ETV Bharat / bharat

ಪಾಕ್​ಗೆ ಛೀಮಾರಿ ಹಾಕಿದ  ಎಫ್ಎಟಿಎಫ್: ಅಂತಾರಾಷ್ಟ್ರೀಯ ಸಾಲ ಪಡೆಯುವುದು ಇನ್ನು ದುರ್ಗಮ

author img

By

Published : Feb 22, 2019, 7:55 PM IST

Updated : Feb 23, 2019, 8:32 AM IST

ಉಗ್ರವಾದಕ್ಕೆ ನೆರವು ನೀಡಬಾರದೆಂದು ಆರ್ಥಿಕ ಕ್ರಿಯಾ ಕಾರ್ಯಪಡೆ (FATF)ಯು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.

ಎಫ್ಎಟಿಎಫ್ ಸಭೆ

ನವದೆಹಲಿ: ಪುಲ್ವಾಮಾ ದಾಳಿ ನಂತರ ವಿಶ್ವಮಟ್ಟದಲ್ಲಿ ಪಾಕ್​ಅನ್ನು ದುರ್ಬಲಗೊಳಿಸಲು ಭಾರತ ಪ್ರಯತ್ನ ನಡೆಸುತ್ತಲೇ ಇದೆ. ಇದರ ಬೆನ್ನಲ್ಲೆ, ಪ್ಯಾರಿಸ್​ನ ಅಂತಾರಾಷ್ಟ್ರ ಸಂಸ್ಥೆ ಎಫ್ಎಟಿಎಫ್​ ಸಹ ಪಾಕ್​ಗೆ ಪೆಟ್ಟು ನೀಡಿದೆ.

ಉಗ್ರವಾದಕ್ಕೆ ಆರ್ಥಿಕ ನೆರವು ನೀಡುವುದನ್ನು ತಡೆಯುವ ಆರ್ಥಿಕ ಕ್ರಿಯಾ ಕಾರ್ಯಪಡೆ (FATF)ಯು ಇಂದು ನಡೆದ ಸಭೆಯಲ್ಲಿ ಪುಲ್ವಾಮಾ ದಾಳಿಯವನ್ನು ಬಲವಾಗಿ ಖಂಡಿಸಿದೆ. ಜೈಶ್​ ಎ ಮೊಹಮ್ಮದ್​ ಹಾಗೂ ಲಷ್ಕರ್ ಎ ತೊಯ್ಬಾದಂತಹ ಉಗ್ರ ಸಂಘಟನೆಗಳಿಗೆ ಹಣಕಾಸಿನ ನೆರವನ್ನು ನಿಗ್ರಹಿಸುವಲ್ಲಿ ಪಾಕ್​ ವಿಫಲವಾಗಿದೆ ಎಂದು ಆರೋಪಿಸಿದೆ. ಅಲ್ಲದೆ, ಪಾಕ್​ಅನ್ನು ತನ್ನ ಗ್ರೇ ಲಿಸ್ಟ್​ನಲ್ಲಿಯೇ ಮುಂದುವರೆಸಲು ನಿರ್ಧರಿಸಿದೆ. ಇದರಿಂದ ಪಾಕ್ ಅಂತಾರಾಷ್ಟ್ರ ಸಾಲಗಳನ್ನು ಪಡೆಯುವುದು ಕಷ್ಟಸಾಧ್ಯವಾಗುತ್ತದೆ.

38 ಸದಸ್ಯರುಳ್ಳ ಸಂಸ್ಥೆಯು, ಪುಲ್ವಾಮಾ ದಾಳಿಯಂತಹ ವಿಧ್ವಂಸಕ ಕೃತ್ಯಗಳು ಉಗ್ರವಾದ ಪ್ರಚೋದಕ ಶಕ್ತಿಗಳ ಆರ್ಥಿಕ ನೆರವಿಲ್ಲದೆ ನಡೆಯುವುದಿಲ್ಲ. ಪಾಕ್​ ಇಂತಹ ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ತಡೆಯುವುದರಲ್ಲಿ ಸರಿಯಾದ ಕ್ರಮ ಕೈಗೊಂಡಿಲ್ಲ. ಪಾಕ್ ಕೂಡಲೆ ಆಕ್ಷನ್​ ಪ್ಲಾನ್​ ರೂಪಿಸಿ, ತನ್ನ ಕೊರತೆಗಳನ್ನು ಸರಿದೂಗಿಸಿಕೊಳ್ಳುವ ಕಾರ್ಯವನ್ನು ಮುಂದುವರೆಸಬೇಕು ಎಂದು ಸೂಚನೆ ನೀಡಿದೆ.

