ನವದೆಹಲಿ/ಇಸ್ಲಮಾಬಾದ್: ಪಾಕಿಸ್ಥಾನ ಮಾಧ್ಯಮಗಳು ಹೀಗೊಂದು ವರದಿ ಬಿತ್ತರಿಸಿದ್ದು, ಸೌದಿ ಅರೇಬಿಯಾಗೆ ತೆರಳುತ್ತಿರುವ ಪ್ರಧಾನಿ ಮೋದಿ ವಿಮಾನಕ್ಕೆ ವಾಯುಪ್ರದೇಶ ಬಳಸಲು ಪಾಕ್ ನಿರಾಕರಿಸಿದೆಯಂತೆ.
ಈ ವಾರ ಎರಡು ದಿನಗಳ ಪಶ್ಚಿಮ ಏಷ್ಯಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ ಸೌದಿ ಅರೇಬಿಯಾಗೆ ತೆರಳಲಿದ್ದಾರೆ. ಹೀಗಾಗಿ ತಾವು ಪ್ರಯಾಣಿಸುವ ವಿಮಾನಕ್ಕೆ ವಾಯು ಪ್ರದೇಶ ಬಳಸಿಕೊಳ್ಳಲು ಅನುಮತಿ ನೀಡುವಂತೆ ಮೋದಿ ಪಾಕ್ಗೆ ಲಿಖಿತ ಮನವಿ ಸಲ್ಲಿಸಿದ್ದರು. ಈ ಮನವಿಗೆ ಒಪ್ಪಿಗೆ ಸೂಚಿಸಲು ಪಾಕ್ ನಿರಾಕರಿಸಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
-
Pakistan media: Pakistan has denied Prime Minister Narendra Modi's request to use Pakistan’s airspace to travel to Saudi Arabia. Pakistan's Foreign Minister Shah Mehmood Qureshi will be informing the Indian High Commissioner of its decision through a written statement. pic.twitter.com/oBhAReCS3j
— ANI (@ANI) October 27, 2019 " class="align-text-top noRightClick twitterSection" data="
">Pakistan media: Pakistan has denied Prime Minister Narendra Modi's request to use Pakistan’s airspace to travel to Saudi Arabia. Pakistan's Foreign Minister Shah Mehmood Qureshi will be informing the Indian High Commissioner of its decision through a written statement. pic.twitter.com/oBhAReCS3j
— ANI (@ANI) October 27, 2019Pakistan media: Pakistan has denied Prime Minister Narendra Modi's request to use Pakistan’s airspace to travel to Saudi Arabia. Pakistan's Foreign Minister Shah Mehmood Qureshi will be informing the Indian High Commissioner of its decision through a written statement. pic.twitter.com/oBhAReCS3j
— ANI (@ANI) October 27, 2019
ಈ ಬಗ್ಗೆ ಪಾಕ್ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ಭಾರತದ ಹೈಕಮಿಷನರ್ಗೆ ಲಿಖಿತ ಹೇಳಿಕೆ ನೀಡಲಿದ್ದಾರೆ ಎಂದು ಪಾಕ್ ಮಾಧ್ಯಮಗಳು ಹೇಳಿವೆ. ಆದರೆ ಈ ಬಗ್ಗೆ ಭಾರತ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಹಿಂದೆ ಅಮೆರಿಕಾಗೆ ತೆರಳಬೇಕಿದ್ದ ಪ್ರಧಾನಿ ಮೋದಿಯವರ ವಿಮಾನಕ್ಕೂ ವಾಯು ಪ್ರದೇಶ ಬಳಕೆಗೆ ಪಾಕ್ ನಿರಾಕರಿಸಿತ್ತು. ಅಲ್ಲದೆ ಅದಕ್ಕೂ ಮೊದಲು ಐಸ್ಲ್ಯಾಂಡ್ಗೆ ತೆರಳುತ್ತಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೂ ಪಾಕ್ ತಡೆಯೊಡ್ಡಿತ್ತು.