ನವದೆಹಲಿ: ಪಂಜಾಬ್ ಸರ್ಕಾರ ಎನ್‌ಆರ್‌ಐ ನಿವಾಸಿಗಳೂ ಸೇರಿದಂತೆ 825 ಮಂದಿ ವಿದೇಶಿಗರನ್ನು ಮಾರ್ಚ್ 31ರಿಂದ ಏಪ್ರಿಲ್ 9 ರ ನಡುವೆ ಆಯಾ ದೇಶಗಳಿಗೆ ತೆರಳು ವ್ಯವಸ್ಥೆ ಕಲ್ಪಿಸಿದೆ.
ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಕೇಂದ್ರ ಗೃಹ ಕಾರ್ಯದರ್ಶಿ, ಏಪ್ರಿಲ್ 2, 2020 ರಂದು ಭಾರತದಲ್ಲಿ ಸಿಲುಕಿರುವ ವಿದೇಶಿ ಪ್ರಜೆಗಳಿಗೆ ಸಾರಿಗೆ ವ್ಯವಸ್ಥೆ ಮಾಡಲು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್‌ಒಪಿ) ಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಮಾರ್ಗಸೂಚಿಗಳನ್ನು ಹೊರಡಿಸಿದ್ದರು.
ನಿಯಮಾವಳಿಗಳ ಪ್ರಕಾರ, ವಿದೇಶಾಂಗ ಸಚಿವಾಲಯದ ಮನವಿಗಳ ಅನುಮೋದನೆಯ ನಂತರ, ಚಾರ್ಟರ್ಡ್ ವಿಮಾನಗಳನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದೊಂದಿಗೆ ಸಮಾಲೋಚಿಸಿ ಸಂಬಂಧಪಟ್ಟ ವಿದೇಶಿ ಸರ್ಕಾರಗಳು ವ್ಯವಸ್ಥೆ ಮಾಡಬೇಕಿರುತ್ತದೆ.
ಫಿನ್‌ಲ್ಯಾಂಡ್‌ನ 28, ಡೆನ್ಮಾರ್ಕ್‌ನ 86, ಸ್ವೀಡನ್ನ 43, ನಾರ್ವೆ 50, ಲಾಟ್ವಿಯಾದ 14, ಜಪಾನ್‌ನಿಂದ 6 ನಾಗರಿಕರು ಮತ್ತು ರಷ್ಯಾ, ಸ್ಲೊವೇನಿಯಾ, ಜೆಕ್ ರಿಪಬ್ಲಿಕ್ ಮತ್ತು ತಲಾ ಇಬ್ಬರು, ಬೆಲಾರಸ್ ಮತ್ತು ಉಜ್ಬೇಕಿಸ್ತಾನ್ನ ಒಬ್ಬರುೂ ಕೆನಡಾದ 170 ನಾಗರಿಕರು ಮತ್ತು ಅಮೆರಿಕದ 273 ನಾಗರಿಕರನ್ನು ಸಹ ಪಂಜಾಬ್ನಿಂದ ಸ್ಥಳಾಂತರಿಸಲಾಗಿದೆ.
ಮುಂದೆ ಬ್ರಿಟಿಷ್ ಪ್ರಜೆಗಳನ್ನೂ ಸ್ಥಳಾಂತರಿಸಲಾಗುತ್ತದೆ, ಇದಕ್ಕಾಗಿ ಬ್ರಿಟಿಷ್ ಸರ್ಕಾರ ಅಮೃತಸರ/ಚಂಡೀಗಢದಿಂದ ವಾಪಸಾತಿ ವಿಮಾನಗಳನ್ನು ಏರ್ಪಡಿಸುತ್ತಿದೆ. ಇದಲ್ಲದೆ, ದಕ್ಷಿಣ ಕೊರಿಯಾದ 15 ನಾಗರಿಕರು, ಮಲೇಷ್ಯಾದ 33, ಸ್ಪೇನ್‌ನ 17, ಸ್ವಿಟ್ಜರ್ಲ್ಯಾಂಡ್ನ 7, ತೈವಾನ್ ಮತ್ತು ಮೆಕ್ಸಿಕೊದ ತಲಾ 4, ನೆದರ್‌ಲ್ಯಾಂಡ್‌ನಿಂದ 9 ಮತ್ತು ಸಿಂಗಾಪುರದಿಂದ 57 ನಾಗರಿಕರನ್ನು ಸಹ ಸುರಕ್ಷಿತವಾಗಿ ತಮ್ಮ ದೇಶಗಳಿಗೆ ಕಳುಹಿಸಲಾಗಿದೆ. ಎಲ್ಲಾ ವಿದೇಶಿ ಪ್ರಜೆಗಳನ್ನು ಕೋವಿಡ್-19 ರೋಗಲಕ್ಷಣಗಳ ಬಗ್ಗೆ ಪರೀಕ್ಷಿಸಲಾಗುವುದು. ಲಕ್ಷಣರಹಿತರಾಗಿರುವವರಿಗೆ ಮಾತ್ರ ರಾಜ್ಯವನ್ನು ಬಿಡಲು ಅವಕಾಶ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.