ಇದೇ ಮೇ ಒಳಗೆ ಪಾಕ್​ ತನ್ನ ಆಕ್ಷನ್​ ಪ್ಲಾನ್ ರೂಪಿಸಬೇಕು. ಅಂತೆಯೇ ಅಕ್ಟೋಬರ್ ಒಳಗೆ ತನ್ನ ಗುರಿಯನ್ನು ತಲುಪಿಲಿಲ್ಲವಾದರೆ ಬ್ಲಾಕ್​ಲಿಸ್ಟ್​ಗೆ ಸೇರಿಸಲಾಗುವುದು ಎಂದು ಖಡಕ್​ ಎಚ್ಚರಿಕೆಯನ್ನೂ ನೀಡಿದೆ.

ಕಳೆದ ವಾರ ಭಾರತದ ಗುಪ್ತಚರ ಅಧಿಕಾರಿಗಳು, ಪುಲ್ವಾಮಾ ದಾಳಿಯಲ್ಲಿ ಪಾಕ್ ಪಾತ್ರವಿರುವ ಕುರಿತು ಎಫ್ಎಟಿಎಫ್​ಗೆ ದಾಖಲೆ ಸಲ್ಲಿಸಲಾಗುವುದು ಎಂದು ಹೇಳಿದ್ದರು. ಪಾಕ್​ ಕಳೆದ ವರ್ಷ ಜೂನ್​ ತಿಂಗಳಿಂದ ಎಫ್ಎಟಿಎಫ್​ನ ಗ್ರೇ ಲಿಸ್ಟ್​ನಲ್ಲಿದೆ. ಈಗಾಗಲೆ ಆರ್ಥಿಕ ಸಂಕಷ್ಟದಿಂದ ಕತ್ತೆಗಳನ್ನು ಮಾರಾಟ ಮಾಡುವಷ್ಟು ಅಧೋಗತಿಗೆ ಇಳಿದಿರುವ ಪಾಕ್​ಗೆ ಇದು ಮತ್ತಷ್ಟು ಹೊಡೆತ ನೀಡಲಿದೆ ಎಂದೇ ಹೇಳಲಾಗ್ತಿದೆ.

undefined

Intro:Body:

ಪಾಕ್​ಗೆ ಛೀಮಾರಿ ಹಾಕಿದ  ಎಫ್ಎಟಿಎಫ್: ಅಂತಾರಾಷ್ಟ್ರೀಯ ಸಾಲ ಪಡೆಯುವುದು ಇನ್ನು ದುರ್ಗಮ

Pak Doesn't Show Understanding Of Terror Financing Risks: Watchdog FATF

ನವದೆಹಲಿ: ಪುಲ್ವಾಮ ದಾಳಿ ನಂತರ ವಿಶ್ವ ಮಟ್ಟದಲ್ಲಿ ಪಾಕ್​ ಅನ್ನು ದುರ್ಬಲಗೊಳಿಸಲು ಭಾರತ ಪ್ರಯತ್ನ ನಡೆಸುತ್ತಲೇ ಇದೆ. ಇದರ ಬೆನ್ನಲ್ಲೆ,  ಪ್ಯಾರಿಸ್​ನ ಅಂತಾರಾಷ್ಟ್ರ ಸಂಸ್ಥೆ ಎಫ್ಎಟಿಎಫ್​ ಸಹ ಪಾಕ್ ಗೆ  ಪೆಟ್ಟು ನೀಡಿದೆ.

