ETV Bharat / bharat

ಸಾಧನೆಗೆ ಅಮ್ಮನೇ ಸ್ಫೂರ್ತಿ... ಲಿಂಗ ಅಸಮಾನತೆ ಮೆಟ್ಟಿ ನಿಲ್ಲಬೇಕು: ಪದ್ಮಶ್ರೀ ಪುರಸ್ಕೃತೆಯ ಅಂತರಾಳ - ಲಿಂಗ ಅಸಮಾನತೆಯ ಶತ್ರುವನ್ನ ಮೆಟ್ಟಿನಿಲ್ಲಬೇಕು

ಮಹಿಳೆ ತನ್ನಷ್ಟಕ್ಕೆ ತಾನೇ ಯೋಚಿಸಿ, ತಾನೇ ಒಂದು ಶಕ್ತಿ ಎಂದು ತಿಳಿದು ಲಿಂಗ ಅಸಮಾನತೆಯನ್ನ ಮೆಟ್ಟಿ ನಿಲ್ಲಬೇಕು ಎಂದು ಲೇಖಕಿ ಬೀನಾಪಾಣಿ ಮೊಹಂತಿ ಹೇಳಿದ್ದಾರೆ.

Padmashri award winner binapani mohanty,ಲೇಖಕಿ ಬೀನಾಪಾಣಿ ಮೊಹಂತಿ
ಲೇಖಕಿ ಬೀನಾಪಾಣಿ ಮೊಹಂತಿ
author img

By

Published : Mar 3, 2020, 3:15 AM IST

ಕಟಕ್ (ಒಡಿಶಾ): ಒಂದು ರಾಷ್ಟ್ರದ ಸ್ಥಿತಿಯನ್ನು ಆ ದೇಶದ ಮಹಿಳೆಯರ ಸ್ಥಿತಿಗತಿಯಿಂದ ಅಳೆಯಬಹುದು ಎಂಬ ಮಾತಿದೆ. ಮುಂದಿನ ಪೀಳಿಗೆಗ ಜನ್ಮ ನೀಡುವ ಆಕೆ, ಪುರುಷನಷ್ಟೇ ಸಮಾನ ಸ್ಥಾನ ಹೊಂದಿದ್ದಾಳೆ.

ಒಬ್ಬ ಮಹಿಳೆ ಸಮಾಜದಲ್ಲಿ ಒಂದು ಸ್ಥಾನವನ್ನು ಗಳಿಸುವುದು ಮಾತ್ರವಲ್ಲ ಇತರರಿಗೂ ಸ್ಫೂರ್ತಿಯಾಗಿರಬೇಕು. ಒಡಿಶಾದ ಪ್ರಖ್ಯಾತ ಸಾಹಿತಿ ಬೀನಾಪಾಣಿ ಮೊಹಂತಿ ಅವರ ಕತೆಯೂ ಇದೇ ಆಗಿದೆ. ಒಡಿಶಾ ಸಾಹಿತ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಇವರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಲೇಖಕಿ ಬೀನಾಪಾಣಿ ಮೊಹಂತಿ

ತನ್ನ ಈ ಸಾಧನೆಗೆ ನನ್ನ ತಾಯಿಯೇ ಸ್ಫೂರ್ತಿ. ನನ್ನ ತಾಯಿಯಿಂದ ಸಮಾಜದಲ್ಲಿ ಸ್ಥಾನ ಗಳಿಸಲು ಸಾಧ್ಯವಾಯಿತು ಎಂದು ಭಾವಿಸುತ್ತೇನೆ. ಆಕೆ ನನಗೆ ಸ್ಫೂರ್ತಿ ಮಾತ್ರವಲ್ಲ, ಸಮಾಜದಲ್ಲಿ ಒಂದು ಸ್ಥಾನ ಗಳಿಸಲು ಸದಾ ನನ್ನ ಪ್ರೋತ್ಸಾಹಿಸುತಿದ್ದರು ಎಂದಿದ್ದಾರೆ.

ಈ ಮಹಿಳಾ ದಿನದಂದು ಎಲ್ಲಾ ಮಹಿಳೆಯರೂ ಒಂದಾಗಬೇಕು. ನವ ಸೂರ್ಯೋದಯದಂತೆ ಸಮಾಜವನ್ನು ಸುಧಾರಿಸಲು ಪ್ರತಿಜ್ಞೆ ಮಾಡಬೇಕೆಂದು ಬೀನಾಪಾಣಿ ಹೇಳುತ್ತಾರೆ.

