ಮುಜಾಫರಾಬಾದ್: ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮೋದಿ ಸರ್ಕಾರ ಹಿಂಪಡೆದ ಬಳಿಕ ಇದೀಗ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸ್ವಾತಂತ್ರ್ಯ ಕಿಡಿ ಹೊತ್ತಿದೆ.
ಕಾಶ್ಮೀರದ ವಿಚಾರದಲ್ಲಿ ಭಾರತ ಸರ್ಕಾರದ ದಿಟ್ಟ ನಿಲುವು ಪಾಕಿಸ್ತಾನಕ್ಕೆ ಭಾರಿ ತಲೆನೋವಾಗಿದ್ದು, ಈ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿ ಪಾಕ್ ಭಾರಿ ಮುಖಭಂಗಕ್ಕೆ ಒಳಗಾಗಿತ್ತು. ಸದ್ಯ ಪಾಕ್ ಆಕ್ರಮಿತ ಪಾಶ್ಮೀರ(ಪಿಒಕೆ) ಪ್ರದೇಶ ಕೈತಪ್ಪುವ ಭೀತಿ ಪಾಕಿಸ್ತಾನ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಪಾಕ್ ಆರ್ಮಿ ವಿರುದ್ಧ ಭುಗಿಲೆದ್ದ ಆಕ್ರೋಶ... ಕಾಶ್ಮೀರಿಗಳಂತೆ ನಮಗೂ ಸ್ವಾತಂತ್ರ್ಯ ನೀಡಿ ಎಂದ POK!
ಸದ್ಯ ಪಿಒಕೆ ಭಾಗದಲ್ಲಿ ಸ್ವಾತಂತ್ರ್ಯದ ಕೂಗು ಕೇಳಿ ಬರುತ್ತಿದೆ ಎನ್ನುವ ವಿಚಾರವನ್ನು ಅಮೆರಿಕ ಖ್ಯಾತ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
-
Pak faces growing calls for independence in PoK: Report
— ANI Digital (@ani_digital) September 19, 2019 " class="align-text-top noRightClick twitterSection" data="
Read @ANI Story | https://t.co/T2bIRGI0nW pic.twitter.com/4UiFSIKEev
">Pak faces growing calls for independence in PoK: Report
— ANI Digital (@ani_digital) September 19, 2019
Read @ANI Story | https://t.co/T2bIRGI0nW pic.twitter.com/4UiFSIKEevPak faces growing calls for independence in PoK: Report
— ANI Digital (@ani_digital) September 19, 2019
Read @ANI Story | https://t.co/T2bIRGI0nW pic.twitter.com/4UiFSIKEev
ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಕೆಲ ಪತ್ರಕರ್ತರು ಪಿಒಕೆ ಪ್ರಾಂತ್ಯಕ್ಕೆ ತೆರಳಿದ್ದು ಈ ವೇಳೆ ಅಲ್ಲಿನ ನಿವಾಸಿಗಳ ಮಾತಿಗೆ ಕಿವಿಯಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದ ಪ್ರಾಬಲ್ಯ ಮಿತಿ ಮೀರುತ್ತಿದೆ. ಈ ಹಿಡಿತದಿಂದ ಹೊರಬರಲು ಅಲ್ಲಿನ ಸ್ಥಳೀಯರು ಮನಸ್ಸು ಮಾಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ.
ಶ್ರೀನಗರ ಬೇಕು ಅಂತಿದ್ದ ನಮಗೆ ಪಿಒಕೆ ಪ್ರದೇಶ ಉಳಿಸುವ ಸವಾಲು ಎದುರಾಗಿದೆ: ಬಿಲಾವಲ್ ಭುಟ್ಟೋ
ಪಿಒಕೆ ಭಾಗದಲ್ಲಿ ಸ್ವಾತಂತ್ರ್ಯದ ಪ್ರಚಾರಗಳು ದೊಡ್ಡ ಮಟ್ಟದಲ್ಲಿ ಜನರನ್ನು ಆಕರ್ಷಿಸುತ್ತಿವೆ ಎಂದು ಸ್ವತಃ ಅಲ್ಲಿನ ನಿವಾಸಿಗಳೇ ಹೇಳಿದ್ದಾರೆ. ಆದರೆ ಅಲ್ಲಿನ ಸ್ವಾತಂತ್ರ್ಯ ಹೋರಾಟಗಳು ಪಾಕ್ ಮಾಧ್ಯಮಗಳಲ್ಲಿ ವರದಿಯಾಗುತ್ತಿಲ್ಲ. ಜೊತೆಗೆ ಅಲ್ಲಿನ ನಿವಾಸಿಗಳಿಗೆ ಮೊಬೈಲ್ ಬಳಕೆ ನಿಷೇಧಿಸಿರುವುದಲ್ಲದೆ ಇಂಟರ್ನೆಟ್ ಸಂಪರ್ಕವೂ ಲಭ್ಯವಿಲ್ಲ.
ಪಾಕಿಸ್ತಾನದಿಂದ ಪಿಒಕೆ ಭಾಗದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎನ್ನುವುದನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ತಿಳಿಸುವ ಪ್ರಯತ್ನವನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ಮಾಡುತ್ತಿದ್ದಾರೆ.