ಉಗ್ರವಾದಕ್ಕೆ ಆರ್ಥಿಕ ನೆರವು ನೀಡುವುದನ್ನು ತಡೆಯುವ  ಆರ್ಥಿಕ ಕ್ರಿಯಾ ಕಾರ್ಯಪಡೆ (FATF)ಯು ಇಂದು ನಡೆದ ಸಭೆಯಲ್ಲಿ ಪುಲ್ವಾಮ ದಾಳಿಯವನ್ನು ಬಲವಾಗಿ  ಖಂಡಿಸಿದೆ.  ಜೈಶ್​ ಎ ಮೊಹಮ್ಮದ್​ ಹಾಗೂ  ಲಷ್ಕರ್ ಎ ತೊಯ್ಬಾದಂತಹ ಉಗ್ರ ಸಂಘಟನೆಗಳಿಗೆ  ಹಣಕಾಸಿನ ನೆರವನ್ನು ನಿಗ್ರಹಿಸುವಲ್ಲಿ ಪಾಕ್​ ವಿಫಲವಾಗಿದೆ ಎಂದು ಆರೋಪಿಸಿದೆ. ಅಲ್ಲದೆ, ಪಾಕ್​ ಅನ್ನು ತನ್ನ ಗ್ರೇ ಲಿಸ್ಟ್​ನಲ್ಲಿಯೇ ಮುಂದುವರೆಸಲು ನಿರ್ಧರಿಸಿದೆ. ಇದರಿಂದ ಪಾಕ್ ಅಂತಾರಾಷ್ಟ್ರ ಸಾಲಗಳನ್ನು ಪಡೆಯುವುದು ಕಷ್ಟಸಾಧ್ಯವಾಗುತ್ತದೆ.

38 ಸದಸ್ಯರುಳ್ಳ ಸಂಸ್ಥೆಯು, ಪುಲ್ವಾಮ ದಾಳಿಯಂತಹ ವಿಧ್ವಂಸಕ  ಕೃತ್ಯಗಳು ಉಗ್ರವಾದ ಪ್ರಚೋದಕ ಶಕ್ತಿಗಳ ಆರ್ಥಿಕ ನೆರವಿಲ್ಲದೆ ನಡೆಯುವುದಿಲ್ಲ. ಪಾಕ್​ ಇಂತಹ ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು  ತಡೆಯುವುದರಲ್ಲಿ ಪಾಕ್ ಸರಿಯಾದ ಕ್ರಮ ಕೈಗೊಂಡಿಲ್ಲ. ಪಾಕ್ ಕೂಡಲೆ ಆಕ್ಷನ್​ ಪ್ಲಾನ್​ ರೂಪಿಸಿ, ತನ್ನ ಕೊರತೆಗಳನ್ನು ಸರಿದೂಗಿಸಿಕೊಳ್ಳುವ ಕಾರ್ಯವನ್ನು ಮುಂದುವರೆಸಬೇಕು ಎಂದು ಸೂಚನೆ ನೀಡಿದೆ.

ಇದೇ ಮೇ ಒಳಗೆ ಪಾಕ್​ ತನ್ನ ಆಕ್ಷನ್​ ಪ್ಲಾನ್ ರೂಪಿಸಬೇಕು. ಅಂತೆಯೇ ಅಕ್ಟೋಬರ್ ಒಳಗೆ ತನ್ನ ಗುರಿಯನ್ನು ತಲುಪಿಲಿಲ್ಲವಾದರೆ ಬ್ಲಾಕ್​ಲಿಸ್ಟ್​ಗೆ ಸೇರಿಸಲಾಗುವುದು ಎಂದು ಖಡಕ್​ ಎಚ್ಚರಿಕೆಯನ್ನೂ ನೀಡಿದೆ.

ಕಳೆದ  ವಾರ ಭಾರತದ  ಗುಪ್ತಚರ ಅಧಿಕಾರಿಗಳು, ಪುಲ್ವಾಮ ದಾಳಿಯಲ್ಲಿ ಪಾಕ್ ಪಾತ್ರವಿರುವ ಕುರಿತು ಎಫ್ಎಟಿಎಫ್​ಗೆ ದಾಖಲೆ ಸಲ್ಲಿಸಲಾಗುವುದು ಎಂದು  ಹೇಳಿದ್ದರು.  ಪಾಕ್​ ಕಳೆದ ವರ್ಷ ಜೂನ್​ ತಿಂಗಳಿಂದ ಎಫ್ಎಟಿಎಫ್​ನ ಗ್ರೇ  ಲಿಸ್ಟ್​ನಲ್ಲಿದೆ. ಈಗಾಗಲೆ ಆರ್ಥಿಕ ಸಂಕಷ್ಟದಿಂದ  ಕತ್ತೆಗಳನ್ನು ಮಾರಾಟ ಮಾಡುವಷ್ಟು ಅಧೋಗತಿಗೆ ಇಳಿದಿರುವ ಪಾಕ್​ಗೆ, ಇದು ಮತ್ತಷ್ಟು ಹೊಡೆತ ನೀಡಲಿದೆ ಎಂದೇ  ಹೇಳಲಾಗ್ತಿದೆ.

Conclusion:
Last Updated : Feb 23, 2019, 8:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.