ETV Bharat / bharat

ಇಂದು 2700 ಯಾತ್ರಿಕರಿಂದ ಅಮರನಾಥ ಯಾತ್ರೆ.. ಈ ವರ್ಷ ದಾಖಲೆ ಪ್ರಮಾಣದಲ್ಲಿ ಶಿವನ ದರ್ಶನ

author img

By

Published : Jul 24, 2019, 8:54 PM IST

ಜುಲೈ1ಕ್ಕೆ ಆರಂಭಗೊಂಡ ಅಮರನಾಥ ಯಾತ್ರೆ ಬಿಗಿ ಭದ್ರತೆಯೊಂದಿಗೆ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಇಂದು 2,723 ಯಾತ್ರಿಕರ 23ನೇ ತಂಡ ಜಮ್ಮುವಿನಿಂದ ಅಮರನಾಥಕ್ಕೆ ತೆರಳಿದ್ದು, 626 ಮಹಿಳೆಯರು, 5 ಮಕ್ಕಳು, 141 ಸಾಧುಗಳನ್ನು100 ವಾಹನಗಳ ಮೂಲಕ ಕಳುಹಿಸಲಾಗಿದೆ.

ಇಂದು 2700 ಯಾತ್ರಿಕರಿಂದ ಅಮರನಾಥ ಯಾತ್ರೆ

ಜಮ್ಮು: ದಕ್ಷಿಣ ಕಾಶ್ಮೀರದ ವಾರ್ಷಿಕ ತೀರ್ಥಯಾತ್ರೆ ಕೈಗೊಳ್ಳುವ ಸಲುವಾಗಿ ಇಂದು 2,723 ಯಾತ್ರಿಕರ 23ನೇ ತಂಡ ಜಮ್ಮುವಿನಿಂದ ಅಮರನಾಥಕ್ಕೆ ತೆರಳಿವೆ.

626 ಮಹಿಳೆಯರು, 5 ಮಕ್ಕಳು, 141 ಸಾಧುಗಳನ್ನು ಬಿಗಿ ಭದ್ರತೆ ಒದಗಿಸಿ, 100 ಗಾಡಿಗಳ ಮೂಲಕ ಕಳುಹಿಸಲಾಗಿದೆ. ಅಲ್ಲದೇ, ಯಾತ್ರಿಕರು ಆದಷ್ಟು ಬೇಗ ಎರಡು ಬೇಸ್ ಕ್ಯಾಂಪ್​ಗಳಿಗೆ ತಲುಪುವ ನಿರೀಕ್ಷೆಯಲ್ಲಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ 1ಕ್ಕೆ ಪಹಲ್ಗಾಮ್ ಮತ್ತು ಬಾಲ್ಟಾಲ್ ಮಾರ್ಗ ಮೂಲಕವಾಗಿ ಆರಂಭಗೊಂಡ ಅಮರನಾಥ ಯಾತ್ರೆ ಉತ್ತಮ ರೀತಿಯಲ್ಲಿ ಪ್ರಗತಿಯಲ್ಲಿದ್ದು, ಈಗಾಗಲೇ 2,96,302 ಮಂದಿ 3,880 ಮೀಟರ್ ಎತ್ತರದಲ್ಲಿರುವ ಹಿಮಾವೃತ ಶಿವಲಿಂಗಕ್ಕೆ ಪಾರ್ಥನೆ ಸಲ್ಲಿಸಿದ್ದಾರೆ.

ಈ ಹೊಸ ಬ್ಯಾಚ್​ನ 220 ಮಹಿಳೆಯರು, 1ಮಗು 141 ಸಾಧುಗಳು ಸೇರಿದಂತೆ 1,476 ಯಾತ್ರಾರ್ಥಿಗಳು ಪಹಲ್ಗಾಮ್ ಬೇಸ್ ಕ್ಯಾಂಪ್​ನಿಂದ, ಉಳಿದ 406 ಮಹಿಳೆಯರು, 4 ಮಕ್ಕಳು ಸೇರಿದಂತೆ ಒಟ್ಟು ಬಾಲ್ಟಾಲ್ ಮಾರ್ಗ ಮೂಲಕವಾಗಿ ಅಮರನಾಥಕ್ಕೆ ಯಾತ್ರೆ ನಡೆಸಲಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಯಾತ್ರೆ ಆಗಸ್ಟ್ 15ಕ್ಕೆ ರಕ್ಷಾ ಬಂಧನ ದಿನದಂದು ಮುಕ್ತಾಯಗೊಳ್ಳಲಿದೆ. ಕಳೆದ ಬಾರಿಯ ಯಾತ್ರೆಯ 22ನೇ ದಿನದಂದು 2.85 ಲಕ್ಷ ಯಾತ್ರಿಕರು ಭೇಟಿ ನೀಡಿದ್ದು, ಈ ಬಾರಿ ಆ ದಾಖಲೆಯನ್ನು ಮುರಿದಿದೆ. 2015ರಲ್ಲಿ 3,52,771 ಯಾತ್ರಿಕರು, 2016ರಲ್ಲಿ 3,52,771 ಯಾತ್ರಿಕರು ಹಾಗೂ 2017ರಲ್ಲಿ 2,60,003 ಯಾತ್ರಿಕರು ಅಮರನಾಥಕ್ಕೆ ಭೇಟಿ ನೀಡಿದ್ದು ಈ ಬಾರಿ ಎಲ್ಲಾ ದಾಖಲೆಗಳನ್ನು ಮುರಿಯುವ ಸಾಧ್ಯತೆಯಿದೆ.

Intro:Body:Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.