'ಮಾಗಿದ 85 ನೇ ವಯಸ್ಸಿನಲ್ಲಿ ನಾನು ಇನ್ನೂ ಸಮಾಜಕ್ಕಾಗಿ ಬರವಣಿಗೆಯಲ್ಲಿ ತೊಡಗಿದ್ದೇನೆ. ನನ್ನ ಬರವಣಿಗೆ ನನ್ನ ಕೊನೆಯ ಉಸಿರಿರೋವರೆಗೂ ಮುಂದುವರಿಯುತ್ತದೆ. ಅಲ್ಲದೆ, ನನ್ನ ದೈಹಿಕ ಸ್ಥಿತಿ ಈಗ ತುಂಬಾ ಗಂಭೀರವಾಗಿದೆ. ದೇವರು ನನ್ನ ಬಗ್ಗೆ ದಯೆ ತೋರಿಸುತ್ತಿದ್ದರೆ ಮುಂದಿನ ದಿನಗಳಲ್ಲಿ ನನ್ನ ಬರಹಗಳು ಸಮಾಜದ ಹಿತಕ್ಕಾಗಿ ನಿರಂತರವಾಗಿ ಉಳಿಯುತ್ತವೆ' ಎಂದು ಮೊಹಂತಿ ಅವರು ಹೇಳಿದ್ದಾರೆ.

ಇಂದಿನ ಮಹಿಳೆ ಈ ಪಿತೃಪ್ರಧಾನ ಸಮಾಜದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿದೆ. ಅಸಮಾನತೆಯಿಂದ ಹಿಡಿದು ಲೈಂಗಿಕ ಕಿರುಕುಳಕ್ಕೆ ಒಳಗಾಗುವವರೆಗೆ ಮಹಿಳೆ ಸಾಕಷ್ಟು ಕಿರುಕುಳ ಅನುಭವಿಸುತ್ತಿದ್ದಾಳೆ. ಮಹಿಳೆಗೆ ಅಗತ್ಯವಾದ ಗಮನ ಸಿಗುತ್ತಿಲ್ಲ, ಕೆಲವೊಮ್ಮೆ ಅವಳು ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಡುತ್ತಾಳೆ. ದೇಶದಲ್ಲಿ ಕೊಲೆ, ಅತ್ಯಾಚಾರದಂತ ಘಟನೆಗಳು ಹೆಚ್ಚುತ್ತಲಿವೆ. ಇತ್ತೀಚಿನ ಹೈದರಾಬಾದ್ ಅತ್ಯಾಚಾರ ಪ್ರಕರಣ, 2012ರ ದೆಹಲಿ ಗ್ಯಾಂಗ್​ ರೇಪ್ ಪ್ರಕರಣ ಇರಬಹುದು. ದೆಹಲಿ ಪ್ರಕರಣದಲ್ಲಿ ಆರೋಪಿಗಳಿಗೆ ಇನ್ನೂ ಕೂಡ ಶಿಕ್ಷೆ ಆಗಿಲ್ಲ. ಇಂತಾ ಘಟನೆಗಳು ಮಹಿಳೆಯರಿಗೆ ನ್ಯಾಯಾಂಗ ವ್ಯವಸ್ಥೆ ಮೇಲಿನ ನಂಬಿಕೆಯನ್ನ ಕಡಿಮೆ ಮಾಡುತ್ತವೆ ಎಂದಿದ್ದಾರೆ.

ಪ್ರಸ್ತುತ ಸನ್ನಿವೇಶದಲ್ಲಿ ಕೆಲವೆಡೆ ಮಹಿಳೆಯರಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದಾಗ್ಯೂ ಮಹಿಳೆಯರಿಗೆ ಸಾಕಷ್ಟು ತೊಂದರೆಗಳು ಮತ್ತು ಚಿತ್ರಹಿಂಸೆಗಳಿಗೆ ಒಳಗಾಗುವ ಅನೇಕ ಸ್ಥಳಗಳಿವೆ. ಆ ನೋವುಗಳಿಂದ ಮಹಿಳೆಯರನ್ನು ಮುಕ್ತಗೊಳಿಸಲು ಮಹಿಳಾ ಸಬಲೀಕರಣದ ಅವಶ್ಯಕತೆಯಿದೆ.

ಒಬ್ಬ ಮಹಿಳೆ ತನ್ನಷ್ಟಕ್ಕೆ ತಾನೇ ಯೋಚಿಸಿ, ನಾನೇ ಒಂದು ಶಕ್ತಿ ಎಂದು ತಿಳಿದು ಲಿಂಗ ಅಸಮಾನತೆಯ ಶತ್ರುವನ್ನ ಮೆಟ್ಟಿ ನಿಲ್ಲಬೇಕು ಎಂದು ಬೀನಾಪಾಣಿ ಮೊಹಂತಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.