ಲಾಹೋರ್ (ಪಾಕಿಸ್ತಾನ): ತನ್ನ ಸಹಪಾಠಿ ಹಾಗೂ ಆತನ ಮೂವರು ಸ್ನೇಹಿತರಿಂದ ವಿದ್ಯಾರ್ಥಿನಿ ಅತ್ಯಾಚಾರಕ್ಕೆ ಒಳಗಾದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.
ಫೈಸಲಾಬಾದ್ನಲ್ಲಿ ಸರ್ಕಾರಿ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಯ ಮೇಲೆ ಅತ್ಯಾಚಾರ ನಡೆದಿದ್ದು, ವಿದ್ಯಾರ್ಥಿನಿ ತನ್ನ ಸಹಪಾಠಿ ಶಹೀದ್ ಅಲಿ ಎಂಬಾತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಅಕ್ಟೋಬರ್ 23ರಂದು ಆಕೆಯನ್ನು ಲಾಹೋರ್ನಿಂದ 150 ಕಿಲೋಮೀಟರ್ ದೂರದ ಸ್ಥಳವಾದ ಚಿನಿಯೋಟ್ಗೆ ಕರೆದುಕೊಂಡು ಹೋಗಿ ನಂತರ ಗನ್ನಿಂದ ಬೆದರಿಸಿ ಮೂವರು ಸ್ನೇಹಿತರೊಂದಿಗೆ ಅತ್ಯಾಚಾರ ನಡೆಸಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾಳೆ.
ಶಹೀದ್ ಅಲಿಯ ಸ್ನೇಹಿತರನ್ನು ಇಮ್ರಾನ್, ರಿಯಾಜ್, ತಸ್ವಾರ್ ಎಂದು ಗುರ್ತಿಸಲಾಗಿದ್ದು, ಈಗಾಗಲೇ ಮುಖ್ಯ ಆರೋಪಿ ಶಹೀದ್ನನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ. ಇನ್ನೂ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭವಾಗಿದೆ.
ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಅತ್ಯಾಚಾರ ನಡೆದಿರುವುದಾಗಿ ವೈದ್ಯರು ಸ್ಪಷ್ಟನೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.