ETV Bharat / bharat

ತೆಲಂಗಾಣದಲ್ಲಿ ಕಳೆದ 10 ದಿನಗಳಲ್ಲಿ 2000 ಕೋವಿಡ್​​​​ ಸೋಂಕಿತರು ನಾಪತ್ತೆ!

ಕೋವಿಡ್​ ಪರೀಕ್ಷೆಗೆ ಒಳಪಟ್ಟು, ವರದಿ ಪಾಸಿಟಿವ್​ ಬಂದ ಬಳಿಕ ತೆಲಂಗಾಣದಲ್ಲಿ 2 ಸಾವಿರಕ್ಕೂ ಅಧಿಕ ಸೋಂಕಿತರು ನಾಪತ್ತೆಯಾಗಿದ್ದಾರೆ.

Telangana
ತೆಲಂಗಾಣ
author img

By

Published : Jul 17, 2020, 1:52 PM IST

ಹೈದರಾಬಾದ್: ತೆಲಂಗಾಣದಲ್ಲಿ ಕೊರೊನಾ ರ‍್ಯಾಪಿಡ್​ ಟೆಸ್ಟ್​ ಪ್ರಾರಂಭವಾದ ಬಳಿಕ ಕಳೆದ 10 ದಿನಗಳಲ್ಲಿ 2,000ಕ್ಕೂ ಹೆಚ್ಚು ಸೋಂಕಿತರು ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳು ಹಾಗೂ ಕೋವಿಡ್​ ಕೇಂದ್ರಗಳಲ್ಲಿ ಕೋವಿಡ್​ ಪರೀಕ್ಷೆಗೆ ಒಳಪಟ್ಟು, ವರದಿ ಪಾಸಿಟಿವ್​ ಬಂದ ಬಳಿಕ ಸೋಂಕಿತರ ಪತ್ತೆಯೇ ಇಲ್ಲ. ಸೋಂಕಿತರು ತಪ್ಪು/ಸುಳ್ಳು ದೂರವಾಣಿ ಸಂಖ್ಯೆ ಹಾಗೂ ವಿಳಾಸ ನೀಡಿದ್ದರಿಂದ ಆರೋಗ್ಯ ಮತ್ತು ಪುರಸಭೆ ಅಧಿಕಾರಿಗಳಿಗೆ ಅವರನ್ನು ಹುಡುಕಲು ಸಾಧ್ಯವಾಗುತ್ತಿಲ್ಲ. ಕರೆ ಮಾಡಿದರೆ ಕೆಲವರ ಮೊಬೈಲ್​ ಸ್ವಿಚ್​ ಆಫ್​ ಆಗಿದೆ ಎಂಬ ಮಾಹಿತಿ ದೊರೆತಿದೆ.

ತೆಲಂಗಾಣದಲ್ಲಿ ಈವರೆಗೆ 41,018 ಕೇಸ್​ಗಳು ಹಾಗೂ 396 ಸಾವು ವರದಿಯಾಗಿದೆ. ಈ ಪೈಕಿ 27,295 ಮಂದಿ ಗುಣಮುಖರಾಗಿದ್ದು, 13,328 ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.