ಹೈದರಾಬಾದ್: ಕೊರೊನಾ ವೈರಸ್ ಮಹಾಮಾರಿ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ, ದೇಶದ ವಿವಿಧ ಕಾಲೇಜು, ವಿಶ್ವವಿದ್ಯಾಲಯದ ಉಪನ್ಯಾಸಕರು ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. ಆ ಮೂಲಕ ಭಾರತ, ಸಂದಿಗ್ಧ ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಅಧ್ಯಾಪಕರು ಸಾಬೀತುಪಡಿಸಿದ್ದಾರೆ. ಇದಕ್ಕೆಲ್ಲ ಉತ್ತಮ ವೇದಿಕೆ ಆಗಿದ್ದು ಸಾಮಾಜಿಕ ಜಾಲತಾಣ.
ವಾಟ್ಸ್ ಆ್ಯಪ್, ಯೂಟ್ಯೂಬ್ನಂತಹ ಸಾಮಾಜಿಕ ಜಾಲತಾಣದ ಮಾಧ್ಯಮಗಳು ತೆಲಂಗಾಣ ಸಾಮಾಜಿಕ ಮತ್ತು ಗಿರಿಜನ ಕಲ್ಯಾಣ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಬೋಧನಾ ಶೈಲಿಯನ್ನು ಬದಲಿಸಿವೆ. ಈಗ ನಡೆಯುತ್ತಿರುವ ಲಾಕ್ಡೌನ್ನಿಂದಾಗಿ ರಾಜ್ಯದ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಮತ್ತು ರಿಮೋಟ್ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.
ತೆಲಂಗಾಣ ಸೇರಿದಂತೆ ದೇಶಾದ್ಯಂತ ಲಾಕ್ ಡೌನ್ ಜಾರಿಗೆ ಬಂದ ಕೂಡಲೇ ತೆಲಂಗಾಣ ಸಮಾಜ ಕಲ್ಯಾಣ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ (ಟಿಎಸ್ಡಬ್ಲ್ಯೂಆರ್ಇಐಎಸ್) ಮತ್ತು ತೆಲಂಗಾಣ ಗಿರಿಜನ ಕ್ಷೇಮಾಭಿವೃದ್ಧಿ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿಗೆ (ಟಿಟಿಡಬ್ಲ್ಯೂಆರ್ಇಐಎಸ್) ಸೇರಿದ ವಿವಿಧ ವಸತಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಯಿತು.
ಈ ಸಂಸ್ಥೆಗಳು 5ನೇ ತರಗತಿಯಿಂದ ಪದವಿ ಮಟ್ಟದವರೆಗೂ ಬೋಧಿಸುತ್ತವೆ. ವಿದ್ಯಾರ್ಥಿಗಳು ಪಠ್ಯಕ್ರಮದೊಂದಿಗೆ ನಿಯಮಿತ ಸಂಪರ್ಕ ಹೊಂದುವ ನೆಪದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳಿಗೆ ಸುಲಭವಾಗಿ ತಲುಪಲು ಸಾಧ್ಯವಾದಷ್ಟು ತಂತ್ರಜ್ಞಾನ ಬಳಸಿ ಎಂದು ತಾಕೀತು ಮಾಡಿದರು ಎಂದು ಟಿಎಸ್ಡಬ್ಲ್ಯೂಆರ್ಇಐಎಸ್ ಮತ್ತು ಟಿಟಿಡಬ್ಲ್ಯೂಆರ್ಇಐಎಸ್ ಕಾರ್ಯದರ್ಶಿ ಆರ್.ಎಸ್ ಪ್ರವೀಣ್ ಕುಮಾರ್ ಹೇಳಿದ್ದಾರೆ.
ಟಿಎಸ್ಡಬ್ಲ್ಯೂಆರ್ಇಐಎಸ್ 268 (ಬಾಲಕರು-93; ಬಾಲಕಿಯರು-173 ಮತ್ತು ಕೋ-ಎಡ್-2) ಶೈಕ್ಷಣಿಕ ಸಂಸ್ಥೆಗಳು ಮತ್ತು ಟಿಟಿಡಬ್ಲ್ಯೂಆರ್ಇಐಎಸ್- 179 ಸಂಸ್ಥೆಗಳಲ್ಲಿ (ಬಾಲಕರು-68 ಮತ್ತು ಬಾಲಕಿಯರು-111). ಸುಮಾರು 1.5 ಲಕ್ಷ ಹಾಗೂ ಸುಮಾರು 60,000ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಈ ಸಂಸ್ಥೆಗಳಲ್ಲಿ ಐದನೇ ತರಗತಿಯಿಂದ ಪದವಿ ಮಟ್ಟದವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಐಪಿಎಸ್ ಅಧಿಕಾರಿಯಾಗಿರುವ ಕುಮಾರ್ ತಿಳಿಸಿದ್ದಾರೆ.