೋತಿಯಂತಾಡುತ್ತಿದೆ ಎಂದಿದೆ. ಭಾರತ ನಡೆಸಿದ ಬಾಲಕೋಟ್​ ದಾಳಿಯಿಂದ ಪಾಕಿಸ್ತಾನ ಹತಾಷೆಗೊಳಗಾಗಿ ಇಂತಹ ಕೆಲಸ ಮಾಡುತ್ತಿದೆ. ನೆರೆ ರಾಷ್ಟ್ರದ ಬಾಲ ಕತ್ತರಿಸಲು ಅಗತ್ಯ ಹೆಜ್ಜೆ ಇಡಬೇಕಿದೆ ಎಂದು ಹೇಳಿದೆ.

ಅಭೂತಪೂರ್ವ ಬಹುಮತದೊಂದಿಗೆ ನರೇಂದ್ರ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬಂದದ್ದನ್ನು ಪಾಕ್ ಪ್ರಧಾನಿ ಇಮ್ರಾನ್​ ಖಾನ್​ಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಮೋದಿ ಮತ್ತೆ ಪ್ರಧಾನಿಯಾದಾಗ ಶುಭ ಕೋರಿ, ಶಾಂತಿಗಾಗಿ ಎರಡೂ ರಾಷ್ಟ್ರಗಳು ಹೆಜ್ಜೆ ಇಡಬೇಕು ಎಂದು ಇಮ್ರಾನ್​ ಹೇಳುತ್ತಾರೆ. ಆದರೆ ಇಫ್ತಾರ್ ​ಕೂಟದಲ್ಲಿ ನಡೆದ ಘಟನೆ ಶಾಂತಿ ಸ್ಥಾಪಿಸುವ ಕಾರ್ಯವೇ? ಎಂದು ಪ್ರಶ್ನಿಸಿದೆ.

ಪಾಕಿಸ್ತಾನ ಮಾತುಕತೆಗೆ ಯೋಗ್ಯವಾದ ರಾಷ್ಟ್ರವಲ್ಲ. ಭಾರತೀಯ ಹೈಕಮಿಷನರ್ ಕಚೇರಿಯ ಇಫ್ತಾರ್​ ಕೂಟಕ್ಕೆ ಪಾಕಿಸ್ತಾನದ ಗೌರವಾನ್ವಿತ ಪ್ರಜೆಗಳನ್ನು ಆಹ್ವಾನಿಸಲಾಗಿತ್ತೇ ವಿನಃ ಜೈಷೆ ಉಗ್ರ ಮಸೂದ್​ ಅಜರ್​ನಂತಹವರನಲ್ಲ. ಇದಕ್ಕೇ ಪಾಕಿಸ್ತಾನ ಸಿಟ್ಟಾಗಿರಬೇಕು ಎಂದು ಕಾಲೆಳೆದಿದೆ.

ಉರಿ, ಪಠಾಣ್​ಕೋಟ್​, ಪುಲ್ವಾಮಾ ದಾಳಿ ಸಂಬಂಧ ಭಾರತ ನೀಡಿರುವ ದಾಖಲೆಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಪಾಕಿಸ್ತಾನ, ಭಯೋತ್ಪಾದಕರ ಕಾರ್ಖಾನೆ ಎಂದು ಆರೋಪಿಸಿದೆ.

Intro:Body:

Shiv Sena 

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.